ETV Bharat / state

'ಚಿಲ್ಲರೆ' ಜಗಳವಿಲ್ಲ, ಸ್ಕ್ಯಾನ್ ಮಾಡಿ ಟಿಕೆಟ್‌ ಪಡೆಯಿರಿ: ಡಿಜಿಟಲೀಕರಣದಲ್ಲಿ NWKRTC ಯಶಸ್ಸು, ಸಂಸ್ಥೆಗೂ ಪ್ರಯಾಣಿಕರಿಗೂ ಅನುಕೂಲ

NWKRTC ತನ್ನ ಕೆಲವು ಬಸ್‌ಗಳಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿಗೆ ತಂದಿದ್ದು, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಕುರಿತು ಹುಬ್ಬಳ್ಳಿ 'ಈಟಿವಿ ಭಾರತ' ಪ್ರತಿನಿಧಿ ಹೆಚ್‌.ಬಿ.ಗಡ್ಡದ ನೀಡಿರುವ ವಿಶೇಷ ವರದಿ ಇಲ್ಲಿದೆ.

NWKRTC Bus conductor holding QR Code
ಕ್ಯೂಆರ್​ ಕೋಡ್​ ತೋರಿಸುತ್ತಿರುವ ವಾಯುವ್ಯ ಕರ್ನಾಟಕ ಸಾರಿಗೆ ಬಸ್​ ನಿರ್ವಾಹಕ (ETV Bharat)
author img

By ETV Bharat Karnataka Team

Published : Nov 14, 2024, 10:00 AM IST

Updated : Nov 14, 2024, 2:05 PM IST

ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(NWKRTC) ಪ್ರಯಾಣಿಕಸ್ನೇಹಿಯಾಗುವತ್ತ ಮುಂದಡಿ ಇಟ್ಟಿದೆ. ಬಸ್​ ಪ್ರಯಾಣಿಕರ ಅನುಕೂಲಕ್ಕಾಗಿ ಆನ್​ಲೈನ್ ಪೇಮೆಂಟ್ ಸಿಸ್ಟಂ (ಯುಪಿಐ) ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಜಾರಿ ಮಾಡಿದೆ. ನಗದುರಹಿತ ಯುಪಿಐ ವಹಿವಾಟುಗಳ ಮೂಲಕ ಟಿಕೆಟ್ ವಿತರಣೆಯನ್ನು 2023ರ ಸೆಪ್ಟೆಂಬರ್ 1ರಿಂದ ಪ್ರಾರಂಭಿಸಲಾಗಿದ್ದು, ಪ್ರಸ್ತುತ 51 ಘಟಕಗಳಲ್ಲಿ ನಿರ್ವಹಿಸುತ್ತಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ.

ಈ ಮೂಲಕ ವಾಯವ್ಯ ಕರ್ನಾಟಕ ಸಾರಿಗೆ ಸಂಪೂರ್ಣ ಡಿಜಿಟಲ್ ಆಗುವತ್ತ ಪ್ರಯತ್ನ ಆರಂಭಿಸಿದೆ. ಇದಕ್ಕಾಗಿ ನಡೆಯುತ್ತಿರುವ ಪ್ರಾಯೋಗಿಕ ಯೋಜನೆ ಯಶಸ್ವಿಯತ್ತ ಮುನ್ನಡೆದಿದೆ.

ಡಿಜಿಟಲೀಕರಣದಲ್ಲಿ NWKRTC ಯಶಸ್ಸು (ETV Bharat)

ಡಿಜಿಟಲ್ ಟ್ರಾನ್ಸ್​ಫರ್ ಯುಪಿಐ ವ್ಯವಸ್ಥೆ ಕುರಿತಂತೆ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ, ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, "ಡಿಜಿಟಲ್ ಪೇಮೆಂಟ್ ವ್ಯವಸ್ಥೆಯನ್ನು ವಿಭಾಗದ ಎಲ್ಲಾ ಡಿಪೋಗಳಲ್ಲಿ ಜಾರಿ ಮಾಡಲಾಗಿದೆ. ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಯುಪಿಐ ಬಳಕೆ ಮಾಡುವವರು ಎರಡರಿಂದ, ಮೂರು ಪಟ್ಟು ಹೆಚ್ಚಾಗಿದ್ದಾರೆ. ಇದರಿಂದ ಪ್ರತಿದಿನ ಆನ್​ಲೈನ್ ಪೇಮೆಂಟ್​ನಿಂದ 28 ಲಕ್ಷ ರೂ. ಜಮಾ ಆಗುತ್ತಿದೆ. 30 ಸಾವಿರಕ್ಕೂ ‌ಮೆಲ್ಪಟ್ಟು ವಹಿವಾಟು ನಡೆಸುತ್ತಿದೆ. ಯುಪಿಐ ಜಾರಿಗೊಳಿಸಿದಾಗಿನಿಂದ‌ ಇಲ್ಲಿಯವರೆಗೂ 50 ಕೋಟಿ ಸಂಗ್ರಹವಾಗಿದೆ" ಎಂದು ಮಾಹಿತಿ ನೀಡಿದರು‌.

