ನಾಗ್ಪುರ(ಮಹಾರಾಷ್ಟ್ರ): ಸಾಫ್ಟ್ ಲ್ಯಾಂಡಿಂಗ್ನ ಕೊನೇ ಹಂತದಲ್ಲಿ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿತಗೊಂಡಿದ್ದು ಇಸ್ರೋ ವಿಜ್ಞಾನಿಗಳಿಗೆ ಮಾತ್ರವಲ್ಲದೇ ಕೋಟ್ಯಂತರ ಭಾರತೀಯರಿಗೆ ಭಾರಿ ನಿರಾಸೆ ಮೂಡಿಸಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಾಗ್ಪುರ ಸಿಟಿ ಪೊಲೀಸ್ ಕೊಂಚ ಹಾಸ್ಯಮಯವಾಗಿ ಟ್ವೀಟ್ ಮಾಡಿರುವುದು ಸದ್ಯ ಗಮನ ಸೆಳೆಯುತ್ತಿದೆ.
'ವಿಕ್ರಮ'ನ ಸಂಪರ್ಕಕ್ಕೆ ಇಸ್ರೋ ಸರ್ವಪ್ರಯತ್ನ... ನಾಸಾದ ಸಹಾಯ ಪಡೆಯುವ ಸಾಧ್ಯತೆ
ದೇಶದಲ್ಲಿ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ ಬಳಿಕ ನಿಯಮ ಉಲ್ಲಂಘಿಸಿದ ವಾಹನ ಸವಾರರು ಭಾರಿ ಮೊತ್ತದ ದಂಡ ತೆರುತ್ತಿರುವುದು ಸುದ್ದಿಯಾಗುತ್ತಿದೆ. ನಿಯಮ ಉಲ್ಲಂಘನೆ ಮತ್ತು ವಿಕ್ರಮ್ ಲ್ಯಾಂಡರ್ ಸಿಗ್ನಲ್ ಕಡಿತವನ್ನು ಒಟ್ಟಾಗಿಸಿ ನಾಗ್ಪುರ ಸಿಟಿ ಪೊಲೀಸರು ಟ್ವೀಟ್ ಮಾಡಿದ್ದಾರೆ.
-
Dear Vikram,
— Nagpur City Police (@NagpurPolice) 9 September 2019 " class="align-text-top noRightClick twitterSection" data="
Please respond 🙏🏻.
We are not going to challan you for breaking the signals!#VikramLanderFound#ISROSpotsVikram @isro#NagpurPolice
">Dear Vikram,
— Nagpur City Police (@NagpurPolice) 9 September 2019
Please respond 🙏🏻.
We are not going to challan you for breaking the signals!#VikramLanderFound#ISROSpotsVikram @isro#NagpurPoliceDear Vikram,
— Nagpur City Police (@NagpurPolice) 9 September 2019
Please respond 🙏🏻.
We are not going to challan you for breaking the signals!#VikramLanderFound#ISROSpotsVikram @isro#NagpurPolice
"ಆತ್ಮೀಯ ವಿಕ್ರಮ್, ದಯವಿಟ್ಟು ಪ್ರತಿಕ್ರಿಯಿಸು... ಸಿಗ್ನಲ್ ಬ್ರೇಕ್ ಮಾಡಿರುವುದಕ್ಕೆ ನಾವು ಯಾವುದೇ ರೀತಿಯಲ್ಲೂ ದಂಡ ವಿಧಿಸುವುದಿಲ್ಲ" ಎಂದು ನಾಗ್ಪುರ ಸಿಟಿ ಪೊಲೀಸ್ ಟ್ವೀಟ್ ಮಾಡಿದ್ದಾರೆ. ಸದ್ಯ ಈ ಟ್ವೀಟ್ ಎಲ್ಲೆಡೆ ವೈರಲ್ ಆಗುತ್ತಿದ್ದು, ಪೊಲೀಸರ ಸಂದರ್ಭೋಚಿತ ಟ್ವೀಟ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.