ETV Bharat / bharat

ಅಮೆರಿಕ-ಭಾರತ ವ್ಯಾಪಾರ ಒಪ್ಪಂದ ವಿಳಂಬಕ್ಕೆ ಪರಸ್ಪರ ಸಮ್ಮತಿ: ಭಾರತೀಯ ಅಧಿಕಾರಿಗಳು

ಅಮೆರಿಕದ ಅಧ್ಯಕ್ಷರೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ಭದ್ರತಾ ಸಮಿತಿ ಫೆಬ್ರವರಿ 19ರಂದು 24 ಎಂ ಎಚ್–60 ಆರ್ ಹೆಲಿಕಾಪ್ಟರ್ ಖರೀದಿಗೆ ಸಮ್ಮತಿ ಸೂಚಿಸಿದೆ. ಕಳೆದ ಒಂದು ದಶಕದಲ್ಲಿ ಭಾರತ 18 ಶತಕೋಟಿ ಅಮೆರಿಕನ್ ಡಾಲರ್ ಮೊತ್ತದ ಭದ್ರತಾ ಸಾಮಗ್ರಿಗಳನ್ನು ಅಮೆರಿಕದಿಂದ ಖರೀದಿ ಮಾಡಿದೆ. ತೈಲ ಮತ್ತು ಅನಿಲ ಮಾತ್ರವಲ್ಲದೆ ಅಮೆರಿಕದೊಂದಿಗಿನ ವ್ಯಾಪಾರ ಕೊರತೆ ನೀಗಿಸಲು ಭದ್ರತಾ ಕ್ಷೇತ್ರ ಕೂಡ ಮುಖ್ಯ ಅಂಗ ಎನಿಸಿದೆ.

mutual-consent-to-delay-us-india-trade-agreement
ಅಮೆರಿಕ- ಭಾರತ ವ್ಯಾಪಾರ ಒಪ್ಪಂದ
author img

By

Published : Feb 21, 2020, 10:12 AM IST

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿಯ ಸಂದರ್ಭದಲ್ಲಿ ದೇಶದ ನೌಕಾಪಡೆಗಾಗಿ ಬಹುಪಾತ್ರ ನಿರ್ವಹಿಸಬಲ್ಲ ಹೆಲಿಕಾಪ್ಟರುಗಳ ಖರೀದಿ ಪ್ರಕ್ರಿಯೆ ಸುಗಮಗೊಂಡಿದೆ. ಆ ಮೂಲಕ ಭದ್ರತೆ ಮತ್ತು ಇಂಧನ ಕ್ಷೇತ್ರಗಳು ಮಾತುಕತೆಯ ಕೇಂದ್ರಬಿಂದು ಎನಿಸಿಕೊಂಡಿವೆ. ಅಮೆರಿಕದ ಅಧ್ಯಕ್ಷರೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ಭದ್ರತಾ ಸಮಿತಿ ಫೆಬ್ರವರಿ 19ರಂದು 24 ಎಂ ಎಚ್ – 60 ಆರ್ ಹೆಲಿಕಾಪ್ಟರ್ ಖರೀದಿಗೆ ಸಮ್ಮತಿ ಸೂಚಿಸಿದೆ. ಕಳೆದ ಒಂದು ದಶಕದಲ್ಲಿ ಭಾರತ 18 ಶತಕೋಟಿ ಅಮೆರಿಕನ್ ಡಾಲರ್ ಮೊತ್ತದ ಭದ್ರತಾ ಸಾಮಗ್ರಿಗಳನ್ನು ಅಮೆರಿಕದಿಂದ ಖರೀದಿ ಮಾಡಿದೆ. ತೈಲ ಮತ್ತು ಅನಿಲ ಮಾತ್ರವಲ್ಲದೆ ಅಮೆರಿಕದೊಂದಿಗಿನ ವ್ಯಾಪಾರ ಕೊರತೆ ನೀಗಿಸಲು ಭದ್ರತಾ ಕ್ಷೇತ್ರ ಕೂಡ ಮುಖ್ಯ ಅಂಗ ಎನಿಸಿದೆ. ಭಾರತದ ವ್ಯಾಪಾರ ಮತ್ತು ಆಮದು- ರಫ್ತು ಸುಂಕ ಅಸಮತೋಲನದಿಂದ ಕೂಡಿದ್ದು ಎರಡೂ ದೇಶಗಳಿಗೆ ನಷ್ಟ ಆಗುತ್ತಿದೆ ಎಂದು ಟ್ರಂಪ್ ಪದೇ ಪದೇ ಆರೋಪ ಮಾಡುತ್ತಿದ್ದಾರೆ. ಈ ಆರೋಪ ‘ಸರಿ ಅಲ್ಲ’ ಎಂದು ನವದೆಹಲಿ ಅಭಿಪ್ರಾಯಪಟ್ಟಿದೆ.

" ಇತರ ಅಭಿವೃದ್ಧಿಶೀಲ ರಾಷ್ಟ್ರಗಳು ವಿಧಿಸುವ ಸುಂಕಗಳಿಗಿಂತ ನಮ್ಮ ಸುಂಕಗಳು ಹೆಚ್ಚಿಲ್ಲ ಎಂಬ ನಂಬಿಕೆ ನಮ್ಮದು. ಇತರ ಅಭಿವೃದ್ಧಿಶೀಲ ದೇಶಗಳೊಂದಿಗೆ ಹೋಲಿಕೆ ಮಾಡಿಕೊಳ್ಳಬೇಕು ಎಂಬ ಅನಿವಾರ್ಯತೆ ಇಲ್ಲದಿದ್ದರೂ ನಾವು ಅಂತಹ ಮಾನದಂಡಗಳಿಗೆ ಕಟ್ಟು ಬಿದ್ದಿದ್ದೇವೆ. ಕೊರಿಯಾ, ಜಪಾನಿನಂತಹ ದೇಶಗಳು ಅನೇಕ ಕ್ಷೇತ್ರಗಳಲ್ಲಿ ನಮಗಿಂತಲೂ ಹೆಚ್ಚಿನ ಸುಂಕ ವಿಧಿಸುತ್ತವೆ “ ಎಂಬುದು ಅಧಿಕೃತ ಮೂಲವೊಂದರ ವಾದ.

ಹೈಡ್ರೋ ಕಾರ್ಬನ್ ಆಮದು ಕ್ಷೇತ್ರದಲ್ಲಿ ಕಳೆದ ಎರಡು ವರ್ಷಗಳಲ್ಲಿಯೇ ಅತ್ಯಧಿಕ 7 ಶತಕೋಟಿ ಡಾಲರಿನಷ್ಟು ಏರಿಕೆ ಆಗಿದೆ. ಅಲ್ಲದೆ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಅಮೆರಿಕ ಈಗ ಭಾರತಕ್ಕೆ ಕಚ್ಚಾತೈಲ ರಫ್ತು ಮಾಡುವ 6 ನೇ ಅತಿದೊಡ್ಡ ಮೂಲ ಆಗಿದೆ. “ಅಮೆರಿಕ ಜೊತೆಗಿನ ನಂಟು ಇಂದು ನಮ್ಮ ಅತ್ಯಂತ ಪ್ರಭಾವಶಾಲಿ ಸಂಬಂಧಗಳಲ್ಲಿ ಒಂದು. ಪರಸ್ಪರ ಹಂಚಿಕೊಂಡ ಮೌಲ್ಯಗಳ ಜೊತೆಗೆ ಇದು ರಾಜತಾಂತ್ರಿಕ ಪಾಲುದಾರಿಕೆಯ ಭಾಗ ಆಗಿದ್ದು 21ನೇ ಶತಮಾನಕ್ಕೆ ತಕ್ಕಂತೆ ಸಜ್ಜುಗೊಂಡಿದೆ. ಭಯೋತ್ಪಾದನೆ ಎದುರಿಸುವ ನಿಟ್ಟಿನಲ್ಲಿ ಅಥವಾ ಭಾರತ - ಪೆಸಿಫಿಕ್ ವಲಯವನ್ನು ಶಾಂತಿಯುತ ಮತ್ತು ಸಮೃದ್ಧವಾಗಿ ಇಡುವಲ್ಲಿ ಭಾರತ ಮತ್ತು ಅಮೆರಿಕದ ಒಮ್ಮತದ ಹಿತಾಸಕ್ತಿ ಅಭೂತಪೂರ್ವವಾದುದು “ ಎಂದು ಟ್ರಂಪ್ ಭೇಟಿ ಹಿನ್ನೆಲೆಯಲ್ಲಿ ಮಾತನಾಡಿರುವ ವಿದೇಶಾಂಗ ಕಾರ್ಯದರ್ಶಿ ಹರ್ಷ್ ಶ್ರೀಂಗ್ಲಾ ಅವರು ತಿಳಿಸಿದ್ದಾರೆ.

ಆದರೆ ಎಂಟು ತಿಂಗಳ ಸತತ ಮಾತುಕತೆಯ ಹೊರತಾಗಿಯೂ ಸರಕುಗಳ ಮೇಲಿನ ಸಣ್ಣ ವ್ಯಾಪಾರ ಒಪ್ಪಂದ ಇನ್ನೂ ಅಸ್ಪಷ್ಟವಾಗಿ ಉಳಿದಿದ್ದು ಮಾತುಕತೆಯನ್ನು ಮುಂದೂಡಲಾಗಿದೆ. ‘ಒಪ್ಪಂದ ಇಲ್ಲ’ ಅಥವಾ ‘ಒಪ್ಪಂದ ಸ್ಥಗಿತ’ ಎಂಬಂತೆ ಇದನ್ನು ಗ್ರಹಿಸಬಾರದು ಎಂದು ಸರ್ಕಾರಿ ಮೂಲಗಳು ವಾದಿಸಿದ್ದರೂ ಸಹ ಸಂದಿಗ್ಧ ಸಮಯದಲ್ಲಿ ಅತ್ಯಗತ್ಯವಾಗಿ ನಡೆಯಬೇಕಿದ್ದ ಪ್ರಕ್ರಿಯೆಯಂತೆ ಇದು ತೋರುತ್ತದೆ. ಮೂಲಗಳ ಪ್ರಕಾರ ವ್ಯಾಪಾರ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ‘ಭೇಟಿಯೊಂದರ ಕಾರಣಕ್ಕೆ ತರಾತುರಿಯಲ್ಲಿ ನಡೆಸುವಂತೆ ವ್ಯಾಪಾರ ಒಪ್ಪಂದ ಇರಬಾರದು’ ಎಂದು ಅಮೆರಿಕ ವ್ಯಾಪಾರ ಪ್ರತಿನಿಧಿ ರಾಬರ್ಟ್ ಲೈಟ್ಹಿಜರ್ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಇಬ್ಬರೂ ಒಪ್ಪಿಕೊಂಡಿದ್ದಾರೆ.

