ETV Bharat / bharat

ವೈಜಾಗ್​ ಅನಿಲ ಸೋರಿಕೆ​ ದುರಂತ: ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದ ಎನ್​​ಡಿಆರ್​ಎಫ್ - ಎನ್​ಡಿರ್​ಎಫ್​​ನ ಡೈರೆಕ್ಟರ್​​ ಎಸ್​​ಎನ್​ ಪ್ರಧಾನ್​

ಎಲ್​​ಜಿ ಪಾಲಿಮರ್​​ ಕಾರ್ಖಾನೆಯಲ್ಲಿ ನಡೆದಿರುವ ವಿಷಾನಿಲ ದುರಂತ ಪ್ರಕರಣ ಇದೀಗ ಸಂಪೂರ್ಣವಾಗಿ ಹತೋಟಿಯಲ್ಲಿದೆ ಎಂದು ಎನ್​ಡಿಆರ್​ಎಫ್​ ಮಾಹಿತಿ ನೀಡಿದೆ.

Vizag factory
Vizag factory
author img

By

Published : May 8, 2020, 1:21 PM IST

ನವದೆಹಲಿ: ಆಂಧ್ರಪ್ರದೇಶದ ವಿಶಾಖಪಟ್ಟಣಂ ವೆಂಕಟಾಪುರ​​ದಲ್ಲಿ ನಡೆದಿರುವ ವಿಷಾನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಡಿಆರ್​ಎಫ್​​ನ ನಿರ್ದೇಶಕ​​ ಎಸ್.​​ಎನ್.ಪ್ರಧಾನ್​ ಮಾತನಾಡಿ ಮಾಹಿತಿ ನೀಡಿದ್ದು, ಎಲ್ಲವೂ ಹತೋಟಿಯಲ್ಲಿದೆ ಎಂದಿದ್ದಾರೆ.

ಕಾರ್ಖಾನೆಯಲ್ಲಿ ಎರಡು ಸಲ ಅನಿಲ ಸೋರಿಕೆ​​ ಆಗಿದೆ ಎಂಬ ಸುಳ್ಳು ಸುದ್ದಿ ಹಬ್ಬಿದೆ. ಈ ಸುದ್ದಿ ಸತ್ಯಕ್ಕೆ ದೂರವಾಗಿದೆ. ಆ ರೀತಿಯಾಗಿ ನಡೆದಿಲ್ಲ ಎಂದಿರುವ ಅವರು ಪ್ರಕರಣ ಇದೀಗ ಹತೋಟಿಯಲ್ಲಿದೆ. ತಾಂತ್ರಿಕ ಕಾರಣದಿಂದ ಸ್ಥಾವರದಲ್ಲಿ ಸೋರಿಕೆ ಆಗಿದೆ ಎಂದು ತಿಳಿಸಿದ್ದಾರೆ.

ವೈಜಾಗ್​ ಗ್ಯಾಸ್​ ಲೀಕ್​ ದುರಂತ:ಎನ್​ಡಿಆರ್​ಎಫ್​ ಡೈರೆಕ್ಟರ್​ ಮಾಹಿತಿ

ನಿನ್ನೆ ನಡೆದಿದ್ದ ವಿಷಾನಿಲ ಸೋರಿಕೆಯಲ್ಲಿ 12 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಜನರು ಆಸ್ಪತ್ರೆಗೆ ಸೇರಿಕೊಂಡಿದ್ದಾರೆ. ಇದರ ಮಧ್ಯೆ ಕಾರ್ಖಾನೆ ಸುತ್ತಮುತ್ತಲಿನ ಗ್ರಾಮದ 5 ಸಾವಿರ ಜನರಲ್ಲಿ ಅನಾರೋಗ್ಯ ಕಾಣಿಸಿಕೊಂಡಿತ್ತು. ಘಟನಾ ಸ್ಥಳಕ್ಕೆ ಧಾವಿಸಿದ್ದ ಎನ್​​ಡಿಆರ್​ಎಫ್​ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದರು.

ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಗೃಹ ಸಚಿವ ಹಾಗೂ ರಕ್ಷಣಾ ಸಚಿವರು ಸೇರಿದಂತೆ ಪ್ರಮುಖ ಎನ್​ಡಿಆರ್​ಎಫ್​ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಘಟನಾ ಸ್ಥಳಕ್ಕೆ ಧಾವಿಸಿದ್ದ ಆಂಧ್ರ ಸಿಎಂ ಜಗನ್​ಮೋಹನ್​ ರೆಡ್ಡಿ ಮೃತರ ಕುಟುಂಬಕ್ಕೆ ತಲಾ 1 ಕೋಟಿ ರೂ ನಗದು ಹಾಗೂ ಓರ್ವರಿಗೆ ಕೆಲಸದ ಭರವಸೆ ನೀಡಿದ್ದಾರೆ. ಜೊತೆಗೆ ಗಾಯಾಳುಗಳಿಗೂ ಪ್ರತ್ಯೇಕ ಪರಿಹಾರ ಪ್ರಕಟಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.