ETV Bharat / bharat

ಎಂಐ-17 ಸೇನಾ ಹೆಲಿಕಾಪ್ಟರ್ ಪತನ ಪ್ರಕರಣ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ತಡೆ - ಜೈಷ್ ಇ ಮೊಹಮ್ಮದ್

ಕ್ಷಿಪಣಿ ಬಳಸಿ ಎಂ-17 ಸೇನಾ ಹೆಲಿಕಾಪ್ಟರ್​​​ಅನ್ನು ಹೊಡೆದುರುಳಿಸಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳ ವಿರುದ್ಧದ ಕ್ರಮಕ್ಕೆ ಸಶಸ್ತ್ರ ಪಡೆಗಳ ನ್ಯಾಯಾಲಯ ತಡೆ ನೀಡಿದೆ.

Mi-17 shooting case
ಎಂಐ-17 ಸೇನಾ ಹೆಲಿಕಾಪ್ಟರ್
author img

By

Published : Sep 15, 2020, 8:51 AM IST

ನವದೆಹಲಿ: ಕಳೆದ ವರ್ಷ ಫೆಬ್ರವರಿ 27ರಂದು ವಾಯುಪಡೆಯ ಎಂಐ- 17 ಹೆಲಿಕಾಪ್ಟರ್ ಪತನ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳ ವಿರುದ್ಧದ ಕಾನೂನು ಕ್ರಮಕ್ಕೆ ಸಶಸ್ತ್ರ ಪಡೆಗಳ ನ್ಯಾಯಾಲಯ ತಡೆ ನೀಡಿದೆ.

ಜಮ್ಮು-ಕಾಶ್ಮೀರದ ಬದ್ಗಾಂನಲ್ಲಿ ಈ ಘಟನೆ ನಡೆದಿದ್ದು, ಹೆಲಿಕಾಪ್ಟರ್​ನಲ್ಲಿದ್ದ ಆರು ಮಂದಿ ವಾಯುಪಡೆ ಅಧಿಕಾರಿಗಳು ಹಾಗೂ ಓರ್ವ ನಾಗರಿಕ ಸಾವನ್ನಪ್ಪಿದ್ದು, ಈ ಕುರಿತಂತೆ ಮಿಲಿಟರಿ ನ್ಯಾಯಾಲಯ ಸೋಮವಾರ ಈ ರೀತಿಯಾಗಿ ಆದೇಶ ನೀಡಿದೆ.

ಭಾರತೀಯ ವಾಯುಪಡೆಯ ಗ್ರೂಪ್​ ಕ್ಯಾಪ್ಟನ್ ಎಸ್.ಆರ್. ಚೌಧರಿ ಹಾಗೂ ವಿಂಗ್ ಕಮಾಂಡರ್ ಶ್ಯಾಮ್ ನೈತಾನಿ ಅವರ ವಿರುದ್ಧ ಕ್ರಮ ಜರುಗಲಿದ್ದು, ಇಬ್ಬರೂ ಅಧಿಕಾರಿಗಳ ಪರ ವಕೀಲ ಅಂಕುರ್ ಚಿಬ್ಬಾರ್ ವಾದ ಮಂಡಿಸಿದ್ದರು.

ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಸಾಮರ್ಥ್ಯವುಳ್ಳ ಭಾರತೀಯ ಕ್ಷಿಪಣಿಯನ್ನೇ ಬಳಸಿ, ಹೆಲಿಕಾಪ್ಟರ್​ ಧ್ವಂಸಗೊಳಿಸಿದ ಆರೋಪ ಇವರ ಮೇಲಿದ್ದು, ಹೆಲಿಕಾಪ್ಟರ್​ ಆಕಾಶಕ್ಕೆ ಹಾರಿದ 10 ನಿಮಿಷಗಳಲ್ಲಿ ಕೆಳಗುರುಳಿಸಿತ್ತು.

ಪಾಕಿಸ್ತಾನದ ಬಾಲಾಕೋಟ್​​ನಲ್ಲಿ ಜೈಷ್ ಎ ಮೊಹಮ್ಮದ್ ತರಬೇತಿ ಕೇಂದ್ರದ ಮೇಲೆ ಭಾರತೀಯ ವಾಯುಪಡೆ ಏರ್​ಸ್ಟ್ರೈಕ್ ನಡೆಸಿದ ನಂತರದ ದಿನವೇ ಈ ಘಟನೆ ನಡೆದಿದ್ದು, ಸಾಕಷ್ಟು ವಿವಾದ ಸೃಷ್ಟಿಸಿತ್ತು.

ಸಶಸ್ತ್ರ ಪಡೆಗಳ ನ್ಯಾಯಾಲಯದ ಮುಖ್ಯಸ್ಥ ನಿವೃತ್ತ ಲೆಫ್ಟಿನೆಂಟ್ ಜನರಲ್ ಫಿಲಿಪ್ ಕ್ಯಾಂಪೋಸ್ ಹಾಗೂ ಜಸ್ಟೀಸ್ ರಾಜೇಂದ್ರ ಮೆನನ್ ಈ ರೀತಿಯ ಆದೇಶ ನೀಡಿದ್ದು, ಈ ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 30ರಂದು ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.