"ಅಮೆರಿಕದಂತೆ ನಾವು ಕೂಡ ಮಾರುಕಟ್ಟೆಯ ವಿಷಯದಲ್ಲಿ ಪರಸ್ಪರ ಲಾಭದಾಯಕ ಒಪ್ಪಂದ ಬಯಸುತ್ತೇವೆ. ಜಿ ಎಸ್ ಪಿ ( ಸಾಮಾನ್ಯೀಕರಿಸಿದ ಆದ್ಯತಾ ವ್ಯವಸ್ಥೆ ) ಮರುಸ್ಥಾಪನೆ ಮಾಡುವುದಕ್ಕೆ ನಾವು ಒತ್ತು ನೀಡುತ್ತಿದ್ದೇವೆ. ಜಿ ಎಸ್ ಪಿ ಎಂಬುದು ಏಕಪಕ್ಷೀಯವಾಗಿ ನೀಡಲಾಗುವ ರಿಯಾಯಿತಿ. ನಮಗೆ ರಿಯಾಯಿತಿ ಮತ್ತು ಮಾರುಕಟ್ಟೆ ಪ್ರವೇಶ ನೀಡಿ ಎಂದು ಅಮೆರಿಕದ ಮೇಲೆ ಅಧಿಕಾರ ಚಲಾಯಿಸಲು ಆಗದು. ಇದು ಏಕಪಕ್ಷೀಯವಾಗಿ ನೀಡುವಂಥದ್ದು ಮತ್ತು ಏಕಪಕ್ಷೀಯವಾಗಿ ಹಿಂತೆಗೆದುಕೊಳ್ಳುವಂಥದ್ದು. ನಾವು ಮರುಸ್ಥಾಪನೆಯನ್ನು ಎದುರು ನೋಡುತ್ತಿದ್ದೇವೆ” ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಒಪ್ಪಂದ ಹಿಂಪಡೆದ ಕಾರಣಕ್ಕೆ 2019ರಲ್ಲಿ ಜಿ ಎಸ್ ಪಿ ಅನ್ವಯ ಆಗುವ ಭಾರತದ ರಫ್ತು ವಹಿವಾಟಿನಲ್ಲಿ ಗಮನಾರ್ಹ ಪರಿಣಾಮ ಉಂಟಾಗಿಲ್ಲ ಎಂದು ಮೂಲಗಳು ಹೇಳಿವೆ. ಗೋಯಲ್‌ ಅವರ ಜೊತೆ ಮಾತುಕತೆ ಫಲಪ್ರದವಾಗಿ ನಡೆಯದೆ ಇದ್ದರೂ ಲೈಟ್ಹಿಜರ್ ಅವರು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್, ಅಧ್ಯಕ್ಷರ ಸಲಹೆಗಾರ ಮತ್ತು ಟ್ರಂಪ್ ಅವರ ಅಳಿಯ ಜೇರ್ಡ್ ಕುಶ್ನೆರ್, ಖಜಾಂಚಿ ಕಾರ್ಯದರ್ಶಿ ಮೆನೂಶಿನ್ ಅವರು ಇರುವ ನಿಯೋಗದ ಭಾಗ ಆಗಿರುವುದರಿಂದ ಈ ಮಹತ್ವದ ಭೇಟಿಯನ್ನು ತಳ್ಳಿಹಾಕುವಂತೆ ಇಲ್ಲ ಎಂದು ಮೂಲಗಳು ತಿಳಿಸಿವೆ. ಕಳೆದ ಎರಡು ವರ್ಷಗಳಲ್ಲಿ ಈ ಎರಡೂ ದೇಶಗಳ ಒಟ್ಟು ವ್ಯಾಪಾರ ಶೇ 10ರಷ್ಟು ವೃದ್ಧಿಸಿದ್ದು ಸರಕು ಮತ್ತು ಸೇವೆಗಳೆರಡರಲ್ಲೂ ಇಂದು ಭಾರತದ ಬಹುದೊಡ್ಡ ಪಾಲುದಾರ ದೇಶವಾಗಿ ಅಮೆರಿಕ ಇದೆ. 2018ರಲ್ಲಿ 142 ಶತಕೋಟಿ ಅಮೆರಿಕನ್ ಡಾಲರಿನಷ್ಟು ಇದ್ದ ದ್ವಿಪಕ್ಷೀಯ ವ್ಯಾಪಾರ ವಿನಿಮಯ ಈ ವರ್ಷ 150 ಶತಕೋಟಿ ಡಾಲರ್ ತಲುಪುವ ನಿರೀಕ್ಷೆ ಇದೆ.

ದೊಡ್ಡ ಘೋಷಣೆಗಳನ್ನೇನೂ ಮಾಡಿಲ್ಲ ಮತ್ತು ಕೇವಲ 36 ಗಂಟೆಗಳನ್ನು ಮೀಸಲಿಟ್ಟು 3 ನಗರಗಳಿಗೆ ಮಾತ್ರ ಟ್ರಂಪ್ ಭೇಟಿ ನೀಡುತ್ತಿದ್ದಾರೆ ಎಂಬ ವ್ಯಾಪಕ ಟೀಕೆಯ ನಡುವೆಯೇ ನವದೆಹಲಿ ‘ಪ್ರಬುದ್ಧ’ ರಾಜತಾಂತ್ರಿಕ ಪಾಲುದಾರಿಕೆಗೆ ಒತ್ತು ನೀಡುತ್ತಿದೆ. ಫೆಬ್ರವರಿ 24 ರಂದು ಅಹಮದಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊಟೆರಾದ ನೂತನ ಕ್ರಿಕೆಟ್ ಕ್ರೀಡಾಂಗಣದ ತನಕ ಒಟ್ಟು 22 ಕಿ. ಮೀ ದೂರ ಏರ್ಪಾಟಾಗಿರುವ ರೋಡ್ ಶೋದಲ್ಲಿ ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಅವರೊಂದಿಗೆ ಟ್ರಂಪ್ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ಮೋದಿ ಅವರೊಂದಿಗೆ ಭಾರಿ ಜನಸ್ತೋಮ ದಂಪತಿಗಳನ್ನು ಸ್ವಾಗತಿಸಲಿದ್ದು ವಿವಿಧ ರಾಜ್ಯಗಳ ಚಿತ್ರಣ ನೀಡುವ 28 ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ದಾರಿಯುದ್ದಕ್ಕೂ ಕಲಾವಿದರು ಮಹಾತ್ಮ ಗಾಂಧಿ ಜೀವನ ಮತ್ತು ಪರಂಪರೆ ಸಾರುವ ಪ್ರದರ್ಶನ ನೀಡಲಿದ್ದಾರೆ.

