ನವದೆಹಲಿ : ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ನೀಡಲಾಗಿದ್ದ z+ ಭದ್ರತೆಯನ್ನು ಕಳೆದ ಐದು ದಿನಗಳಿಂದ ನಿಲ್ಲಿಸಲಾಗಿದೆ ಎಂದು ಎನ್‌ಸಿಪಿ ಆರೋಪಿಸಿದೆ.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ನೀಡಿದ್ದ ವಿವಿಐಪಿ ಭದ್ರತೆಯನ್ನು ಹಿಂತೆಗೆದುಕೊಂಡಿದೆ, ಆದರೆ, ಈ ಸಂಬಂಧ ವಿವಿಐಪಿ ಭದ್ರತಾ ರಕ್ಷಣೆಯನ್ನು ಹಿಂತೆಗೆದುಕೊಳ್ಳುವುದು ಮತ್ತು ಅನುಮೋದನೆ ನೀಡುವ ಬಗ್ಗೆ ವ್ಯವಹರಿಸುವ ಗೃಹ ಸಚಿವಾಲಯ (ಎಂಎಚ್‌ಎ) ಈ ವಿಷಯದಲ್ಲಿ ಮೌನವಾಗಿದೆ ಎಂದು ಮಹಾರಾಷ್ಟ್ರ ಸರ್ಕಾರದ ಮಂತ್ರಿಗಳು ಮತ್ತು ಎನ್‌ಸಿಪಿ ನಾಯಕರು ಕೇಂದ್ರ ಸರ್ಕಾರದ ವಿರುದ್ದ ಆರೋಪಿಸಿವೆ.
ಭದ್ರತೆ ವಾಪಸ್ ಪಡೆದಿರುವ ಕುರಿತಾಗಿ ಗೃಹ ಸಚಿವಾಲಯ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ ಎನ್ನಲಾಗುತ್ತಿದೆ. ಅಲ್ಲದೇ ಶರದ್ ಪವಾರ್ ಐಟಿಬಿಪಿ, ಸಿಆರ್ಪಿಎಫ್, ಸಿಐಎಸ್ಎಫ್ ನಿಂದ ಭದ್ರತಾ ರಕ್ಷಣೆಯನ್ನು ಪಡೆದಿಲ್ಲ. ಬಹುತೇಕ ಎಲ್ಲ ವಿವಿಐಪಿಗಳಿಗೆ ನೀಡುವ ಭದ್ರತೆಯನ್ನೆ ನೀಡಲಾಗಿತ್ತು, ಆದರೂ ಅದನ್ನು ವಾಪಾಸ್ ಪಡೆದಿರುವುದಕ್ಕೆ ಎನ್‌ಸಿಪಿ ತೀವ್ರ ಬೇಸರ ವ್ಯಕ್ತಪಡಿಸಿದೆ.