ETV Bharat / bharat

ಮುಂಗಾರಿಗೆ ಕಾದು ಸುಸ್ತಾದ ಜನತೆ: ಮಾನ್ಸೂನ್ ಎಂಟ್ರಿಗೆ ಹೊಸ ದಿನಾಂಕ ಪ್ರಕಟ

author img

By

Published : Jun 18, 2019, 7:19 PM IST

ಜೂನ್​ 4 ರ ವೇಳೆಗೆ ಕೇರಳ ಪ್ರವೇಶಿಸಬೇಕಿದ್ದ ಮುಂಗಾರು ಮಳೆ ಇನ್ನೂ ಸಮರ್ಪಕವಾಗಿ ಬಂದಿಲ್ಲ. ಪರಿಣಾಮ ಜನತೆ ಬಿಸಿಲಿನ ಧಗೆ ಹಾಗೂ ನೀರಿನ ಕೊರತೆಯಿಂದ ಸಂಕಷ್ಟ ಅನುಭವಿಸುವಂತಾಗಿದೆ.

ಮಾನ್ಸೂನ್

ನವದೆಹಲಿ: ಜೂನ್ ಮೊದಲ ವಾರದಲ್ಲಿ ಮುಂಗಾರು ಆಗಮನವಾಗಲಿದೆ ಎಂದಿದ್ದ ಭಾರತೀಯ ಹವಾಮಾನ ಇಲಾಖೆ ಇದೀಗ ಮುಂದಿನ ಮೂರರಿಂದ ನಾಲ್ಕು ದಿನಗಳೊಳಗಾಗಿ ಮಾನ್ಸೂನ್​ ದಕ್ಷಿಣ ಭಾರತಕ್ಕೆ ಆಗಮಿಸಲಿದೆ ಎನ್ನುವ ಮಾಹಿತಿ ನೀಡಿದೆ.

ಜೂನ್​ 4ರ ವೇಳೆಗೆ ಕೇರಳ ಪ್ರವೇಶಿಸಬೇಕಿದ್ದ ಮುಂಗಾರು ಇನ್ನೂ ಸಮರ್ಪಕವಾಗಿ ಬಂದಿಲ್ಲ. ಪರಿಣಾಮ ಜನತೆ ಬಿಸಿಲಿನ ಝಳ ಹಾಗೂ ನೀರಿನ ಕೊರತೆಯಿಂದ ಸಂಕಷ್ಟ ಅನುಭವಿಸುವಂತಾಗಿದೆ.

ಜೂನ್ ಎರಡು ಇಲ್ಲವೇ ಮೂರನೇ ವಾರದಲ್ಲಿ ಬಹುತೇಕ ದೇಶವನ್ನು ವ್ಯಾಪಿಸುತ್ತಿದ್ದ ಮುಂಗಾರು ಇನ್ನೂ ದೇಶದ ಶೇ.10ರಷ್ಟು ಭಾಗದಲ್ಲೂ ಕೃಪೆ ತೋರಿಲ್ಲ. ಇದು ಮಳೆಯನ್ನೇ ನಂಬಿರುವ ರೈತಾಪಿ ವರ್ಗವನ್ನು ಚಿಂತೆಗೀಡು ಮಾಡಿದೆ. ಆದರೆ ಜೂನ್ 20ರ ನಂತರ ಪರಿಸ್ಥಿತಿ ಆಶಾದಾಯಕವಾಗಿರಲಿದೆ ಎಂದು ಹವಾಮಾನ ಇಲಾಖೆ ಭರವಸೆ ನೀಡಿದೆ.

ಮುಂಗಾರು ವಿಳಂಬವಾದ ಪರಿಣಾಮ ಬಿಹಾರ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ತಾಪಮಾನ ಏರುಗತಿಯಲ್ಲೇ ಸಾಗುತ್ತಿದೆ. ಮುಂಗಾರು ಪೂರ್ವ ಮಳೆ ಪ್ರಮಾಣ ಕುಂಠಿತವಾಗಿದ್ದು ಕೂಡ ತಾಪಮಾನ ಏರಿಕೆಗೆ ಕಾರಣ ಎಂದು ಹವಾಮಾನ ಇಲಾಖೆ ಹೇಳಿದೆ.

ತೆಲಂಗಾಣಕ್ಕೆ ಮುಂಗಾರು ದಾಖಲೆಯ ವಿಳಂಬ:

ಬೇಸಿಗೆಯಲ್ಲಿ ಅಧಿಕ ತಾಪಮಾನ ದಾಖಲಾಗುವ ದೇಶದ ಪ್ರಮುಖ ರಾಜ್ಯಗಳಲ್ಲೊಂದಾದ ತೆಲಂಗಾಣಕ್ಕೆ ಮುಂಗಾರು ಇನ್ನೂ ಆಗಮಿಸಿಲ್ಲ. ಲೆಕ್ಕಾಚಾರದ ಪ್ರಕಾರ ಇದು ದಾಖಲೆ ಎಂದು ಹವಾಮಾನ ಇಲಾಖೆ ಹೇಳಿದೆ.

ಜೂನ್ ತಿಂಗಳಾಂತ್ಯಕ್ಕೆ ತೆಲಂಗಾಣವನ್ನು ಮುಂಗಾರು ಸಂಪೂರ್ಣವಾಗಿ ಆವರಿಸಲಿದೆ ಎಂದು ಇಲಾಖೆ ಹೇಳಿದೆ. 47 ವರ್ಷದ ಹಿಂದೆ ತೆಲಂಗಾಣ ರಾಜ್ಯ ರಚನೆಗೂ ಮುನ್ನ ಮುಂಗಾರು ಇಷ್ಟೊಂದು ತಡವಾದ ನಿದರ್ಶನವಿತ್ತು ಎಂದು ಹವಾಮಾನ ಇಲಾಖೆ ಅಂಕಿ-ಅಂಶ ಹೇಳುತ್ತಿದೆ.

ಕಳೆದ ವರ್ಷ ಜೂನ್ ಮೊದಲ ವಾರದಲ್ಲೇ ಮುಂಗಾರು ಆಗಮನವಾಗಿತ್ತು. ಸಾಮಾನ್ಯವಾಗಿ ಜೂನ್ ಏಳರಿಂದ ಹತ್ತರ ಮಧ್ಯಭಾಗದಲ್ಲಿ ತೆಲಂಗಾಣಕ್ಕೆ ಮುಂಗಾರು ಆಗಮನವಾಗುತ್ತದೆ.

Intro:Body:

ಮುಂಗಾರಿಗೆ ಕಾದು ಕಾದು ಸುಸ್ತಾದ ದೇಶದ ಜನತೆ... ಮಾನ್ಸೂನ್ ಎಂಟ್ರಿಗೆ ಹೊಸ ದಿನಾಂಕ ನೀಡಿದ ಇಲಾಖೆ

ನವದೆಹಲಿ: ಜೂನ್ ಮೊದಲ ವಾರದಲ್ಲಿ ಮುಂಗಾರು ಆಗಮನವಾಗಲಿದೆ ಎಂದಿದ್ದ ಭಾರತೀಯ ಹವಾಮಾನ ಇಲಾಖೆ ಇದೀಗ ಮುಂದಿನ ಮೂರರಿಂದ ನಾಲ್ಕು ದಿನಗಳೊಳಗಾಗಿ ಮಾನ್ಸೂನ್​ ದಕ್ಷಿಣ ಭಾರತಕ್ಕೆ ಆಗಮಿಸಲಿದೆ ಎನ್ನುವ ಮಾಹಿತಿ ನೀಡಿದೆ.

ಜೂನ್​ ನಾಲ್ಕರ ವೇಳೆಗೆ ಕೇರಳವನ್ನು ಪ್ರವೇಶಿಸಬೇಕಿದ್ದ ಮುಂಗಾರು ಮಳೆ ಇನ್ನೂ ಸಮರ್ಪಕವಾಗಿ ಬಂದಿಲ್ಲ. ಪರಿಣಾಮ ಜನತೆ ಬಿಸಿಲಿನ ಧಗೆ ಹಾಗೂ ನೀರಿನ ಕೊರತೆಯಿಂದ ಸಂಕಷ್ಟ ಅನುಭವಿಸುವಂತಾಗಿದೆ.

