ETV Bharat / bharat

ಉಗ್ರರ ತಾಣಗಳ ಮೇಲೆ ದಾಳಿ; ಶಸ್ತ್ರಾಸ್ತ್ರ, ಐಇಡಿ ಸಲಕರಣೆ​ ವಶ - ಗುಂಡಿನ ಚಕಮಕಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗಿದ್ದು, ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ. ಉಗ್ರರ ಅಡಗುತಾಣವೊಂದರ ಮೇಲೆ ದಾಳಿ ಮಾಡಿದ ಯೋಧರು ಶಸ್ತ್ರಾಸ್ತ್ರ ಹಾಗೂ ಬಾಂಬ್​ ತಯಾರಿಸುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Militants flee Kulgam home
Militants flee Kulgam home
author img

By

Published : Apr 11, 2020, 6:22 PM IST

ಕುಲ್ಗಾಮ್ (ಜಮ್ಮು ಮತ್ತು ಕಾಶ್ಮೀರ): ಉಗ್ರವಾದಿಗಳ ಅಡಗುತಾಣವೊಂದರ ಮೇಲೆ ದಾಳಿ ಮಾಡಿದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶಸ್ತ್ರಾಸ್ತ್ರ ಹಾಗೂ ಬಾಂಬ್​ ತಯಾರಿಸುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉಗ್ರರು ಅಡಗಿರುವ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಹಾಗೂ ಸೇನಾ ಸಿಬ್ಬಂದಿ ಕುಲ್ಗಾಮ್​ನ ನಂದಿಮಾರ್ಗ್​ನ ಪ್ರದೇಶವೊಂದರ ಮೇಲೆ ದಾಳಿ ನಡೆಸಿದ್ದರು.

ಭದ್ರತಾ ಪಡೆ ಹಾಗೂ ಉಗ್ರವಾದಿಗಳ ಮಧ್ಯೆ ಕೆಲ ಹೊತ್ತು ಗುಂಡಿನ ಚಕಮಕಿ ನಡೆದ ನಂತರ ಉಗ್ರರು ತಾವು ಅಡಗಿಕೊಂಡಿದ್ದ ಸ್ಥಳದಿಂದ ಪರಾರಿಯಾಗಿದ್ದರು. ಉಗ್ರರು ಅಡಗಿದ ಸ್ಥಳದಿಂದ ಒಂದು PIKA LMG ಗನ್ ಹಾಗೂ ಐಇಡಿ ಬಾಂಬ್​ ತಯಾರಿಸಲು ಬಳಸಲಾಗುವ ಮದ್ದು ಹಾಗೂ ಇನ್ನಿತರ ವಸ್ತುಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ.

ಗುಂಡಿನ ಚಕಮಕಿ ಆರಂಭವಾಗುತ್ತಲೇ ಉಗ್ರರು ಪರಾರಿಯಾಗಿದ್ದಾರೆ. ಅವರ ಪತ್ತೆಗೆ ಶ್ವಾನದಳದ ನೆರವು ಪಡೆಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.