ETV Bharat / bharat

'ಡಿಎನ್​ಎ ಓರಿಗ್ಯಾಮಿ' ತಂತ್ರಜ್ಞಾನದಿಂದ ಎಚ್​ಐವಿ ವ್ಯಾಕ್ಸಿನ್? - ವೈರಸ್​ ಮಾದರಿಯ ಆಕಾರ

ಅಳತೆ ಹಾಗೂ ಆಕಾರದಲ್ಲಿ ಥೇಟ್ ವೈರಸ್​ ರೀತಿಯಲ್ಲೇ ಇರುವ ಈ ಡಿಎನ್​ಎ ಕಣಗಳ ಸುತ್ತ ಎಚ್​ಐವಿ ಪ್ರೊಟೀನ್​, ಅಥವಾ ಆ್ಯಂಟಿಜೆನ್ಸ್​ ಸವರಲಾಗಿದ್ದು, ಅತ್ಯಂತ ಪ್ರಬಲ ರೋಗನಿರೋಧಕ ಶಕ್ತಿಯನ್ನು ಪ್ರದರ್ಶಿಸುವ ರೀತಿಯಲ್ಲಿ ಇವುಗಳನ್ನು ಜೋಡಿಸಲಾಗಿದೆ. ಪ್ರಸ್ತುತ ಸಂಶೋಧಕರು ಇದೇ ವಿಧಾನವನ್ನು ಬಳಸಿ ಕೋವಿಡ್​-19 ಗೆ ವ್ಯಾಕ್ಸಿನ್ ಕಂಡುಹಿಡಿಯಲು ಮುಂದಾಗಿದ್ದಾರೆ. ಅಲ್ಲದೆ ಈ ವಿಧಾನವು ಹಲವಾರು ವೈರಸ್​ಗಳ ವಿರುದ್ಧದ ಹೋರಾಟಕ್ಕೆ ಸಹಾಯಕವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

DNA origami
DNA origami
author img

By

Published : Jul 2, 2020, 4:35 PM IST

ಹೈದರಾಬಾದ್: ಡಿಎನ್​ಎ ಯನ್ನು ವೈರಸ್​​ ರಚನೆಯ ಮಾದರಿಯಲ್ಲಿ ಮಡಚುವ ಮೂಲಕ ಎಚ್​ಐವಿಯನ್ನೇ ಹೋಲುವ ಕಣಗಳನ್ನು ಮೆಸಾಚುಸೆಟ್ಸ್​ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿಜ್ಞಾನಿಗಳು ತಯಾರಿಸಿದ್ದಾರೆ. ಡಿಎನ್​ಎ ಓರಿಗ್ಯಾಮಿ ಎಂಬ ತಂತ್ರಜ್ಞಾನ ಬಳಸಿ ಮಾನವ ರೋಗ ನಿರೋಧಕ ಕೋಶಗಳಿಂದ ಪ್ರಯೋಗಾಲಯದ ತಟ್ಟೆಯಲ್ಲಿ ಬೆಳೆಸಲಾದ ಕೋಶಗಳಿಗೆ ಪ್ರತಿಯಾಗಿ ಈ ಕಣಗಳು ಪ್ರಬಲ ರೋಗನಿರೋಧಕ ಗುಣಗಳನ್ನು ಪ್ರದರ್ಶಿಸಿವೆ ಹಾಗೂ ಈ ತಂತ್ರಜ್ಞಾನವು ಎಚ್​ಐವಿ ಏಡ್ಸ್​ಗೆ ವ್ಯಾಕ್ಸಿನ್ ಕಂಡುಹಿಡಿಯಲು ಸಹಾಯಕವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಅಳತೆ ಹಾಗೂ ಆಕಾರದಲ್ಲಿ ಥೇಟ್ ವೈರಸ್​ ರೀತಿಯಲ್ಲೇ ಇರುವ ಈ ಡಿಎನ್​ಎ ಕಣಗಳ ಸುತ್ತ ಎಚ್​ಐವಿ ಪ್ರೊಟೀನ್​, ಅಥವಾ ಆ್ಯಂಟಿಜೆನ್ಸ್​ ಸವರಲಾಗಿದ್ದು, ಅತ್ಯಂತ ಪ್ರಬಲ ರೋಗನಿರೋಧಕ ಶಕ್ತಿಯನ್ನು ಪ್ರದರ್ಶಿಸುವ ರೀತಿಯಲ್ಲಿ ಇವುಗಳನ್ನು ಜೋಡಿಸಲಾಗಿದೆ. ಪ್ರಸ್ತುತ ಸಂಶೋಧಕರು ಇದೇ ವಿಧಾನವನ್ನು ಬಳಸಿ ಕೋವಿಡ್​-19 ಗೆ ವ್ಯಾಕ್ಸಿನ್ ಕಂಡುಹಿಡಿಯಲು ಮುಂದಾಗಿದ್ದಾರೆ. ಅಲ್ಲದೆ ಈ ವಿಧಾನವು ಹಲವಾರು ವೈರಸ್​ಗಳ ವಿರುದ್ಧದ ಹೋರಾಟಕ್ಕೆ ಸಹಾಯಕವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

"ಸದ್ಯ ಪ್ರಾಥಮಿಕವಾಗಿ ತಿಳಿದು ಬರುತ್ತಿರುವ ಈ ಡಿಸೈನ್ ನಿಯಮಗಳು ಎಲ್ಲ ರೋಗಗಳು ಹಾಗೂ ರೋಗಗಳ ಪ್ರತಿಕಾಯಗಳಿಗೆ ಜೆನೆಟಿಕ್ ರೂಪದಲ್ಲಿ ಅನ್ವಯಿಸಬಹುದು." ಎಂದು ಅಂಡರ್​ವುಡ್-ಪ್ರೆಸ್ಕಾಟ್ ಪ್ರಾಧ್ಯಾಪಕ ಡರೆಲ್ ಇರ್ವಿನ್ ಹೇಳಿದ್ದಾರೆ.

ನೇಚರ್ ಪಬ್ಲಿಶಿಂಗ್​ ಗ್ರೂಪ್​ ಪ್ರಕಟಿಸುವ ನೇಚರ್ ನ್ಯಾನೊಟೆಕ್ನಾಲಜಿ ಎಂಬ ವೈಜ್ಞಾನಿಕ ಮಾಸಿಕದಲ್ಲಿ ಈ ವರದಿಯು ಪ್ರಕಟವಾಗಿದೆ.

ಡಿಎನ್​ಎ ಓರಿಗ್ಯಾಮಿ ತಂತ್ರಜ್ಞಾನ:

ಡಿಎನ್​ಎ ಮಾಲಿಕ್ಯೂಲ್​ಗಳನ್ನು ಡಿಸೈನ್​ ಮಾಡುವ ತಂತ್ರಜ್ಞಾನಗಳನ್ನು 1980 ರಿಂದಲೇ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ. ಔಷಧ ತಯಾರಿಕೆ ಹಾಗೂ ಇತರ ಸಂಬಂಧಿತ ಉದ್ದೇಶಗಳಿಗಾಗಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದೇ ಮಾದರಿಯ ಡಿಎನ್​ಎ ಓರಿಗ್ಯಾಮಿ ತಂತ್ರಜ್ಞಾನವನ್ನು 2006 ರಲ್ಲಿ ಕಾಲ್ಟೆಕ್​ನ ಪೌಲ್ ರಿಚ್ಮಂಡ್ ಎಂಬುವರು ಕಂಡು ಹಿಡಿದಿದ್ದಾರೆ.

ಮೆಸಾಚುಸೆಟ್ಸ್​ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಯಾಲಾಜಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಮಾರ್ಕ್ ಬಾಥ್ ಎಂಬುವರು ತಮ್ಮ ಪ್ರಯೋಗಾಲಯದಲ್ಲಿ ಅಲ್ಗೊರಿದಂ ಒಂದನ್ನು ಅಭಿವೃದ್ಧಿಪಡಿಸಿದ್ದು, ಈ ಅಲ್ಗೊರಿದಂ ಡಿಎನ್​ಎ ಓರಿಗ್ಯಾಮಿ ತಂತ್ರಜ್ಞಾನವನ್ನು ಬಳಸಿ ಥ್ರೀ-ಡೈಮೆನ್ಷನ್ ವೈರಸ್​ ಮಾದರಿಯ ಆಕಾರಗಳನ್ನು ಸ್ವಯಂಚಾಲಿತವಾಗಿ ಡಿಸೈನ್ ಮಾಡಿ ರಚಿಸುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.