ಜೂನ್ ಎರಡು ಇಲ್ಲವೇ ಮೂರನೇ ವಾರದಲ್ಲಿ ಬಹುತೇಕ ದೇಶವನ್ನು ವ್ಯಾಪಿಸುತ್ತಿದ್ದ ಮುಂಗಾರು ಇನ್ನೂ ದೇಶದ ಶೇ.10ರಷ್ಟು ಭಾಗದಲ್ಲೂ ಕೃಪೆ ತೋರಿಲ್ಲ. ಇದು ಮಳೆಯನ್ನೇ ನಂಬಿರುವ ರೈತಾಪಿ ವರ್ಗವನ್ನು ಚಿಂತೆಗೀಡು ಮಾಡಿದೆ. ಆದರೆ ಜೂನ್ 20ರ ನಂತರ ಪರಿಸ್ಥಿತಿ ಆಶಾದಾಯಕವಾಗಿರಲಿದೆ ಎಂದು ಹವಾಮಾನ ಇಲಾಖೆ ಭರವಸೆ ನೀಡಿದೆ.

ಮುಂಗಾರು ವಿಳಂಬವಾದ ಪರಿಣಾಮ ಬಿಹಾರ, ಆಂರ್ಧರ ಪ್ರದೇಶ, ತೆಲಂಗಾಣ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ತಾಪಮಾನ ಏರುಹತಿಯಲ್ಲೇ ಸಾಗುತ್ತಿದೆ.ಮುಂಗಾರು ಪೂರ್ವ ಮಳೆಯ ಕುಂಠಿತವಾಗಿದ್ದು ಸಹ ತಾಪಮಾನ ಏರಿಕೆಗೆ ಕಾರಣ ಎಂದು ಹವಾಮಾನ ಇಲಾಖೆ ಹೇಳಿದೆ.

ತೆಲಂಗಾಣಕ್ಕೆ ಮುಂಗಾರು ದಾಖಲೆಯ ವಿಳಂಬ:

ಬೇಸಿಗೆಯಲ್ಲಿ ಅಧಿಕ ತಾಪಮಾನ ದಾಖಲಾಗುವ ದೇಶದ ಪ್ರಮುಖ ರಾಜ್ಯ ತೆಲಂಗಾಣಕ್ಕೆ ಮುಂಗಾರು ಇನ್ನೂ ಆಗಮಿಸಿಲ್ಲ. ಒಂದು ಲೆಕ್ಕಾಚಾರದ ಪ್ರಕಾರ ಇದು ದಾಖಲೆ ಎಂದು ಹವಾಮಾನ ಇಲಾಖೆ ಹೇಳಿದೆ.

ಜೂನ್ ತಿಂಗಳಾಂತ್ಯಕ್ಕೆ ತೆಲಂಗಾಣದಲ್ಲಿ ಮುಂಗಾರು ಸಂಪೂರ್ಣವಾಗಿ ಆವರಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.  47 ವರ್ಷದ ಹಿಂದೆ ತೆಲಂಗಾಣ ರಾಜ್ಯ ರಚನೆಗೂ ಮುನ್ನ ಮುಂಗಾರು ಇಷ್ಟೊಂದು ತಡವಾಗಿದ್ದು ಎಂದು ಹವಾಮಾನ ಇಲಾಖೆ ಅಂಕಿ-ಅಂಶ ಹೇಳಿದೆ.

ಕಳೆದ ವರ್ಷ ಜೂನ್ ಮೊದಲ ವಾರದಲ್ಲೇ ಮುಂಗಾರು ಆಗಮನವಾಗಿತ್ತು. ಸಾಮಾನ್ಯವಾಗಿ ಜೂನ್ ಏಳರಿಂದ ಹತ್ತರ ಮಧ್ಯಭಾಗದಲ್ಲಿ ತೆಲಂಗಾಣಕ್ಕೆ ಮುಂಗಾರು ಆಗಮನವಾಗುತ್ತದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.