ಮುಂಬೈ: ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ ಮೇಲೆ ಉಗುಳಿ ದುರ್ವರ್ತನೆ ತೋರಿದ 23 ವರ್ಷ ವಯಸ್ಸಿನ ಯುವಕನ್ನು ಪೊಲೀಸರು ಬಂಧಿಸಿರುವ ಘಟನೆ ಕಲಿನಾ ಪ್ರದೇಶದ ಮಣಿಪುರದಲ್ಲಿ ನಡೆದಿದೆ.
ಕುರ್ಲಾ ನಿವಾಸಿ ಮಹಮ್ಮದ್ ಅಮೀರ್ ಮಹಮ್ಮದ್ ಇಲಿಸಾ ಬಂಧಿತ ಆರೋಪಿ. ದೂರುದಾರ ಮಹಿಳೆ ತನ್ನ ಸಹೋದರಿ ಜೊತೆ ದಿನಸಿ ಸಾಮಾನು ಖರೀದಿಗೆಂದು ಅಂಗಡಿಗೆ ತೆರಳಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಆರೋಪಿ, ಮಹಿಳೆ ಧರಿಸಿದ್ದ ಮಾಸ್ಕ್ ಕಿತ್ತು ಆಕೆಯ ಮೇಲೆ ಉಗುಳಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಆತನ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 270 ಮತ್ತು 352ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ, ಇಂತಹ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಸಿದೆ. ಅಲ್ಲದೇ ಸಾಮಾಜಿಕ ಕಾರ್ಯಕರ್ತೆ ಲಿಂಡಾ ನ್ಯೂಮೈ ಘಟನೆ ಕುರಿತು ಟ್ವೀಟ್ ಮಾಡಿದ್ದು, ಇದರ ಬೆನ್ನಲ್ಲೇ ಮುಂಬೈ ಪೊಲೀಸರು ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.