ಕಳೆದ ಎಂಟು ತಿಂಗಳಲ್ಲಿ ಟ್ರಂಪ್ ಮತ್ತು ಮೋದಿ ನಡುವೆ ನಡೆಯುತ್ತಿರುವ ಈ ಐದನೇ ಭೇಟಿ ದ್ವಿಪಕ್ಷೀಯ ಸಂಬಂಧ ನವೀಕರಣಗೊಂಡಿರುವುದಕ್ಕೆ ಸಾಕ್ಷಿ ಆಗಿದೆ. ‘ ಒಪ್ಪಂದಗಳಲ್ಲಿ ಪ್ರಗತಿ ’ ಉಂಟಾಗಿದೆ ಎಂಬುದನ್ನು ತೋರಿಸಲು ಎರಡೂ ಕಡೆಯವರು ಶ್ರಮಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. “ಭಾರತ ಎಂಬ ಉದಯೋನ್ಮುಖ ಶಕ್ತಿ ವ್ಯವಹಾರದ ಸ್ವರೂಪವನ್ನು ನೆಚ್ಚಿಕೊಂಡು ಇರಬೇಕಿಲ್ಲ. ಪ್ರತಿ ಭೇಟಿಯಲ್ಲಿಯೂ ದೊಡ್ಡ ಘೋಷಣೆಗಳನ್ನು ಮಾಡಬೇಕು ಎಂದೇನೂ ಇಲ್ಲ. ಇಂತಹ ಭೇಟಿಗಳಲ್ಲಿಯೇ ಶೃಂಗಸಭೆ ಮಟ್ಟದ ಒಪ್ಪಂದ ಏರ್ಪಾಟು ಮಾಡುವಷ್ಟು ಅಮೆರಿಕ ಪ್ರಬುದ್ಧವಾಗಿದೆ” ಎಂದು ಸರ್ಕಾರಿ ಮೂಲಗಳು ಒತ್ತಿ ಹೇಳುತ್ತಿವೆ.

"ಮಾತುಕತೆ ಸಮಗ್ರವಾಗಿ ಇರಲಿದ್ದು ರಕ್ಷಣೆ, ಭದ್ರತೆ, ಭಯೋತ್ಪಾದನೆ ನಿಗ್ರಹದಂತಹ ಕ್ಷೇತ್ರಗಳಲ್ಲಿ ನಮ್ಮ ರಾಜತಾಂತ್ರಿಕ ಪಾಲುದಾರಿಕೆಗೆ ಸಂಬಂಧಿಸಿದ ಸಂಗತಿಗಳ ಜೊತೆಗೆ ವ್ಯಾಪಾರ, ಇಂಧನ, ಜನರಿಂದ ಜನರಿಗೆ ವಿನಿಮಯ ಹಾಗೂ ಇತರೆ ದ್ವಿಪಕ್ಷೀಯ ವಿಷಯಗಳನ್ನು ಕೂಡ ಒಳಗೊಂಡಿದೆ. ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತ ಪರಸ್ಪರ ಹಿತಾಸಕ್ತಿಗಳನ್ನು ಹಂಚಿಕೊಳ್ಳಲಾಗುತ್ತದೆ” ಎಂದು ಫೆ. 19ರಂದು ವಿದೇಶಾಂಗ ಕಾರ್ಯದರ್ಶಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೋದಿ- ಟ್ರಂಪ್ ಮಾತುಕತೆ ಮಧ್ಯೆ ಕಾಶ್ಮೀರ ಸಮಸ್ಯೆ ಇಣುಕದು- ಮೂಲಗಳು

ಟ್ರಂಪ್ ಅವರ ಪ್ರಥಮ ಭೇಟಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಂತೆ ಕಾಶ್ಮೀರ, ಸಿ ಎ ಎ ಹಾಗೂ ಎನ್‌ ಆರ್‌ ಸಿಗೆ ಸಂಬಂಧಿಸಿದ ವಿವಾದಗಳು ಮಾತುಕತೆಯ ಮೇಲೆ ಪರಿಣಾಮ ಬೀರದು ಎಂಬ ಆಶಾವಾದ ನವದೆಹಲಿಯದ್ದು. ಸರ್ಕಾರಿ ಅಧಿಕಾರಿಗಳು ಹೇಳಿಕೊಂಡಿರುವಂತೆ 370 ನೇ ವಿಧಿ ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಿಸಲಾದ ‘ಬಹುತೇಕ ನಿರ್ಬಂಧಗಳನ್ನು’ ಈಗ ತೆಗೆದುಹಾಕಲಾಗಿದೆ ಅಲ್ಲದೆ ಅಮೆರಿಕದ ಭಾರತೀಯ ರಾಯಭಾರಿ ಕೆನ್ನೆತ್ ಜಸ್ಟರ್ ಅವರು ಇತರೆ ರಾಜತಂತ್ರಜ್ಞರ ಜೊತೆಗೂಡಿ ಕಾಶ್ಮೀರ ಕಣಿವೆಗೆ ಭೇಟಿ ನೀಡಿದ್ದಾರೆ. ಕಾಶ್ಮೀರ ಸಮಸ್ಯೆ ಭಾರತ ಮತ್ತು ಪಾಕಿಸ್ತಾನ ಮಾತ್ರ ಬಗೆಹರಿಸಿಕೊಳ್ಳಬೇಕಾದ ಸಂಗತಿ ಎಂಬುದಾಗಿ ಅಮೆರಿಕದ ವಿವಿಧ ಪ್ರಕಟಣೆಗಳ ಸಾರಾಂಶದಿಂದ ವೇದ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಇದು ಅಮೆರಿಕ- ಭಾರತ ಮಾತುಕತೆ ನಡುವೆ ಮಹತ್ವದ ಸಂಗತಿ ಆಗದು ಎಂದಿದ್ದಾರೆ. “ಕಾಶ್ಮೀರದಲ್ಲಿ ಮಧ್ಯಸ್ಥಿಕೆ ಎರಡೂ ದೇಶಗಳ ಸಮ್ಮತಿಯನ್ನು ಅವಲಂಬಿಸಿದೆ ಎಂದು ಟ್ರಂಪ್ ಅನೇಕ ಸಂದರ್ಭಗಳಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಮಧ್ಯಸ್ಥಿಕೆ ಸ್ವೀಕಾರಾರ್ಹ ಅಲ್ಲ ಎಂದು ನಾವು ಮತ್ತೆ ಮತ್ತೆ ಹೇಳಿದ್ದೇವೆ. ಆದ್ದರಿಂದ ಇದು ಷರತ್ತುಬದ್ಧ ಪ್ರಸ್ತಾಪ ಆಗಿದ್ದು ಗಂಭೀರವಾದದಲ್ಲ. ಮಧ್ಯಸ್ಥಿಕೆ ವಹಿಸಬೇಕು ಎಂಬ ನಿಲುವು ಕೆಲವರ ಒಳಗೆ ಮಾತ್ರ ಚಿಗುರಿದೆ. ನಮ್ಮ ಯಾವುದೇ ಮಾತುಕತೆಯಲ್ಲಿ ಅದು ಪ್ರಸ್ತಾಪವಾಗುತ್ತದೆ ಎಂದು ಅವರು ಭಾವಿಸಬಾರದು“ ಎಂಬುದಾಗಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹಿಂದಿನ ಸಂದರ್ಭಗಳಲ್ಲಿ ಟ್ರಂಪ್‌ ಮಧ್ಯಸ್ಥಿಕೆ ಕುರಿತು ಪ್ರಸ್ತಾಪಿಸಿದ್ದನ್ನು ಮತ್ತು ಅವರು ಭಾರತಕ್ಕೆ ಭೇಟಿ ನೀಡಿದಾಗ ಕಾಶ್ಮೀರ ಕುರಿತು ಅನಿರೀಕ್ಷಿತ ಟೀಕೆ ಮಾಡಿದ್ದನ್ನು ಕುರಿತು ಕೇಳಲಾದ ಪ್ರಶ್ನೆಗೆ ಅಧಿಕಾರಿ ಮೇಲಿನಂತೆ ಉತ್ತರಿಸಿದ್ದಾರೆ.

