ಆಗ್ರಾ (ಉತ್ತರ ಪ್ರದೇಶ): ಹಥ್ರಾಸ್ನ ದಲಿತ ಯುವತಿಯ ಮೇಲೆ ನಡೆದ ಘೋರ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಕಹಿ ನೆನಪು ಮಾಸುವ ಮುನ್ನವೇ ಉತ್ತರ ಪ್ರದೇಶದ ಆಗ್ರಾದಲ್ಲಿ ಮತ್ತೊಂದು ಬಾಲಕಿಯ ಮೇಲೆ ಅತ್ಯಾಚಾರ ಎಸಗಲಾಗಿದೆ.
ಆಗ್ರಾದ ಫತೇಪುರ್ ಸಿಕ್ರಿಯಲ್ಲಿ ಬುಧವಾರ ರಾತ್ರಿ ಈ ಘಟನೆ ಜರುಗಿದ್ದು," ನಿನ್ನೆ ಸಂಜೆ ಕೆಲವು ಕೆಲಸಗಳ ನಿಮಿತ್ತ ಅವಳು ಹೊರಗೆ ಹೋಗಿದ್ದಳು. ಆದರೆ, ರಾತ್ರಿಯವರೆಗೂ ಹಿಂತಿರುಗದಿದ್ದುದ್ದನ್ನು ಕಂಡ ನಾವು ಅವಳನ್ನು ಹುಡುಕಲು ಪ್ರಾರಂಭಿಸಿದೆವು. ಕೊನೆಗೆ ನಮ್ಮ ಹಳ್ಳಿಯ ಹೊರಭಾಗದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಅವಳನ್ನು ಕಂಡೆವು" ಎಂದು ಆಕೆಯ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.
ಹಥ್ರಾಸ್ನಲ್ಲಿ ನಡೆದ ಅಮಾನವೀಯ ಘಟನೆಯ ಕುರಿತು ದೇಶದೆಲ್ಲೆಡೆ ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವಾಗ ಎಚ್ಚೆತ್ತಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಾಲಕಿಯನ್ನು ಆರೋಗ್ಯ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.ಆದರೆ ಇದುವರೆಗೂ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ.