ಪಣಜಿ: ಮುಸ್ಲಿಮರು ಇಫ್ತಾರ್ ಕೂಟಗಳನ್ನು ಆಯೋಜಿಸಬೇಡಿ, ಬದಲಾಗಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಸಿಬ್ಬಂದಿ, ಪೊಲೀಸರು ಸೇರಿದಂತೆ ಕೊರೊನಾ ವಾರಿಯರ್ಸ್ಗಾಗಿ ಪ್ರಾರ್ಥಿಸಿ ಎಂದು ಗೋವಾ ಮುಸ್ಲಿಂ ಜಮಾತ್‌ಗಳ ಸಂಘಟನೆ ತಿಳಿಸಿದೆ.
ರಂಜಾನ್ಗೂ ಮೊದಲು ಕೆಲ ಸಲಹೆಯನ್ನು ಹೊರಡಿಸಿರುವ ಮುಸ್ಲಿಂ ಜಮಾತ್‌ಗಳ ಸಂಘಟನೆ ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮನೆಯಿಂದ ಹೊರ ಬಾರದೆ, ಸಾಮಾಜಿಕ ಅಂತರವನ್ನು ಅನುಸರಿಸಬೇಕು ಎಂದು ಸಮುದಾಯದ ಜನರನ್ನು ಒತ್ತಾಯಿಸಿದೆ.
'ಗೋವಾ ರಾಜ್ಯದಾದ್ಯಂತ ಯಾವುದೇ ಮಸೀದಿಗಳಲ್ಲಿ ಇಫ್ತಾರ್ ನಡೆಯಬಾರದು. ಸಂಬಂಧಿಕರು ಮತ್ತು ಇತರರಿಗಾಗಿ ಮನೆಯಲ್ಲಿ ಅಥವಾ ನೆರೆಹೊರೆಯ ಸ್ಥಳಗಳಲ್ಲಿ ಇಫ್ತಾರ್ ಕೂಟಗಳನ್ನು ಆಯೋಜಿಸಬೇಡಿ' ಎಂದು ಹೇಳಿದೆ.
ಇಂತಾ ಸಮಯದಲ್ಲಿ ಇಡೀ ಸಮುದಾಯ, ನಮ್ಮ ರಾಷ್ಟ್ರ, ವೈದ್ಯರು, ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರು, ಪೊಲೀಸರು ಮತ್ತು ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ತೊಡಗಿರುವವರಿಗಾಗಿ ಪ್ರಾರ್ಥಿಸಿ ಎಂದು ಹೇಳಿದೆ.