ETV Bharat / bharat

ಮೋದಿಯವರೇ ನಮಗೆ ಕೆಲಸ ಮಾಡಲು ಬಿಡಿ! - ವೈರಾಲಜಿ

ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವುದೇ ನಾವು ವೈರಸ್ ವಿರುದ್ಧ ನಡೆಸುವ ಹೋರಾಟವಾಗಿದೆ. ಅದು ಕೊರೊನಾ ಆಗಲೀ ಅಥವಾ ಇನ್‌ಫ್ಲುಯೆಂಜಾ ಆಗಲಿ ರೋಗನಿರೋಧಕ ಶಕ್ತಿಯೇ ನಮ್ಮನ್ನು ರಕ್ಷಿಸುತ್ತದೆ.

lock down effect
ಲಾಕ್​ಡೌನ್​ ಪರಿಣಾಮ
author img

By

Published : May 7, 2020, 8:14 PM IST

Updated : May 7, 2020, 8:28 PM IST

ಭಾರತೀಯರು ಕೊರೊನಾ ವೈರಸ್‌ ಅನ್ನು ದೂರ ಇಡುವಲ್ಲಿ ಉತ್ತಮವಾಗಿ ಶ್ರಮಿಸಿದ್ದಾರೆ. ಭಾರತದಲ್ಲಿನ ಮರಣ ದರ ಶೇ.3.27 ಆಗಿದೆ. ಈಗ ನಾವು ನಮ್ಮ ವೆಂಟಿಲೇಟರ್‌ ಅನ್ನು ತೆಗೆದು ಭಾರತದ ಆರ್ಥಿಕತೆ ಉಸಿರಾಡಲು ಸ್ವಲ್ಪ ಸಮಯವನ್ನು ನೀಡಬೇಕಿದೆ. ಭಾರತ ಈಗ ಪುನಃ ಕೆಲಸಕ್ಕೆ ಮರಳಬೇಕಿದೆ. ಕೆಂಪು, ಹಸಿರು ಅಥವಾ ಕಿತ್ತಳೆ ವಲಯ ಯಾವುದು ಎಂಬುದು ಇಲ್ಲಿ ಗಮನಾರ್ಹವಲ್ಲ. ವೈರಸ್‌ ನಮ್ಮ ಜೊತೆ ಇರುತ್ತದೆ ಮತ್ತು ನಾವು ಅದರ ಜೊತೆಗೆ ಕೆಲಸ ಮಾಡುವುದಕ್ಕಾಗಿ ಸಿದ್ಧವಾಗಲೇಬೇಕಿದೆ.

ಅಚ್ಚರಿಯೆಂದರೆ, ವೈದ್ಯಕೀಯ ದೃಷ್ಟಿಕೋನದಿಂದ ನೋಡಿದರೆ ನಾವು ಉತ್ತಮ ಸಾಧನೆಯನ್ನೇ ಮಾಡಿದ್ದೇವೆ. ಭಾರತದಲ್ಲಿ ಚೇತರಿಕೆ ದರವು ಶೇ. 27.5 ಆಗಿದೆ. 50 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದರೆ, 1700ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಮಧ್ಯೆ, ಭಾರತದ ಆರ್ಥಿಕತೆ ಕಳೆಗುಂದಿದೆ. ವೈರಸ್ ಮಾಡಬಹುದಾದ ಹಾನಿಗಿಂತ ಹೆಚ್ಚಿನ ಆಘಾತವನ್ನು ನಮಗೆ ಕರ್ಫ್ಯೂ ಉಂಟು ಮಾಡಿದೆ. 400 ಮಿಲಿಯನ್ ಭಾರತೀಯ ಕೆಲಸಗಾರರು ಬಡತನಕ್ಕೆ ಶರಣಾಗಲಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. ನೊಬೆಲ್‌ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಹೇಳುವಂತೆ, ಕೊರೊನಾ ವೈರಸ್‌ನಿಂದ ನಮ್ಮ ಜಿಡಿಪಿ ಶೇ.10ರಿಂದ 15ರಷ್ಟು ಕುಸಿಯಬಹುದು ಎಂದು ಊಹಿಸಿದ್ದಾರೆ. ಚಿತ್ರಣ ಅತ್ಯಂತ ಆತಂಕಕಾರಿಯಾಗಿದೆ ಅಲ್ಲವೇ?

ಸಾವಿರಾರು ಜನರು ನೂರಾರು ಕಿಲೋಮೀಟರುಗಳಷ್ಟು ದೂರದಲ್ಲಿರುವ ತಮ್ಮ ಊರು ಮತ್ತು ಮನೆಗಳಿಗೆ ತೆರಳುವಾಗ ಹಸಿವಿನಿಂದ ಸಾವನ್ನಪ್ಪುವ ಸನ್ನಿವೇಶವನ್ನು ಕಲ್ಪಿಸಿಕೊಂಡರೆ ಇನ್ನಷ್ಟು ಚಿಂತಾಕ್ರಾಂತರಾಗುತ್ತೇವೆ. ಆಗ್ರಾದ ಹಲವು ಪ್ರದೇಶಗಳು ಮತ್ತು ಕ್ವಾರಂಟೈನ್ ಕ್ಯಾಂಪ್‌ಗಳಲ್ಲಿರುವ ಲಕ್ಷಾಂತರ ಜನರು ಹೊಸ ತಲೆಮಾರಿನ ಅಸ್ಪೃಶ್ಯತೆಯ ಹೊಡೆತಕ್ಕೆ ಸಿಲುಕುತ್ತಿದ್ದಾರೆ. ನಮ್ಮ ದೇಹ ಮತ್ತು ನಮ್ಮ ಭೂಮಿಯನ್ನು ವಶಪಡಿಸಿಕೊಳ್ಳಲು ಬಯೋ ರಾಜಕೀಯ ನಡೆಯುತ್ತಿದೆ. ಆದರೆ, ಈ ವ್ರಣವನ್ನು ಕತ್ತರಿಸಿ ಹಾಕುವ ಸಮಯ ಇದು. ಆರ್ಥಿಕತೆ ಈಗ ತೆರೆಯದಿದ್ದರೆ, ನಾವು ಇನ್ನಷ್ಟು ಗಂಭೀರ ವಾಸ್ತವವನ್ನು ಎದುರಿಸಬೇಕಾಗಬಹುದು. ನಾಗರಿಕ ಅಶಾಂತಿ ಮತ್ತು ಹಿಂಸೆಯೆಲ್ಲವೂ ಸಮಾಜದಲ್ಲಿ ಉದ್ಭವಿಸಲು ಆರಂಭವಾಗಬಹುದು.

ವೈರಾಲಜಿ 101

ವೈರಸ್‌ಗಳು ನಿಸರ್ಗ ಸಹಜ ಜೀವಿಗಳು. ಇವುಗಳಿಗೆ ಔಷಧವಾಗಲೀ ಲಸಿಕೆಯಾಗಲೀ ಬಾಧಿಸುವುದಿಲ್ಲ. ಅವು ಜೀವಿಯೂ ಅಲ್ಲ, ನಿರ್ಜೀವಿಯೂ ಅಲ್ಲ. ಅನುಕೂಲಕರ ಸನ್ನಿವೇಶವಿದ್ದಾಗ ಇವು ಬೆಳೆಯುತ್ತವೆ ಮತ್ತು ಉಳಿದ ಸಮಯದಲ್ಲಿ ಸುಮ್ಮನೆ ಕಲ್ಲಿನಂತೆ ಇರುತ್ತವೆ. ಸಸ್ಯ ಮತ್ತು ಪ್ರಾಣಿಗಳ ರೀತಿಯಲ್ಲಿಯೇ ಮನುಷ್ಯರ ವಿಕಸನದ ಮೇಲೂ ವೈರಸ್‌ಗಳ ಪ್ರಭಾವವನ್ನು ನಾವು ಮರೆಯುವಂತಿಲ್ಲ. ಉಪದ್ರವಕಾರಿ ವೈರಸ್‌ಗಳು ನಮ್ಮ ಮೇಲೆ ದಾಳಿ ನಡೆಸಿದರೆ, ಅನುಕೂಲಕರ ವೈರಸ್‌ಗಳು ನಿತ್ಯವೂ ನಮಗೆ ಆರೋಗ್ಯಕರವಾಗಿರಲು ಮತ್ತು ಜೀವಂತವಾಗಿರಲು ಸಹಾಯ ಮಾಡಿವೆ. ಕಾಲ ಸರಿದಂತೆ, ಉಪದ್ರವಕಾರಿ ವೈರಸ್ ವಿರುದ್ಧ ನಾವು ರೋಗನಿರೋಧಕತೆಯನ್ನು ಮತ್ತು ಆನುವಂಶಿಕ ನಿಯಂತ್ರಣವನ್ನು ಸಾಧಿಸಿಕೊಂಡಿದ್ದೇವೆ.

ಮಾಧ್ಯಮಗಳಲ್ಲಿ ಈಗ ಲಸಿಕೆಯದೇ ಸುದ್ದಿ. ಆದರೆ ಲಸಿಕೆಯಿಂದ ಸಂಪೂರ್ಣ ನಿರ್ಮೂಲನೆ ಸಾಧ್ಯವಿಲ್ಲ. ಇದನ್ನು ನಾವು ಇನ್‌ಫ್ಲುಯೆಂಜಾ ವಿಚಾರದಲ್ಲಿ ಗಮನಿಸಿದ್ದೇವೆ. ಪ್ರತಿ ಸೀಸನ್‌ನಲ್ಲೂ ವೈರಸ್ ಬದಲಾವಣೆಯಾಗುವುದರಿಂದ ಹೊಸ ಲಸಿಕೆಯ ಅಗತ್ಯ ಉಂಟಾಗುತ್ತದೆ. ಇದೆಲ್ಲಾ ಒಂದೆಡೆಯಾದರೆ, ಅರ್ಧ ದಶಕ ಕಳೆದರೂ ನಮಗೆ ಎಚ್‌ಐವಿ ಲಸಿಕೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಈಗಾಗಲೇ ಕೊರೊನಾ ವೈರಸ್‌ಗೆ ಸಿದ್ಧಪಡಿಸಲಾಗಿರುವ ಲಸಿಕೆ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬ ಬಗ್ಗೆ ಇಡೀ ವಿಶ್ವದ ವೈದ್ಯರು, ವಿಜ್ಞಾನಿಗಳು ಮತ್ತು ಸಾಂಕ್ರಾಮಿಕ ರೋಗ ತಜ್ಞರು ಪ್ರಶ್ನೆ ಮಾಡಿದ್ದಾರೆ. ಈ ಲಸಿಕೆ ಬರುತ್ತದೆ ಎಂದು ಭಾರತದ ಕಾದು ಮೂರ್ಖತನ ತೋರಿಸಲಾರದು. ಭಾರತದಲ್ಲಿರುವ ಎಲ್ಲ ಮ್ಯುಟೇಶನ್‌ಗಳಿಗೂ ಈ ಲಸಿಕೆ ಕೆಲಸ ಮಾಡಬಹುದು ಅಥವಾ ಮಾಡದೇ ಇರಬಹುದು.

ಇತಿಹಾಸದ ಉದಾಹರಣೆಗಳನ್ನು ಗಮನಿಸಿದರೆ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವುದೇ ನಾವು ವೈರಸ್ ವಿರುದ್ಧ ನಡೆಸುವ ಹೋರಾಟವಾಗಿದೆ. ಅದು ಕೊರೊನಾ ಆಗಲೀ ಅಥವಾ ಇನ್‌ಫ್ಲುಯೆಂಜಾ ಆಗಲಿ ರೋಗನಿರೋಧಕ ಶಕ್ತಿಯೇ ನಮ್ಮನ್ನು ರಕ್ಷಿಸುತ್ತದೆ.

ಯಾವುದೇ ಲಸಿಕೆ ಇಲ್ಲದಿದ್ದರೂ, ನಾವು ವೈರಸ್‌ ಅನ್ನು ನಿರ್ವಹಿಸಿದ್ದೇವೆ ಮತ್ತು ಮರಣ ಪ್ರಮಾಣ ಕಡಿಮೆ ದಾಖಲಾಗಿದೆ. ಈ ಕೊರೊನಾ ಅನ್ನು ನಾವು ತೀವ್ರ ಉಪದ್ರವಕಾರಿ ಟಿಬಿಗೆ ಹೋಲಿಸೋಣ. ಪ್ರತಿವರ್ಷ 1.5 ಮಿಲಿಯನ್‌ ಜನರು ಇದರಿಂದ ಸಾವನ್ನಪ್ಪುತ್ತಾರೆ. ಇದಕ್ಕಾಗಿ ನಾವು ಆರ್ಥಿಕತೆಯನ್ನು ಬಂದ್ ಮಾಡಲು ಸಾಧ್ಯವೇ? ಇಲ್ಲ. ನಾವು ಕೆಲಸ ಮಾಡುತ್ತಲೇ ಇರುತ್ತೇವೆ ಮತ್ತು ಪರೀಕ್ಷೆಯನ್ನೂ ಮಾಡದೇ ಕೋಟ್ಯಂತರ ಕೆಲಸಗಾರರು ನಮ್ಮ ಆರ್ಥಿಕತೆಗೆ ಕೊಡುಗೆ ನೀಡುತ್ತಲೇ ಇರುತ್ತಾರೆ. ಯಾಕೆ ಕೊರೊನಾ ಇತರೆಲ್ಲಾ ರೋಗಕ್ಕಿಂತ ವಿಭಿನ್ನವಾಗಿದೆ? ಕೊರೊನಾಗೆ ಹೋಲಿಸಿದರೆ ಟಿಬಿ ಎಲ್ಲಾ ರೀತಿಯಲ್ಲೂ ಅತ್ಯಂತ ಅಪಾಯಕಾರಿ ರೋಗ.

ಸಿದ್ಧ ಸೈತ್ರ ಮತ್ತು ವಿದೇಶದ ವಾಸ್ತವಾಂಶಗಳನ್ನು ಬದಿಗಿಟ್ಟು ನಾವು ಯೋಚನೆ ಮಾಡಬೇಕಿದೆ. ಭಾರತವು ವ್ಯಾವಹಾರಿಕವಾಗಿ ಯೋಚನೆ ಮಾಡಬೇಕು. ಲಸಿಕೆ ಇಲ್ಲದೇ ನಾವು ರೋಗವನ್ನು ನಿರ್ವಹಿಸಲು ಸಾಧ್ಯವಾಗಿದೆ. ನಾವು ನಮ್ಮ ಆರ್ಥಿಕತೆಯನ್ನು ಬಂದ್ ಮಾಡಿ ಕುಳಿತುಕೊಳ್ಳಬಾರದು ಮತ್ತು ನಮ್ಮ ಆರ್ಥಿಕತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಸಂಪೂರ್ಣವಾಗಿ ಪುನರಾರಂಭಿಸಬೇಕಿದೆ. ಕಾಲ ಸರಿದಂತೆ ಆರ್ಥಿಕ ಉತ್ತೇಜನ ಯೋಜನೆಗಳ ಪ್ರಭಾವ ಕಡಿಮೆಯಾಗುತ್ತದೆ. ಆಗ ಆರ್ಥಿಕತೆ ಮತ್ತೆ ಕುಸಿತ ಕಾಣುತ್ತದೆ. ಲಕ್ಷಾಂತರ ಜನರು ಕೊರೊನಾದಿಂದ ಸಾಯುವುದಿಲ್ಲ. ಬದಲಿಗೆ ಅಪೌಷ್ಠಿಕತೆ ಮತ್ತು ಹಸಿವಿನಿಂದ ಸಾವನ್ನಪ್ಪುತ್ತಾರೆ. ಎಸ್‌ಎಂಇ ಕಂಪನಿಗಳಿಗೆ ಈಗಾಗಲೇ ಈ ಅನುಭವವಾಗುತ್ತಿದೆ. ನಾವು ಇನ್ನೂ ಲಾಕ್‌ಡೌನ್‌ ಮುಂದುವರಿಸುವುದನ್ನು ತಡೆದುಕೊಳ್ಳಲಾರೆವು.

ಒಂದು ಹೆಜ್ಜೆ ಹಿಂದಕ್ಕೆ..

ಕೊರೊನಾ ವೈರಸ್‌ ಈಗಿನ ವಾಸ್ತವ. ನಾವು ಇದರ ಜೊತೆಗೇ ಜೀವಿಸಬೇಕು ಮತ್ತು ಕೆಲಸ ಮಾಡಬೇಕಿದೆ. ಹೆದರಿ ಕುಳಿತುಕೊಳ್ಳಲು ಸಾಧ್ಯವೇ ಇಲ್ಲ. ಕೊರೊನಾ ವೈರಸ್‌ ವಿಪರೀತ ಸಾಂಕ್ರಾಮಿಕ ಎಂಬುದರಲ್ಲಿ ಯಾವುದೇ ಮಾತಿಲ್ಲ. ಆದರೆ ಮರಣ ಪ್ರಮಾಣ ಕಡಿಮೆ ಇದೆ. ಇದು ಅನುಕೂಲಕರ ಅಂಶ. ಕೊರೊನಾ ವೈರಸ್‌ನಲ್ಲಿರುವ ಅಪಾಯವನ್ನು ಅವಗಣನೆ ಮಾಡದೇ ಹೇಳುವುದಾದರೆ, ದೆಹಲಿಯಲ್ಲಿ ರಸ್ತೆ ಅಪಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಕೊರೊನಾದಿಂದ ಸಾವನ್ನಪ್ಪುವವರಿಗಿಂತ ಹೆಚ್ಚಿದೆ.

ಕೃಷಿ ವಲಯವನ್ನು ಸುಮಾರು ದಿನಗಳ ಹಿಂದೆಯೇ ತೆರೆಯಲಾಗಿದೆ. ಅಂದರೆ ಶೇ. 70 ರಷ್ಟು ಭಾರತೀಯ ಕೆಲಸಗಾರರು ಮತ್ತು ಆರ್ಥಿಕತೆ ವಾಪಸ್ ಸಹಜ ಸ್ಥಿತಿಗೆ ಬಂದಿದೆ. ಎಲ್ಲಾ ಎಸ್‌ಎಂಇ ವಲಯವನ್ನೂ ತಕ್ಷಣದಿಂದಲೇ ಜಾರಿಗೆ ಬರುವಂತೆ ತೆರೆಯಬೇಕಿದೆ. ಭಾರತದ ಆರ್ಥಿಕತೆಯನ್ನು ಪುನಃಶ್ಚೇತನಗೊಳಿಸಲು ಇದು ಅತ್ಯಂತ ಉತ್ತಮ ವಿಧಾನ. ಚಲನೆಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನೂ ಎಲ್ಲಾ ರಾಜ್ಯಗಳಲ್ಲೂ ಆರಂಭಿಸಬೇಕು. ಸ್ವಲ್ಪ ದಿನದ ಮಟ್ಟಿಗೆ ಐಷಾರಾಮಿ ಚಟುವಟಿಕೆಗಳನ್ನು ನಿಲ್ಲಿಸಬಹುದು. ಆದರೆ, ಮೂಲ ಮತ್ತು ಅಗತ್ಯ ಆರ್ಥಿಕ ಚಟುವಟಿಕೆಗಳು ಶುರುವಾಗಬೇಕಿದೆ. ಆರ್ಥಿಕ ಹಿಂಜರಿಕೆಯ ಭೀತಿ ಮುಗಿದಿಲ್ಲ. ಈ ವಿಪತ್ತಿನ ಸಮಯದಲ್ಲಿ ನಾವು ಜಗತ್ತಿಗೆ ಅಗತ್ಯ ಸಾಮಗ್ರಿ ಪೂರೈಕೆ ಮಾಡಬೇಕಿದೆ. ಇದು ನಿಜವಾಗಿ ಮೇಕ್ ಇನ್ ಇಂಡಿಯಾವನ್ನು ಪ್ರದರ್ಶಿಸುವ ಸಮಯವಾಗಿದೆ. ವ್ಯಕ್ತಿಯ ರೋಗ ನಿರೋಧಕ ಶಕ್ತಿಯು ಮಹತ್ವದ ಪಾತ್ರ ವಹಿಸುವುದರಿಂದ, ಆಯುಷ್‌ ಸಚಿವಾಲಯದ ಮೂಲಕ ಜನರು ಅನುಸರಿಸಬೇಕಾದ ಕ್ರಮಗಳನ್ನು ಸರ್ಕಾರವು ಪ್ರಕಟಿಸಬೇಕು. ಉದಾಹರಣೆಗೆ, ವ್ಯಕ್ತಿಗಳು ತೆಗೆದುಕೊಳ್ಳಬಹುದಾದ ಹೆಚ್ಚುವರಿ ವಿಟಮಿನ್‌ಗಳು ಮತ್ತು ಸಪ್ಲೆಂಟ್‌ಗಳನ್ನು ಶಿಫಾರಸು ಮಾಡುವುದು. ಉದ್ಯಮಗಳೇ ತಮ್ಮ ಕೆಲಸಗಾರರಿಗೆ ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಕ್ರಮ ಕೈಗೊಳ್ಳುವುದು.

65ಕ್ಕಿಂತ ಹೆಚ್ಚು ವಯಸ್ಸಿನ ಮತ್ತು ಕೊರೊನಾಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುವ ಜನರನ್ನು ರಕ್ಷಿಸುವ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು. ಆದರೆ, ರೋಗಕ್ಕೆ ತುತ್ತಾಗುವ ಅಪಾಯ ಕಡಿಮೆ ಇರುವ ಜನರು ತಮ್ಮ ಸಾಮಾನ್ಯ ಕೆಲಸ ಕಾರ್ಯಗಳನ್ನು ಮಾಡಲು ಅವಕಾಶ ಹೊಂದಿರಬೇಕು. ನಾವು ನಮ್ಮ ಮನೆಯಲ್ಲಿ ಕುಳಿತು ನಮ್ಮ ಮಕ್ಕಳು, ತಾಯಿ ಮತ್ತು ಪತ್ನಿ ಹಸಿವಿನಿಂದ ಕಂಗೆಡುವುದನ್ನು ನೋಡಬೇಕೆ ಎಂಬುದನ್ನು ಅಥವಾ ಕೆಲಸಕ್ಕೆ ಹೋಗಬೇಕೆ ಎಂಬುದನ್ನು ನಾವೇ ನಿರ್ಧರಿಸಬೇಕು. ನಾನು ಸ್ವತಂತ್ರವಾಗಿ ಕೆಲಸ ಮಾಡಿ, ನಮ್ಮ ದೇಶದ ಕೋಟ್ಯಂತರ ಜನರನ್ನು ರಕ್ಷಿಸುವ ಹಾಗೂ ಮಕ್ಕಳಿಗೆ ಆಹಾರ ಒದಗಿಸುವ ಹಕ್ಕನ್ನು ಚಲಾಯಿಸುತ್ತೇನೆ. ಶ್ರೀಮಂತರು ಅಥವಾ ಸರ್ಕಾರದ ಕವಡೆ ಕಾಸಿಗೆ ಅವರು ಕೈಯೊಡ್ಡುವುದು ನನಗೆ ಬೇಕಿಲ್ಲ. ತಮ್ಮ ಬೆವರಿನ ಪ್ರತಿಫಲವಾಗಿಯೇ ಅವರು ಗಳಿಸಿ ತಿನ್ನಬೇಕಿದೆ. ಸಾವು ಬಂದರೂ ದುಡಿದು ತಿನ್ನುವವರು ಗೌರವಯುತವಾಗಿಯೇ ನಿರ್ಗಮಿಸುತ್ತಾರೆ.

ಸಾವು ಸಹಜ. ಇದಕ್ಕೆ ನಾವು ಹೆದರುವ ಅಗತ್ಯವೇ ಇಲ್ಲ. ಆದರೆ, ನಮ್ಮ ಪ್ರೀತಿಪಾತ್ರರು ನೋವುಣ್ಣುವುದು ಮತ್ತು ಬಳಲುವುದನ್ನು ನಾವು ನೋಡಲಾಗದು. ಅವರ ಕಡೆಗೆ ನಾವು ಹೊಂದಿದ್ದ ಕರ್ತವ್ಯವನ್ನು ಪೂರೈಸಲಾಗದ ನೋವು ನಮ್ಮನ್ನು ಕಾಡುತ್ತದೆ. ಆಹಾರ ಮತ್ತು ನೀರಿನ ಜೊತೆಗೆ ಹಣವೂ ಅತ್ಯಂತ ಅಗತ್ಯದ್ದು. ನಾವು ಕೆಲಸ ಮಾಡಲು ಅವಕಾಶ ನೀಡಬೇಕು. ಯಾರನ್ನು ಕರೆದುಕೊಂಡು ಹೋಗಬೇಕು ಎಂಬುದನ್ನು ಯಮರಾಜ ನಿರ್ಧರಿಸಲಿ. ಆದರೆ ಅಲ್ಲಿಯವರೆಗೆ ನಾವು ನಮ್ಮ ಕುಟುಂಬ, ನಮ್ಮ ಪ್ರೀತಿ ಪಾತ್ರರು ಮತ್ತು ನಮ್ಮ ದೇಶದೆಡೆಗೆ ನಮ್ಮ ಕರ್ತವ್ಯವನ್ನು ನಿಭಾಯಿಸೋಣ. ನಾವು ಕೆಲಸ ಮಾಡಬೇಕಿದೆ ಮತ್ತು ನಮ್ಮ ಆರ್ಥಿಕತೆ ಮತ್ತು ಉದ್ಯಮವನ್ನು ಎತ್ತರಕ್ಕೇರಿಸಬೇಕಿದೆ. ನಾವು ಈಗ ಉಳಿದುಕೊಂಡರೆ, ನಾವು ಬಯಸಿದ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತೇವೆ. ಹೆದರಿಕೊಳ್ಳುವ ಕಾಲ ಮುಗಿದಿದೆ. ನಮ್ಮ ಕರ್ತವ್ಯ ಎಸಗುವ ಮತ್ತು ನಮ್ಮ ಗೌರವ, ಸಂಪತ್ತು ಮತ್ತು ಸಂತೃಪ್ತಿಯನ್ನು ಮರುಗಳಿಸಿಕೊಳ್ಳುವ ಸಮಯ ಇದು.

(ಲೇಖಕರು: ಇಂದ್ರಶೇಖರ್ ಸಿಂಗ್‌, ನಿರ್ದೇಶಕರು, ಪಾಲಿಸಿ ಮತ್ತು ಔಟ್‌ರೀಚ್, ಭಾರತೀಯ ರಾಷ್ಟ್ರೀಯ ಬೀಜ ಸಂಘಟನೆ)

Last Updated : May 7, 2020, 8:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.