ETV Bharat / bharat

ದೇಗುಲಗಳಲ್ಲಿ ಕೊರೊನಾ ಹರಡುವಿಕೆ ತಡೆಗೆ ಸ್ಪರ್ಶಮುಕ್ತ ಗಂಟೆ ರೂಪಿಸಿದ ಪ್ರಾಧ್ಯಾಪಕ

ದೇಗುಲಗಳನ್ನು ತೆರೆದ್ರೆ ವೈರಸ್​ ಹರಡುವಿಕೆ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆ ಯಾವುದೇ ಸ್ಪರ್ಶವಿಲ್ಲದೆ ಬಾರಿಸಬಹುದಾದ ಈ ಗಂಟೆ ಉಪಯುಕ್ತವಾಗಲಿದೆ..

author img

By

Published : Sep 23, 2020, 10:14 PM IST

touch-free temple bell
ಸ್ಪರ್ಶಮುಕ್ತ ಗಂಟೆ

ನಾಗ್ಪುರ(ಮಹಾರಾಷ್ಟ್ರ): ದೇಗುಲಗಳಲ್ಲಿ ಕೊರೊನಾ ವೈರಸ್​ ಹರಡುವಿಕೆ ಕಡಿಮೆ ಮಾಡಲು ಇಲ್ಲಿನ ಪ್ರಾಧ್ಯಾಪಕರೊಬ್ಬರು ಸ್ಪರ್ಶಮುಕ್ತ ಗಂಟೆಯೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

ಕೇವಲ 250 ರೂ. ವೆಚ್ಚ ಮಾಡಿ ಈ ಸ್ಪರ್ಶವಿಲ್ಲದೆ ಬಾರಿಸಬಹುದಾದ ಗಂಟೆಯನ್ನು ನಾಗ್ಪುರದ ಪ್ರಾಧ್ಯಾಪಕರಾದ ನಿಖಿಲ್ ಮಾನ್ಕರ್​ ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ದೇಗುಲಗಳಲ್ಲಿ ಕೊರೊನಾ ಹರಡುವಿಕೆ ಪ್ರಮಾಣ ತಗ್ಗಿಸಬಹುದು ಎಂದು ಮಾನ್ಕರ್​ ಹೇಳುತ್ತಾರೆ.

ಕೊರೊನಾ ಹರಡುವಿಕೆ ತಡೆಗಟ್ಟಲು ಕಳೆದ 6 ತಿಂಗಳಿಂದ ದೇಶದ ಭಾಗಶಃ ದೇವಾಲಯಗಳನ್ನು ಮುಚ್ಚಲಾಗಿದೆ. ಸದ್ಯ ದೇಶದಲ್ಲಿ ಕೋವಿಡ್​ ಪ್ರಮಾಣ ಒಂದು ಹಂತದಲ್ಲಿ ಹತೋಟಿಯಲ್ಲಿದ್ದರೂ, ವೈರಸ್​ ಹರಡುವಿಕೆ ಹೆಚ್ಚಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಹೀಗಾಗಿ, ದೇಗುಲಗಳನ್ನು ತೆರೆದ್ರೆ ವೈರಸ್​ ಹರಡುವಿಕೆ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆ ಯಾವುದೇ ಸ್ಪರ್ಶವಿಲ್ಲದೆ ಬಾರಿಸಬಹುದಾದ ಈ ಗಂಟೆ ಉಪಯುಕ್ತವಾಗಲಿದೆ ಎಂಬುದು ಮಾನ್ಕರ್ ಅಭಿಪ್ರಾಯ.

ಸ್ಪರ್ಶಮುಕ್ತ ಗಂಟೆ ಆವಿಷ್ಕಾರ

ನಾಗ್ಪುರದ ಸವ್ನೇರ್​ನಲ್ಲಿರುವ ಆದರ್ಶ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಮಾನ್ಕರ್, ಸೆನ್ಸಾರ್​ ಆಧರಿತ ಸ್ಪರ್ಶಮುಕ್ತ ಗಂಟೆಯನ್ನು ತಯಾರಿಸಿದ್ದಾರೆ. ಈ ಹಿಂದೆ ಇವರು 150 ರೂ. ವೆಚ್ಚದಲ್ಲಿ ಸ್ಯಾನಿಟೈಸರ್​ ಯಂತ್ರ ಕಂಡು ಹಿಡಿದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.