ಮುಂಬೈ: ಇಲ್ಲಿನ ಕುರ್ಲಾ ರೈಲ್ವೆ ನಿಲ್ದಾಣ ಪ್ರವೇಶಿಸಿದ ಸ್ಥಳೀಯ ಟ್ರೈನ್ವೊಂದು ಹಳಿ ತಪ್ಪಿದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿತು. ಇದರಿಂದ ಮುಂಬೈನಲ್ಲಿ ಸಂಚರಿಸುವ 50 ಸ್ಥಳೀಯ ರೈಲುಗಳು ರದ್ದಾದ ಘಟನೆಯೂ ನಡೆದಿದೆ.
ನಿನ್ನೆ ರಾತ್ರಿ 8:52ಕ್ಕೆ ಕುರ್ಲಾ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ ನಂ3ಕ್ಕೆ ಬಂದ ಕಲ್ಯಾಣ್-116 ರೈಲು ಹಳಿತಪ್ಪಿತು. ಇದಕ್ಕೂ ಮುನ್ನ ಮಹಿಳಾ ಬೋಗಿಯಲ್ಲಿ ಶಾರ್ಟ್ಸರ್ಕ್ಯೂಟ್ ಸಂಭವಿಸಿ, ನಿಧಾನವಾಗಿ ರೈಲು ಚಲಿಸುತ್ತಾ ಬಂದಿದೆ. ಈ ಬಗ್ಗೆ ಕೆಲ ಮಹಿಳೆಯರು ರೈಲ್ವೆ ನಿಲ್ದಾಣದ ಅಧಿಕಾರಿಗಳ ಗಮನಕ್ಕೂ ತಂದಿದ್ದರು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
-
Earlier #visuals from the spot: A coach of a Mumbai local train derailed at Kurla Railway Station at 8:52 pm y'day; restoration was done later & train moved. Sanjay Kumar Jain, DRM of Central Railway's Mumbai Division says, "safety officers arrived. They'll conduct an inquiry" pic.twitter.com/QtQGW5eQtD
— ANI (@ANI) May 26, 2019 " class="align-text-top noRightClick twitterSection" data="
">Earlier #visuals from the spot: A coach of a Mumbai local train derailed at Kurla Railway Station at 8:52 pm y'day; restoration was done later & train moved. Sanjay Kumar Jain, DRM of Central Railway's Mumbai Division says, "safety officers arrived. They'll conduct an inquiry" pic.twitter.com/QtQGW5eQtD
— ANI (@ANI) May 26, 2019Earlier #visuals from the spot: A coach of a Mumbai local train derailed at Kurla Railway Station at 8:52 pm y'day; restoration was done later & train moved. Sanjay Kumar Jain, DRM of Central Railway's Mumbai Division says, "safety officers arrived. They'll conduct an inquiry" pic.twitter.com/QtQGW5eQtD
— ANI (@ANI) May 26, 2019
ಇಲಾಖೆಯ ಪಿಆರ್ಒ ಸುನಿಲ್ ಉದಾಸಿ ನೀಡಿರುವ ಮಾಹಿತಿಯಂತೆ, ರೈಲಿನ ಐದನೇ ಬೋಗಿ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಹಳಿ ತಪ್ಪಿದೆ. ಈ ವೇಳೆ ರೈಲಿನ ಚಕ್ರ ಹಾಗೂ ಹಳಿಗೆ ಹಾನಿಯಾಗಿದೆ. ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಹಲವು ಗಂಟೆಗಳ ನಂತರ ದುರಸ್ತಿ ಕಾರ್ಯ ಮುಗಿದಿದ್ದು, ರೈಲು ಮುಂದೆ ಚಲಿಸಿದೆ.