ನವದೆಹಲಿ: ಮತ್ಸ್ಯ ಸಂಪದ ಯೋಜನೆ (PMMSY) ಮತ್ತು ಕೃಷಿಕರ ಮಾಹಿತಿಗಾಗಿ ಇ–ಗೋಪಾಲ ಆ್ಯಪ್‌ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಕಾರ್ಯಕ್ರಮ ನಡೆಯಲಿದೆ.
ಪಿಎಂಎಂಎಸ್ವೈ ವಿಶೇಷತೆ ಏನು?
- ಮೀನುಗಾರಿಕೆ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಗಾಗಿಯೇ 'ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ' ಮೂಲಕ 2020-21ರಿಂದ 2024-25ರವರೆಗೂ ಅಂದಾಜು ₹20,050 ಕೋಟಿ ಹೂಡಿಕೆ. ಇದು ಮೀನುಗಾರಿಕೆ ವಲಯಕ್ಕೆ ಈವರೆಗಿನ ಅತಿ ದೊಡ್ಡ ಮೊತ್ತದ ಹೂಡಿಕೆಯಾಗಲಿದೆ.
- ಬಿಹಾರದಲ್ಲಿ 1,390 ಕೋಟಿ ಮೊತ್ತದ ಯೋಜನೆಗಳಿಗೆ ಕೇಂದ್ರದಿಂದ 535 ಕೋಟಿ ರೂಪಾಯಿ ಸಹಕಾರ ಸಿಗಲಿದೆ.
- ಮೀನು ಉತ್ಪಾದನೆ ಹೆಚ್ಚಳಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಯೋಜನೆ ಸಿದ್ಧ
ಇ-ಗೋಪಾಲ ಆ್ಯಪ್ನಿಂದ ಏನು ಪ್ರಯೋಜನ?
- ತಳಿ ಅಭಿವೃದ್ಧಿ ಮತ್ತು ಇತರ ಮಾಹಿತಿಯನ್ನೊಳಗೊಂಡ ಅಪ್ಲಿಕೇಷನ್ ಇ-ಗೋಪಾಲ ಆ್ಯಪ್ಅನ್ನು ರೈತರು ನೇರವಾಗಿ ಬಳಸಬಹುದು.
- ಪಶುಗಳಿಗೆ ಲಸಿಕೆ ಹಾಕಿಸುವ ದಿನಾಂಕ, ಅವುಗಳಿಗೆ ನೀಡಬೇಕಾದ ಪೌಷ್ಟಿಕಾಂಶ ಆಹಾರದ ಬಗ್ಗೆ ತಿಳಿವಳಿಕೆ ಆ್ಯಪ್ನಲ್ಲಿ ಲಭ್ಯ
- ಪಶುಗಳಿಗೆ ಸೂಕ್ತ ಔಷಧಿ ನೀಡಿ ಅವುಗಳ ಆರೈಕೆ ಜೊತೆಗೆ ಕೃಷಿಕರಿಗೆ ಅಗತ್ಯವಿರುವ ಎಲ್ಲಾ ಮಾಹಿತಿಯೂ ರೈತರ ಕೈ ಸೇರಲಿದೆ.
- ನೀರು ಮತ್ತು ಮಣ್ಣಿನ ಪರೀಕ್ಷೆ, ರೋಗ ಪರೀಕ್ಷೆ ಕೇಂದ್ರಗಳ ಮೂಲಕ ಮೀನುಗಾರರಿಗೆ ಸೌಲಭ್ಯ ಕಲ್ಪಿಸುವ ಮಹತ್ತರ ಗುರಿ
'ಆತ್ಮ ನಿರ್ಭರ ಭಾರತ' ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಈ ಪ್ರಯತ್ನ ಹೆಚ್ಚಿನ ಬಲ ತುಂಬಲಿದೆ ಎಂದು ಪ್ರಧಾನಿ ಕಾರ್ಯಾಲಯ ಟ್ವೀಟ್ ಮಾಡಿದೆ.