ಭಾರತ ಮತ್ತು ಸುತ್ತಲಿನ ಪ್ರದೇಶದ ಮೇಲೆ ಪ್ರಭಾವ ಬೀರಲಿರುವ- ಚುನಾವಣೆ ಮೂಲಕ ಅಧ್ಯಕ್ಷರನ್ನು ಘೋಷಣೆ ಮಾಡಿದ ನಂತರ ಆಫ್ಘಾನಿಸ್ತಾನದ ಪರಿಸ್ಥಿತಿ, ಅಮೆರಿಕ- ತಾಲಿಬಾನ್ ಶಾಂತಿ ಮಾತುಕತೆ ಸಹ ಮೋದಿ- ಟ್ರಂಪ್ ಅವರ ಔಪಚಾರಿಕ ಮಾತುಕತೆ ನಡುವೆ, ಚರ್ಚೆ ಆಗಲಿವೆ ಎಂದು ತಿಳಿದು ಬಂದಿದೆ. ‘ಭಯೋತ್ಪಾದನೆ ಕುರಿತಂತೆ ಪಾಕಿಸ್ತಾನದ ಜೊತೆ ಮರುಹೊಂದಾಣಿಕೆಯ ಲಕ್ಷಣಗಳನ್ನು ಕಾಣದ’ ಎರಡೂ ಪ್ರಜಾಸತ್ತಾತ್ಮಕ ದೇಶಗಳು ಉಗ್ರರ ನಿಗ್ರಹ ಮತ್ತು ಭದ್ರತೆಗೆ ಸಂಬಂಧ ಪಟ್ಟಂತೆ ಅಮೆರಿಕದ ಜೊತೆ ಸಹಕಾರ ಬಯಸುತ್ತಿವೆ ಎಂದು ಮೂಲಗಳು ತಿಳಿಸಿವೆ. " ಭಯೋತ್ಪಾದನೆ ವಿಚಾರಕ್ಕೆ ಬಂದಾಗ ಅಮೆರಿಕ ಸ್ಥಿರ ಮತ್ತು ಕಟು ಧೋರಣೆ ಅನುಸರಿಸುತ್ತದೆ. ಪುಲ್ವಾಮಾ ಘಟನೆ ನಂತರ ಭಾರತ ಕೈಗೊಂಡ ಕ್ರಮಗಳನ್ನು ಅಮೆರಿಕ ಬಲವಾಗಿ ಬೆಂಬಲಿಸಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1267 ರ ನಿಯಮದ ಅಡಿ ಮಸೂದ್ ಅಜರನನ್ನು ಪಟ್ಟಿ ಮಾಡುವ ವಿಚಾರ ಬಂದಾಗ ಅದು ಪೂರ್ಣಗೊಂಡಿತೆ ಎಂದು ಖಾತ್ರಿ ಪಡಿಸಿಕೊಳ್ಳಲು ಅಮೆರಿಕ ಮುತುವರ್ಜಿ ವಹಿಸಿತ್ತು. ಭಯೋತ್ಪಾದನೆ ನಿಗ್ರಹ ಮತ್ತು ಸಾಂಘಿಕತೆ ವಿಚಾರವಾಗಿ ಚರ್ಚಿಸಲು ಎಲ್ಲಾ ಹಂತಗಳಲ್ಲಿ ಅಮೆರಿಕ ನಮಗೆ ವ್ಯಾಪಕ ಸಹಕಾರ ನೀಡಿದೆ. ನಾವು ಸದಾ ಭಾವಿಸುವಂತೆ ಇದು ನಮ್ಮ ರಾಜತಾಂತ್ರಿಕ ಸಹಭಾಗಿತ್ವದ ಪ್ರಬಲ ವಲಯ’ ಎಂದು ಅಧಿಕಾರಿಯೊಬ್ಬರು ಗುರುತಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.