ನವದೆಹಲಿ: ದೇಶದಲ್ಲಿ ಉದ್ಭವಿಸಿರುವ ಕೊರೊನಾ ವೈರಸ್ ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಹಿನ್ನೆಲೆಯಲ್ಲಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶದ ಮಾಧ್ಯಮ ದಿಗ್ಗಜರೊಂದಿಗೆ ಸಂವಾದ ನಡೆಸಿದರು.
ಈನಾಡು ಸುದ್ದಿ ಸಂಸ್ಥೆಯ ಮುಖ್ಯಸ್ಥರಾದ ರಾಮೋಜಿ ರಾವ್, ದೈನಿಕ್ ಭಾಸ್ಕರ್ನ ಸುಧೀರ ಅಗರ್ವಾಲ್, ಸಕಾಲ ಪತ್ರಿಕೆಯ ಅಭಿಜಿತ್ ಪವಾರ್, ಪಂಜಾಬ್ ಕೇಸರಿಯ ಅವಿನಾಶ್ ಚೋಪ್ರಾ, ದಿ ಹಿಂದು ಪತ್ರಿಕೆಯ ಮಾಲಿನಿ ಪಾರ್ಥಸಾರಥಿ, ರಾಜಸ್ಥಾನ ಪತ್ರಿಕಾ ಸಂಸ್ಥೆಯ ಗುಲಾಬ್ ಕೋಠಾರಿ, ನಿಹಾರ ಕೋಠಾರಿ ಮುಂತಾದವರು ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗವಹಿಸಿ ಪ್ರಧಾನಿಯೊಂದಿಗೆ ಸಂವಾದ ನಡೆಸಿದ್ದಾರೆ.
ಕೊರೊನಾ ವೈರಸ್ ತಡೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿರುವ ಪ್ರಧಾನಿ ಮೋದಿ ಈಗ ಬಿಕ್ಕಟ್ಟು ನಿಭಾಯಿಸಲು ಪತ್ರಿಕಾ ಮಾಧ್ಯಮ ದಿಗ್ಗಜರ ಅನುಭವದ ಸಹಾಯವನ್ನೂ ಪಡೆಯಲು ಮುಂದಾಗಿರುವಂತಿದೆ.