ನವದೆಹಲಿ: ಸಂಸತ್ ಮುಂಗಾರು ಅಧಿವೇಶನ ಆರಂಭವಾಗಿದ್ದು, ಇದೇ ಮೊದಲ ಬಾರಿಗೆ ಆ್ಯಪ್ ಮೂಲಕ ಸಂಸದರು ಹಾಜರಾತಿಯನ್ನು ದಾಖಲಿಸಿದ್ದಾರೆ.
ಕೋವಿಡ್ ಹಾವಳಿಯಿಂದಾಗಿ ಈ ಬಾರಿಯ ಸಂಸತ್ತಿನ ಮಾನ್ಸೂನ್ ಅಧಿವೇಶನ ಕೊರೊನಾ ಮಾನದಂಡಗಳೊಂದಿಗೆ ತಡವಾಗಿ ಪ್ರಾರಂಭವಾಗಿದೆ. ಸೋಂಕು ಭೀತಿ ಹಿನ್ನೆಲೆ ಮುಂಜಾಗ್ರತಾ ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಈ ಬಾರಿ 'ಹಾಜರಾತಿ ನೋಂದಣಿ' ಆ್ಯಪ್ ಮೂಲಕ ಸಂಸದರ ಹಾಜರಾತಿಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಲೋಕಸಭಾ ಸಚಿವಾಲಯ ಮಾಹಿತಿ ನೀಡಿದೆ.
ಇನ್ನು ಅಧಿವೇಶನಕ್ಕೂ ಮುನ್ನ ಸಂಸದರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಆಂಧ್ರ ಪ್ರದೇಶದ ಚಿತ್ತೂರು ಸಂಸದ ರೆಡ್ಡಪ್ಪ ಹಾಗೂ ಅರಾಕು ಸಂಸದೆ ಗೊಡ್ಡೇಟಿ ಮಾಧವಿ ಅವರ ವರದಿ ಪಾಸಿಟಿವ್ ಬಂದಿದೆ.