ETV Bharat / bharat

ಲಾಕ್​ಡೌನ್​ ಮುಂದುವರಿಕೆಗೆ ಶೇ.80ರಷ್ಟು ಪಕ್ಷಗಳ ಸೂಚನೆ... ಸಿಎಂಗಳ ಸಭೆ ಬಳಿಕ ಪಿಎಂ ಅಂತಿಮ ನಿರ್ಧಾರ! - ಲಾಕ್​ಡೌನ್​

ದೇಶದಲ್ಲಿ ಏಪ್ರಿಲ್​ 14ಕ್ಕೆ ಲಾಕ್​ಡೌನ್​ ಹಿಂಪಡೆಯುವ​ ಯಾವುದೇ ಗುಣಲಕ್ಷಣ ಗೋಚರಿಸುತ್ತಿಲ್ಲ. ಇಂದು ವಿವಿಧ ಪಕ್ಷದ ನಾಯಕರೊಂದಿಗೆ ನಮೋ ಸಂವಾದ ನಡೆಸಿದ್ದು, ಈ ವೇಳೆ ಲಾಕ್​ಡೌನ್​ ಮುಂದುವರಿಸುವಂತೆ ಸೂಚನೆ ನೀಡಿದ್ದಾರೆ.

extension of lockdown
extension of lockdown
author img

By

Published : Apr 8, 2020, 5:57 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್​ ಮೂಲಕ ಸರ್ವಪಕ್ಷ ಸಭೆ ನಡೆಸಿದರು. ಈ ವೇಳೆ, ದೇಶದಲ್ಲಿ ಜಾರಿಯಲ್ಲಿರುವ ಲಾಕ್​ಡೌನ್​ ವಿಸ್ತರಣೆ ಕುರಿತು ಮಹತ್ವದ ಮಾಹಿತಿ ಪಡೆದುಕೊಂಡರು.

ದೇಶದಲ್ಲಿ ಹೇರಲಾಗಿರುವ ಲಾಕ್​ಡೌನ್​ ಏಪ್ರಿಲ್​ 14ಕ್ಕೆ ಅಂತ್ಯಗೊಳ್ಳಲಿದ್ದು, ಮುಂದಿನ ಕ್ರಮ ಏನು ಎಂಬುದರ ಕುರಿತು ವಿವಿಧ ಪಕ್ಷದ ಹಿರಿಯ ನಾಯಕರಿಂದ ನಮೋ ಮಾಹಿತಿ ಪಡೆದುಕೊಂಡರು. ಈ ವೇಳೆ, ಶೇ.80ರಷ್ಟು ಮುಖಂಡರು ಲಾಕ್​ಡೌನ್​ ಮುಂದುವರಿಸುವ ಕುರಿತು ಸಲಹೆ ನೀಡಿದ್ದಾರೆ ಎಂದು ಕಾಂಗ್ರೆಸ್​​ನ ಹಿರಿಯ ಮುಖಂಡ ಗುಲಾಂ ನಬಿ ಆಜಾದ್​ ತಿಳಿಸಿದ್ದಾರೆ.

ಲಾಕ್​ಡೌನ್​ ಮುಂದುವರಿಸುವ ಸುಳಿವು ನೀಡಿದ ನಮೋ: ಏ.11ಕ್ಕೆ ಅಂತಿಮ ನಿರ್ಧಾರ

ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್​-19 ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡು ಬರುತ್ತಿರುವ ಕಾರಣ ಲಾಕ್​ಡೌನ್​ ವಿಸ್ತರಣೆ ಮಾಡುವುದು ಅನಿವಾರ್ಯವಾಗಿದೆ ಎಂದು ಎಲ್ಲ ಪಕ್ಷದ ಮುಖಂಡರು ಮಾಹಿತಿ ನೀಡಿದ್ದಾರೆ. ಆದರೆ, ಏಪ್ರಿಲ್​ 11ರಂದು ಪ್ರಧಾನಿ ಎಲ್ಲ ರಾಜ್ಯದ ಸಿಎಂಗಳೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದು, ವಿವಿಧ ರಾಜ್ಯದಲ್ಲಿನ ಸ್ಥಿತಿಗತಿ ಕುರಿತು ಮಾಹಿತಿ ಪಡೆದುಕೊಂಡು ಲಾಕ್​ಡೌನ್​ ವಿಸ್ತಾರ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.