ಗುರುಗ್ರಾಮ್(ಹರಿಯಾಣ): ದೆಹಲಿ- ಹರಿಯಾಣದ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರ ಮೇಲೆ ವಲಸೆ ಕಾರ್ಮಿಕರು ಕಲ್ಲು ತೂರಾಡಿದ್ದಾರೆ. ಗುರುಗ್ರಾಮದ ಪಾಲಂ ವಿಹಾರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಆಗಿದ್ದೇನು?
ದೆಹಲಿಯಿಂದ ಭಾರಿ ಸಂಖ್ಯೆಯ ಕಾರ್ಮಿಕರು ಹರಿಯಾಣಕ್ಕೆ ಹೊರಟಿದ್ದರು. ಆಗ ಗಡಿಯಲ್ಲಿ ಹರಿಯಾಣ ಪೊಲೀಸರು ಕಾರ್ಮಿಕರನ್ನು ತಡೆದರು. ಇದರಿಂದ ಆಕ್ರೋಶಗೊಂಡ ಕಾರ್ಮಿಕರು ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ.