ಕೋಯಿಕೋಡ್ (ಕೇರಳ): ರಾಜ್ಯಸಭಾ ಸಂಸದ, ಮಾಜಿ ಕೇಂದ್ರ ಸಚಿವ ಹಾಗೂ ಲೋಕತಾಂತ್ರಿಕ ಜನತಾದಳ (LJD) ಮುಖಂಡ ವಿರೇಂದ್ರ ಕುಮಾರ್ ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಿರೇಂದ್ರ ಕುಮಾರ್, ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇವರ ಹುಟ್ಟೂರಾದ ವಯನಾಡಿನ ಕಲ್ಪೆಟ್ಟಾಗೆ ಮೃತದೇಹವನ್ನು ಇಂದು ಕೊಂಡೊಯ್ಯಲಾಗುವುದು. ಸಂಜೆ ಅಲ್ಲಿ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ.
ವಿರೇಂದ್ರ ಕುಮಾರ್, ಮಾತೃಭೂಮಿ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (PTI) ಮತ್ತು ವರ್ಲ್ಡ್ ಅಸೋಸಿಯೇಶನ್ ಆಫ್ ನ್ಯೂಸ್ ಪೇಪರ್ಸ್ ಸೇರಿದಂತೆ ವಿವಿಧ ಸುದ್ದಿ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಉತ್ತಮ ಬರಹಗಾರರೂ ಆಗಿದ್ದ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರಾಗಿದ್ದರು.
ಸಮಾಜವಾದಿ ಪಕ್ಷದ ಮೂಲಕ 1968ರಲ್ಲಿ ವಿರೇಂದ್ರ ಕುಮಾರ್ ರಾಜಕೀಯ ಪ್ರವೇಶಿಸಿದ್ದರು. 1996ರಲ್ಲಿ ಕೇರಳದ ಕೋಯಿಕೋಡ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ, ಅಂದಿನ ಪ್ರಧಾನಿ ಹೆಚ್ ಡಿ ದೇವೇಗೌಡರ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2004ರಲ್ಲಿ ಮತ್ತೊಮ್ಮೆ ಲೋಕಸಭೆಗೆ ಆಯ್ಕೆಯಾದ ಇವರು, 2016 ರಿಂದ ರಾಜ್ಯಸಭಾ ಸದಸ್ಯರಾಗಿದ್ದರು.
ರಾಹುಲ್ ಗಾಂಧಿ ವಿಷಾದ: ಎಲ್ಜೆಡಿ ನಾಯಕ ವೀರೇಂದ್ರ ಕುಮಾರ್ ಅವರ ನಿಧನಕ್ಕೆ ಸಂಸದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಷಾದ ವ್ಯಕ್ತಪಡಿಸಿದ್ದಾರೆ. ಅವರ ಕುಟುಂದವರ ನೋವಿನಲ್ಲಿ ನಾನೂ ಭಾಗಿ ಎಂದು ರಾಗಾ ಟ್ವೀಟ್ ಮಾಡಿದ್ದಾರೆ.
-
I’m sorry to hear about the passing of author & Managing Director of the Mathrubhumi Group, M P Veerendra Kumar Ji. My condolences to his family, colleagues & friends in this time of grief.
— Rahul Gandhi (@RahulGandhi) May 29, 2020 " class="align-text-top noRightClick twitterSection" data="
">I’m sorry to hear about the passing of author & Managing Director of the Mathrubhumi Group, M P Veerendra Kumar Ji. My condolences to his family, colleagues & friends in this time of grief.
— Rahul Gandhi (@RahulGandhi) May 29, 2020I’m sorry to hear about the passing of author & Managing Director of the Mathrubhumi Group, M P Veerendra Kumar Ji. My condolences to his family, colleagues & friends in this time of grief.
— Rahul Gandhi (@RahulGandhi) May 29, 2020