ETV Bharat / bharat

ಮುಂಬೈನಲ್ಲಿ ಮೆಟ್ರೋ ಸೇವೆ ಪುನರಾರಂಭ

ಬರೋಬ್ಬರಿ 7 ತಿಂಗಳುಗಳ ಬಳಿಕ ಮುಂಬೈನ ಮೆಟ್ರೋ ರೈಲು ಸೇವೆ ಸಕಲ ಕೋವಿಡ್​ ಮಾರ್ಗಸೂಚಿಗಳೊಂದಿಗೆ ಪುನರಾರಂಭಗೊಂಡಿದೆ.

Mumbai Metro resumes operations
ಮೆಟ್ರೋ
author img

By

Published : Oct 19, 2020, 3:32 PM IST

ಮುಂಬೈ: ಕೋವಿಡ್​ ಲಾಕ್​ಡೌನ್​ನಿಂದಾಗಿ ಮಾರ್ಚ್​ನಿಂದ ಸ್ಥಗಿತಗೊಂಡಿದ್ದ ಮಹಾರಾಷ್ಟ್ರದ ಮುಂಬೈನ ಮೆಟ್ರೋ ರೈಲು ಸೇವೆ ಏಳು ತಿಂಗಳುಗಳ ಬಳಿಕ ಇಂದಿನಿಂದ ಪುನರಾರಂಭಗೊಂಡಿದೆ.

ಪ್ರತಿ ನಿಲ್ದಾಣದ ಪ್ರವೇಶ ದ್ವಾರಗಳಲ್ಲಿ ಥರ್ಮಲ್​​​ ಸ್ಕ್ಯಾನರ್ಸ್​​, ರೈಲುಗಳಲ್ಲಿ ​ಸ್ಯಾನಿಟೈಜರ್‌ ಸೇರಿದಂತೆ ಸಕಲ ಕೋವಿಡ್​ ಮಾರ್ಗಸೂಚಿಗಳೊಂದಿಗೆ, ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಮೆಟ್ರೋ ಆಡಳಿತ ಸೇವೆ ಆರಂಭಿಸಿದೆ.

ಬೆಳಗ್ಗೆ 8.30 ರಿಂದ ರಾತ್ರಿ 8.30ರ ವರೆಗೆ ಮಾತ್ರ ಮೆಟ್ರೋ ರೈಲು ಸಂಚರಿಸಲಿದೆ. ಪ್ರಯಾಣಿಕರು ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಮಕ್ಕಳು ಹಾಗೂ ವೃದ್ಧರು ಮೆಟ್ರೋಗಳಲ್ಲಿ ಪ್ರಯಾಣ ಮಾಡದಂತೆ ಸಲಹೆ ನೀಡಲಾಗಿದೆ. ಪ್ರಯಾಣಿಕರ ಸಂಖ್ಯೆಯನ್ನು ಕೂಡ ಇಳಿಸಲಾಗಿದೆ.

ಮಾರ್ಚ್​ 22 ರಿಂದ ಸ್ಥಗಿತಗೊಂಡಿದ್ದ ಮುಂಬೈನ ಮೋನೊ ರೈಲು ಸೇವೆ ಕೂಡ ನಿನ್ನೆಯಿಂದ ಪುನರಾರಂಭಗೊಂಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.