ಮುಂಬೈ: ಟಾಟಾ ಸೇರಿದಂತೆ ಇತರ ಕಂಪನಿಗಳು ವಿದ್ಯುತ್ ಪೂರೈಸಲು ವಿಫಲವಾದ ಹಿನ್ನೆಲೆ ದೇಶದ ವಾಣಿಜ್ಯ ನಗರಿ ಮುಂಬೈನಾದ್ಯಂತ ವಿದ್ಯುತ್ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ ಇಲಾಖೆ (BEST) ಮಾಹಿತಿ ನೀಡಿದೆ.
ವಿದ್ಯುತ್ ಪೂರೈಸುವಲ್ಲಿ ತಮ್ಮ ವೈಫಲ್ಯವನ್ನು ಒಪ್ಪಿಕೊಂಡಿರುವ ಟಾಟಾ, ಮಹಾವಿತರನ್, ಅದಾನಿ ಹಾಗೂ ಬೆಸ್ಟ್ (BEST) ವಿದ್ಯುತ್ ಕಂಪನಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿವೆ. ವಿದ್ಯುತ್ ಸರಬರಾಜನ್ನು ಶೀಘ್ರದಲ್ಲೇ ಮರುಸ್ಥಾಪಿಸಲು ಸಕಲ ಪ್ರಯತ್ನಗಳು ನಡೆಯುತ್ತಿವೆ ಎಂದು ಇಂಧನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ವಿದ್ಯುತ್ ಕಡಿತವಾಗಿದ್ದರಿಂದ ನಗರದಲ್ಲಿ ಸಬ್‌ಅರ್ಬನ್ ರೈಲು ಸೇವೆಗಳಿಗೂ ಅಡ್ಡಿ ಉಂಟಾಗಿದೆ ಎಂದು ಕೇಂದ್ರ ರೈಲ್ವೆ ಇಲಾಖೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್ಒ) ತಿಳಿಸಿದ್ದಾರೆ. ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣ ಸೇರಿದಂತೆ ಇತರೆ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ.