ETV Bharat / bharat

ಮುಂಬೈ ದಾಳಿಯ ಕರಾಳ ದಿನಕ್ಕೆ 12 ವರ್ಷ: ಘೋರ ಅಧ್ಯಾಯದ ಸಂಕ್ಷಿಪ್ತ ನೋಟ

author img

By

Published : Nov 26, 2020, 7:07 AM IST

Updated : Nov 26, 2020, 7:30 AM IST

2008ರಲ್ಲಿ ಸಂಭವಿಸಿದ್ದ ಮುಂಬೈ ಉಗ್ರರ ದಾಳಿ ಭಾರತೀಯ ಇತಿಹಾಸ ಪುಟದಲ್ಲಿ ಮರೆಯಲಾಗದ ಕಹಿ ಘಟನೆಯಾಗಿ ಅಚ್ಚಾಗಿದೆ. 160 ಅಮಾಯಕರ ಬಲಿ ಪಡೆದಿದ್ದ ಉಗ್ರರು ಮುಂಬೈ ನಗರಿಯನ್ನು 4 ದಿನಗಳ ಕಾಲ ಅಕ್ಷರಶಃ ನರಕ ಮಾಡಿದ್ದರು. 18 ಮಂದಿ ಭದ್ರತಾ ಪಡೆಯ ಸಿಬ್ಬಂದಿ ಕಾರ್ಯಾಚರಣೆ ವೇಳೆ ಹುತಾತ್ಮರಾಗಿದ್ದರು. ಆ ಕರಾಳ ದಿನಕ್ಕಿಂದು 12 ವರ್ಷ ತುಂಬಿದೆ.

mumbai-police-to-pay-homage-to-martyrs-on-12th-anniversary-of-26-slash-11-attacks
ಮುಂಬೈ ದಾಳಿಯ ಕರಾಳ ದಿನಕ್ಕೆ 12 ವರ್ಷ

ಮುಂಬೈ: ಭಾರತ ನೆಲದೊಳಗೆ ನಡೆದ ಭೀಕರ ಉಗ್ರರ ಅಟ್ಟಹಾಸದಲ್ಲಿ ಮುಂಬೈ ತಾಜ್​​​​​ ಹೋಟೆಲ್​ ಮೇಲೆ ನಡೆದಿದ್ದ ಘಟನೆ ಘೋರ ಅಧ್ಯಾಯವಾಗಿ ಉಳಿದು ಬಿಟ್ಟಿದೆ. ಘಟನೆ ನಡೆದು ಇಂದಿಗೆ 12 ವರ್ಷ ಕಳೆದರೂ ಅದರ ಭೀಕರತೆ ಮಾತ್ರ ಇನ್ನೂ ಕಣ್ಣ ಮುಂದೆಯೇ ಇದೆ.

ಇಂದಿನಿಂದ ಸರಿಯಾಗಿ 12 ವರ್ಷದ ಹಿಂದೆ 2008ರ ನವೆಂಬರ್​​ 26ರ ರಾತ್ರಿ ವೇಳೆಗೆ ಮುಂಬೈ ನಡುಗಿ ಹೋಗಿತ್ತು. ಕೈಯಲ್ಲಿ ಮುದ್ದುಗುಂಡು, ಬಂದೂಕು ಹಿಡಿದಿದ್ದ 10 ಮಂದಿ ಲಷ್ಕರ್-ಎ-ತೋಯ್ಬಾ ಸಂಘಟನೆಯ ಉಗ್ರರು ವಾಣಿಜ್ಯ ನಗರಿಯ ರಕ್ತದೋಕುಳಿಗೆ ಸಮುದ್ರ ದಾಟಿ ಬಂದಿದ್ದರು.

ಈ ವೇಳೆ ದಾರಿಯಲ್ಲಿ ಸಿಕ್ಕವರಿಗೆಲ್ಲ ಗುಂಡು ಹಾರಿಸಿದ್ದ ಭಯೋತ್ಪಾದಕರು 166 ಮಂದಿಯ ಜೀವ ತೆಗೆದಿದ್ದರು. ಅಲ್ಲದೆ ಘಟನೆಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದರು.

ಈ ಕಹಿ ಘಟನೆಯ ಹಿನ್ನೆಲೆ ಮುಂಬೈ ಪೊಲೀಸರು ಘಟನೆಯಲ್ಲಿ ಮಡಿದವರಿಗಾಗಿ ಶ್ರದ್ಧಾಂಜಲಿ ಅರ್ಪಿಸುತ್ತಾ ಬಂದಿದೆ. ಇಂದು ಸಹ ಈ ಕಾರ್ಯಕ್ರಮ ಜರುಗಲಿದ್ದು, ಸೀಮಿತ ಜನರಿಗೆ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿದೆ.

ಸಮಾರಂಭವು ದಕ್ಷಿಣ ಮುಂಬೈನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪೊಲೀಸ್ ಪ್ರಧಾನ ಕಚೇರಿ ಸ್ಮಾರಕದಲ್ಲಿ ಜರುಗಲಿದೆ. ಇದರಲ್ಲಿ ಹುತಾತ್ಮರಾದ ಪೊಲೀಸ್​​ ಕುಟುಂಬಸ್ಥರು ಮತ್ತು ಭದ್ರತಾ ಸಿಬ್ಬಂದಿ ಭಾಗಿಯಾಗಲಿದ್ದಾರೆ.

ಈ ವೇಳೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ, ಸಿಎಂ ಉದ್ಧವ್ ಠಾಕ್ರೆ, ಗೃಹ ಸಚಿವ ಅನಿಲ್ ದೇಶಮುಖ್, ಡಿಜಿಪಿ ಸುಬೋದ್ ಕುಮಾರ್​ ಜೈಸ್ವಾಲ್, ನಗರ ಪೊಲೀಸ್ ವರಿಷ್ಠಾಧಿಕಾರಿ ಪರಮ್ ಬಿರ್ ಸಿಂಗ್ ಹಾಗೂ ಇತರೆ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

9 ಉಗ್ರರು ಬಲಿ, ಕಸಬ್ ಸೆರೆ

ಮುಂಬೈ ಮಹಾನಗರ ತಲುಪಿದ್ದ 10 ಮಂದಿ ಉಗ್ರರು ಸಿಕ್ಕಸಿಕ್ಕವರಿಗೆ ಗುಂಡು ಹಾರಿಸಿ ಅಟ್ಟಹಾಸ ಮೆರೆದಿದ್ದರು. ಮೊದಲಿಗೆ ಇಲ್ಲಿನ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಉಗ್ರರು. ರೈಲು ಬರುವುದನ್ನೇ ಕಾದಿದ್ದ ಪ್ರಯಾಣಿಕರ ಮೇಲೆ ಏಕಾಏಕಿ ಗುಂಡಿನ ಮಳೆಗರೆದಿದ್ದರು.

ಇದಾದ ಬಳಿಕ ನಾರಿಮನ್ ಹೌಸ್ ಕಾಂಪ್ಲೆಕ್ಸ್​ ತಲುಪಿದ್ದ ಉಗ್ರರು ಅಲ್ಲಿಯೂ ಮನಸೋಯಿಚ್ಛೆ ಅಮಾಯಕರ ಬಲಿ ಪಡೆದರು. ಮೂರನೆಯದಾಗಿ ಲಿಯೋಪೋಲ್ಡ್​ ಕೆಫೆಗೆ ನುಗ್ಗಿ ಹಲವರನ್ನು ಬಲಿ ಪಡೆದಿದ್ದರು. ಇದಾದ ಬಳಿಕ ಮುಂಬೈನ ಹೃದಯ ಭಾಗದಲ್ಲಿನ ತಾಜ್ ಹೋಟೆಲ್​​​ನಲ್ಲಿ ಅಡಗಿ ಕುಳಿತಿದ್ದ ರಾಕ್ಷಸರು ಅಲ್ಲಿದ್ದ ನಾಗರಿಕರ ಮೇಲೆ ದಾಳಿ ಮಾಡಿದ್ದರು.

ನಾಲ್ಕು ದಿನಗಳ ಕಾಲ ಹೋಟೆಲ್​​ನಲ್ಲಿದ್ದ ಉಗ್ರರು, ಭದ್ರತಾ ಪಡೆಯ 18 ಯೋಧರನ್ನು ಬಲಿ ಪಡೆದಿದ್ದರು. ಆದರೆ ಒಟ್ಟು 10 ಮಂದಿ ಉಗ್ರರನ್ನು ಹತ್ಯೆ ಮಾಡಿದ್ದ ಭದ್ರತಾ ಪಡೆ ಉಗ್ರ ಅಜ್ಮಲ್ ಕಸಬ್​​ನನ್ನು ಜೀವಂತವಾಗಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಅಜ್ಮಲ್ ಅಮಿರ್ ಕಸಬ್​ನನ್ನು ನವೆಂಬರ್ 21, 2012ರಲ್ಲಿ ಪುಣೆಯ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಗಿತ್ತು.

Last Updated : Nov 26, 2020, 7:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.