ಉಜ್ಜೈನಿ(ಮಧ್ಯಪ್ರದೇಶ) : ಸಾಮಾನ್ಯವಾಗಿ ಮನುಷ್ಯರಿಗೆ, ಪ್ರಾಣಿಗಳಿಗೆ, ಪಕ್ಷಿಗಳಿಗೆ ಹುಟ್ಟುಹಬ್ಬ ಆಚರಿಸೋದನ್ನ ನೋಡಿದ್ದೀವಿ, ಕೇಳಿದ್ದೀವಿ. ಆದರೆ, ಮಹಾರಾಷ್ಟ್ರದ ಉಜ್ಜೈನಿಯಲ್ಲಿ 87 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ರೈಲು ಎಂಜಿನ್ಗೆ ಬರ್ತ್‌ಡೇ ಸೆಲಬ್ರೇಷನ್ ಮಾಡಲಾಗಿದೆ.
ಉಜ್ಜೈನಿ ಹಾಗೂ ಅಗರ್ ನಡುವೆ ಚಲಿಸುತ್ತಿದ್ದ ಎಂಜಿನ್ ಇದಾಗಿದೆ. 2006ರಿಂದ ಈ ಎಂಜಿನ್ಗೆ ಹುಟ್ಟುಹಬ್ಬ ಆಚರಿಸಲಾಗ್ತಿದ್ದು ಹೂ, ಹಣ್ಣುಗಳಿಂದ ಸಿಂಗರಿಸಿ ಅಧಿಕಾರಿಗಳು, ಸಿಬ್ಬಂದಿ ಕೇಕ್ ಕತ್ತರಿಸಿ ಸಂಭ್ರಮಿಸುತ್ತಾರೆ.
ಐದು ದಶಕಗಳಿಗೂ ಹೆಚ್ಚಿನ ಕಾಲ ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಕುಲಿ ಸಫಿ ಬಾಬಾ, ಅವರ ಸ್ವಂತ ಖರ್ಚಿನಲ್ಲಿ ರೈಲು ಎಂಜಿನ್ ಜನ್ಮದಿನ ಆಚರಿಸುತ್ತಾರಂತೆ. ಅವರು ಚಿಕ್ಕವರಾದಾಗಿಂದಲೂ ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ಈ ಎಂಜಿನ್ನೊಂದಿಗೆ ಆತ್ಮೀಯತೆಯಿದೆ ಅಂತಾರೆ.
ಪ್ರತಿ ವರ್ಷ ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಬರುತ್ತಿದ್ದರು. ಈ ಬಾರಿ ಕೊರೊನಾ ಕಾರಣದಿಂದಾಗಿ ಹೆಚ್ಚಿನ ಜನರು ಬಂದಿಲ್ಲ ಅಂತಾರೆ ಕುಲಿ ಸಫಿ. ಈ ಎಂಜಿನ್ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, 1 ಲಕ್ಷದ 61 ಸಾವಿರದ 276 ರೂಪಾಯಿ ವೆಚ್ಚದಲ್ಲಿ ತಯಾರಿಸಲಾಗಿದೆ. ಈ ರೈಲು ಏಪ್ರಿಲ್ 13ರ 1988ರಂದು ತನ್ನ ಪ್ರಯಾಣ ನಿಲ್ಲಿಸಿದೆ.