ಮುಂಬೈ (ಮಹಾರಾಷ್ಟ್ರ): ಎರಡು ದಿನಗಳ ಹಿಂದೆ ಮುಂಬೈನ ಸಿಟಿ ಸೆಂಟರ್ ಮಾಲ್‌ನಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಇನ್ನೂ ಕೂಡ ತಣಿದಿಲ್ಲ. ಬದಲಾಗಿ ಬೆಂಕಿಯ ಕೆನ್ನಾಲಿಗೆ ಹೆಚ್ಚುತ್ತಿದೆ.
ಅಕ್ಟೋಬರ್ 22ರ ರಾತ್ರಿ 8.50ರ ಸುಮಾರಿಗೆ ನಾಗಪಾಡಾದಲ್ಲಿನ ಸಿಟಿ ಸೆಂಟರ್ ಮಾಲ್‌ನಲ್ಲಿ ಭಾರೀ ಪ್ರಮಾಣದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಸ್ಥಳಕ್ಕೆ 18 ಅಗ್ನಿಶಾಮಕ ವಾಹನಗಳು, 10 ಟ್ಯಾಂಕರ್ಗಳು ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ತೊಡಗಿದ್ದಾರೆ. ಆದರೆ 37 ಗಂಟೆಗಳು ಕಳೆದರೂ ಸಹ ಬೆಂಕಿ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ. ಬೆಂಕಿಯ ಪ್ರಮಾಣ ಹಂತ ಒಂದರಿಂದ ಹಂತ-5ಕ್ಕೆ ಏರಿಕೆಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮಾಲ್ ಸುತ್ತಮುತ್ತಲಿನ ಸುಮಾರು 3,500 ಜನರನ್ನು ಸ್ಥಳಾಂತರಿಸಲಾಗಿದೆ.