ಜನಸ್ನೇಹಿ ವ್ಯವಸ್ಥೆ: "ಬಸ್‌ಗಳಲ್ಲಿ ಚಿಲ್ಲರೆ ವಿಚಾರಕ್ಕೆ ಜಗಳ ಆಗುವುದನ್ನು ತಪ್ಪಿಸಲು ನಿಗಮ ಮೊದಲ ಹೆಜ್ಜೆ ಇಟ್ಟಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಾಮಾನ್ಯವಾಗಿ ಎಲ್ಲಾ ಬಸ್‌ಗಳಲ್ಲಿ ಟಿಕೆಟ್ ಪಡೆಯಲು ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿಗೆ ತಂದಿದೆ. ಸದ್ಯ ಕೆಲವು ಬಸ್‌ಗಳಲ್ಲಿ ಈ ಸೌಲಭ್ಯವಿಲ್ಲ. ಹಂತಹಂತವಾಗಿ ಎಲ್ಲಾ ಮಾದರಿ ಬಸ್‌ಗಳಲ್ಲಿ ಈ ಸೌಲಭ್ಯ ಜಾರಿಗೊಳಿಸಲು ಯೋಜಿಸಿದೆ" ಎಂದು ಅವರು ಹೇಳಿದರು.

ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ: "ಬಸ್‌ಗಳಲ್ಲಿ ಸಂಚಾರ ನಡೆಸುವಾಗ ಜೇಬಿನಲ್ಲಿ ಹಣವಿಲ್ಲದಿದ್ದರೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್‌ ಪಡೆಯಬಹುದು. ಇದರಿಂದಾಗಿ ಜನರು ಹಣ ತರುವುದನ್ನು ಮರೆತರೂ ಟಿಕೆಟ್ ಪಡೆಯಲು ಅನುಕೂಲವಾಗುತ್ತದೆ. ಅಲ್ಲದೇ, ಚಿಲ್ಲರೆ ವಿಚಾರಕ್ಕೆ ಬಸ್‌ಗಳಲ್ಲಿ ಆಗುವ ವಾಗ್ವಾದಕ್ಕೆ ತಡೆ ಬೀಳಲಿದೆ. ಶಕ್ತಿ ಯೋಜನೆ ಜಾರಿಯಾದಾಗಿನಿಂದ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಿದ್ದು, ಚಿಲ್ಲರೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಇದು ಪ್ರಯಾಣಿಕರು ಹಾಗೂ ಸಿಬ್ಬಂದಿಯ ಸಮಯ ಉಳಿಸುತ್ತಿದೆ" ಎಂದು ತಿಳಿಸಿದರು.

"ನಮ್ಮ ಸಂಸ್ಥೆಯ ಅಕೌಂಟಿಂಗ್ ವ್ಯವಸ್ಥೆಯೂ ಸುಲಭವಾಗುತ್ತಿದೆ.‌ ನಗದುರಹಿತ ವ್ಯವಹಾರ ಮಾಡಬೇಕು ‌ಎಂಬುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉದ್ದೇಶವಾಗಿದೆ. ಹೀಗಾಗಿ ನಮ್ಮ ಕಾರ್ಯಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಪ್ರಶಂಸನಾ ಪತ್ರ ಬಂದಿದೆ. ಡಿಜಿಟಲ್ ಯೋಜನೆ ಚೆನ್ನಾಗಿ ನಡೆಯುತ್ತಿದ್ದು, ರಾಜ್ಯದಲ್ಲಿ ಅತೀ ಹೆಚ್ಚು ಡಿಜಿಟಲ್ ವ್ಯವಹಾರ ನಡೆಸುವ ಸಂಸ್ಥೆ ಎಂಬ ಹೆಗ್ಗಳಿಕೆ ಇದೆ" ಎಂದರು.

"ಯುಪಿಐ ವಹಿವಾಟು ವ್ಯವಸ್ಥೆಯನ್ನು ಸಂಸ್ಥೆಯ ವಾಣಿಜ್ಯ ಆದಾಯ, ಪ್ರಾಸಂಗಿಕ ಕರಾರು ಮೊತ್ತ ಪಾವತಿ, ಮಾಸಿಕ ಪಾಸು ಆದಾಯ ಹಾಗೂ ಮುಂಗಡ ಆಸನ ಕಾಯ್ದಿರಿಸುವ ಕೌಂಟರ್​ಗಳಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲು ಸಂಸ್ಥೆ ನಿರ್ಧಾರ ಕೈಗೊಂಡಿದ್ದು, ಈ ಮೂಲಕ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವ ಮೂಲಕ ಹೈಟೆಕ್ ಆಗುವತ್ತ ಹೆಜ್ಜೆ ಇಟ್ಟಿದೆ" ಎಂದು ಹೇಳಿದರು.

ಈ ಕುರಿತು ಪ್ರಯಾಣಿಕ ವಸಂತ ಮಾತನಾಡಿ, "ಚಿಲ್ಲರೆ ಸಮಸ್ಯೆ ಇರುವುದಿಲ್ಲ. ಚಿಲ್ಲರೆ ಇಲ್ಲದ ಸಮಯದಲ್ಲಿ ಟಿಕೆಟ್ ಹಿಂದೆ ಬರೆದು ಕೊಡುತ್ತಿದ್ದರು‌. ಪ್ರಯಾಣಿಕರು ಚಿಲ್ಲರೆ ಹಣ ಪಡೆಯದೆ ಮರೆತು ಹೋಗುತ್ತಿದ್ದರು. ಈಗ ಈ ವ್ಯವಸ್ಥೆಯಿಂದ ಆ ಸಮಸ್ಯೆ ಇಲ್ಲ. ಬಹಳ ಅನುಕೂಲವಾಗಿದೆ" ಎಂದರು‌.

ಇದನ್ನೂ ಓದಿ: ಚಿಲ್ಲರೆ ಸಮಸ್ಯೆಗೆ ಮುಕ್ತಿ; ನಿಮಗೆ ಬೇಕಾದ ಕಾಯಿನ್​ ನೀಡುತ್ತೆ ಕ್ಯೂಆರ್​ ಕೋಡ್​​ ಆಧಾರಿತ ಈ ವೆಂಡಿಂಗ್​ ಮಷಿನ್​!

Last Updated : Nov 14, 2024, 2:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.