ನಲ್ಗೊಂಡ: ನಿಲ್ಲಿಸಿದ್ದ ಟ್ರಕ್‌ಗೆ ಆ್ಯಂಬ್ಯುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಸಿನಿಮಾ ನಟ ಮತ್ತು ಆತನ ಮಗ ಸಾವನ್ನಪ್ಪಿರುವ ಘಟನೆ ದಾಮರಚರ್ಲ ತಾಲೂಕಿನ ಕೊಂಡ್ರಪೋಲ್ ಫ್ಲೈಓವರ್ನಲ್ಲಿ ನಡೆದಿದೆ.
![Movie actor his son died, Movie actor, his son died in accident, Movie actor, his son died in accident at nalgonda, ಸಿನಿಮಾ ನಟ ಮಗ ಸಾವು, ರಸ್ತೆ ಅಪಘಾತದಲ್ಲಿ ಸಿನಿಮಾ ನಟ ಸಾವು, ನಲ್ಗೊಂಡದಲ್ಲಿ ರಸ್ತೆ ಅಪಘಾತದಲ್ಲಿ ಸಿನಿಮಾ ನಟ ಸಾವು, ಕನಲು ಕನಲನು ದೋಚಾಯಂಟೆ ಸಿನಿಮಾ ನಿರ್ಮಾಪಕ ಸಾವು,](https://etvbharatimages.akamaized.net/etvbharat/prod-images/tg-nlg-190-19-accident-av-ts10146_19082020093105_1908f_1597809665_222_1908newsroom_1597847492_339.jpg)
'ಕನುಲು ಕನುಲುನು ದೋಚಾಯಂಟೆ' ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ನಂದಗೋಪಾಲ್ ರೆಡ್ಡಿ (75) ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಗ ಕಮಲಾಕರ್ ರೆಡ್ಡಿ ಜೊತೆ ಆಂಧ್ರಪ್ರದೇಶದ ನೆಲ್ಲೂರಿನಿಂದ ಹೈದರಾಬಾದ್ ಆಸ್ಪತ್ರೆಗೆ ಆ್ಯಂಬುಲೆನ್ಸ್ನಲ್ಲಿ ತೆರಳುತ್ತಿದ್ದರು. ಮಾರ್ಗ ಮಧ್ಯೆ ರಸ್ತೆಯಲ್ಲಿ ನಿಂತಿರುವ ಟ್ರಕ್‌ಗೆ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದಿದೆ.
![Movie actor his son died, Movie actor, his son died in accident, Movie actor, his son died in accident at nalgonda, ಸಿನಿಮಾ ನಟ ಮಗ ಸಾವು, ರಸ್ತೆ ಅಪಘಾತದಲ್ಲಿ ಸಿನಿಮಾ ನಟ ಸಾವು, ನಲ್ಗೊಂಡದಲ್ಲಿ ರಸ್ತೆ ಅಪಘಾತದಲ್ಲಿ ಸಿನಿಮಾ ನಟ ಸಾವು, ಕನಲು ಕನಲನು ದೋಚಾಯಂಟೆ ಸಿನಿಮಾ ನಿರ್ಮಾಪಕ ಸಾವು,](https://etvbharatimages.akamaized.net/etvbharat/prod-images/tg-nlg-190-19-accident-av-ts10146_19082020093105_1908f_1597809665_389_1908newsroom_1597847492_922.jpg)
ಘಟನೆಯಲ್ಲಿ ತಂದೆ ಮತ್ತು ಮಗ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಆ್ಯಂಬ್ಯುಲೆನ್ಸ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಗುಂಟೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಡಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.