ಘೋರಡೋಂಗ್ರಿ: ಮಧ್ಯಪ್ರದೇಶದ ಸಾರಣಿ ಜಿಲ್ಲೆಯಲ್ಲಿ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರಗೈದ ಕಾಮುಕ ಆಕೆಯನ್ನು ಜೀವಂತವಾಗಿ ಹೂಳಲು ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹೊಲದ ವಾಟರ್ ಮೋಟಾರ್ ಆಫ್ ಮಾಡಲೆಂದು ಬಾಲಕಿ ಮೈದಾನಕ್ಕೆ ತೆರಳಿದ್ದಳು. ಬಾಲಕಿಯನ್ನು ಒಬ್ಬಂಟಿಯಾಗಿ ನೋಡಿದ ಆರೋಪಿ, ಅವಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ, ಹತ್ತಿರದ ಒಳಚರಂಡಿ ಬಳಿ ಜೀವಂತವಾಗಿ ಹೂತುಹಾಕಿ ಕೊಲ್ಲಲು ಪ್ರಯತ್ನಿಸಿದ್ದಾನೆ.
ಬಾಲಕಿ ಮನೆಗೆ ಹಿಂತಿರುಗದಿದ್ದಾಗ, ಪೋಷಕರು ಅವಳನ್ನು ಹುಡುಕಿಕೊಂಡು ಹೋಗಿದ್ದಾರೆ. ಆ ವೇಳೆ ಕಲ್ಲುಗಳ ರಾಶಿಯ ಕೆಳಭಾಗದಲ್ಲಿ ಆಕೆ ಬಿದ್ದಿರುವುದನ್ನು ಗಮನಿಸಿದ್ದಾರೆ. ತಕ್ಷಣ ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಪೊಲೀಸರಿಗೆ ಮಾಹಿತಿ ನೀಡಿದರು.
ಈ ಸುದ್ದಿಯನ್ನೂ ಓದಿ: ನಿನ್ನೆ ದೇಶದಲ್ಲಿ ಅತಿ ಕಡಿಮೆ ಕೋವಿಡ್ ಕೇಸ್ ದಾಖಲು... 3.81 ಲಕ್ಷಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ
ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ತಲುಪಿ ಸಂತ್ರಸ್ತೆಯ ಹೇಳಿಕೆ ಪಡೆದಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ಘೋರಡೋಂಗ್ರಿ ಪೊಲೀಸ್ ಹೊರಠಾಣೆ ಉಸ್ತುವಾರಿ ರವಿ ಶಕ್ಯ ತಿಳಿಸಿದ್ದಾರೆ.