ETV Bharat / bharat

ರಾಜೀವ್​ ಗಾಂಧಿ ಫೌಂಡೇಷನ್​ ಅವ್ಯವಹಾರ: ಗೃಹ ಇಲಾಖೆಯಿಂದ ನೂತನ ಸಮಿತಿ ರಚನೆ - ಗಾಂಧಿ ಚಾರಿಟೇಬಲ್​ ಟ್ರಸ್ಟ್

ರಾಜೀವ್ ಗಾಂಧಿ ಫೌಂಡೇಷನ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳಿಂದ ಆರೋಪ ಮತ್ತು ಪ್ರತ್ಯಾರೋಪಗಳು ಕೇಳಿ ಬರುತ್ತಿದ್ದು, ಈಗ ಗೃಹ ಇಲಾಖೆ ನೂತನ ಸಮಿತಿ ರಚಿಸಿದೆ.

Rajiv Gandhi Foundation
ರಾಜೀವ್ ಗಾಂಧಿ ಫೌಂಡೇಷನ್
author img

By

Published : Jul 8, 2020, 12:25 PM IST

ನವದೆಹಲಿ: ರಾಜೀವ್ ಗಾಂಧಿ ಫೌಂಡೇಷನ್​ನಿಂದ ವಿವಿಧ ರೀತಿಯ ಹಣಕಾಸು ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ಅಂತರ್​ ಇಲಾಖಾ ಸಮಿತಿಯೊಂದನ್ನು ರಚಿಸಲು ಮುಂದಾಗಿದೆ.

ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ, ಆದಾಯ ತೆರಿಗೆ ಕಾಯ್ದೆ, ವಿದೇಶಿ ಬಂಡವಾಳ ನಿಯಂತ್ರಣ ಕಾಯ್ದೆಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ರಾಜೀವ್ ಗಾಂಧಿ ಫೌಂಡೇಷನ್, ಗಾಂಧಿ ಚಾರಿಟಬಲ್​ ಟ್ರಸ್ಟ್​ ಹಾಗೂ ಇಂದಿರಾಗಾಂಧಿ ಮೆಮೋರಿಯಲ್ ಟ್ರಸ್ಟ್ ಮೇಲೆ ಈ ಹೊಸ ಸಮಿತಿ ತನಿಖೆ ಕೈಗೊಳ್ಳಲಿದೆ.

ಈ ನೂತನ ಸಮಿತಿಗೆ ಜಾರಿ ನಿರ್ದೇಶನಾಲಯದ ವಿಶೇಷ ನಿರ್ದೇಶಕರನ್ನು ಈ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸುವುದಾಗಿ ಹೇಳಿಕೊಂಡಿದ್ದು. ಈ ಸಮಿತಿಯ ಬೇರೆ ಬೇರೆ ಇಲಾಖೆಗಳ ಸಹಾಯದಿಂದ ತನಿಖೆ ನಡೆಸಲಿದೆ.

ಇದಕ್ಕೂ ಮೊದಲು ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ರಾಜೀವ್ ಗಾಂಧಿ ಫೌಂಡೇಷನ್​ ಚೀನಾದ ರಾಯಭಾರ ಕಚೇರಿಯಿಂದ ಮೂರು ಲಕ್ಷ ಡಾಲರ್​​ನಷ್ಟು ಮೊತ್ತದ ಹಣವನ್ನು ಅಕ್ರಮವಾಗಿ ಪಡೆದುಕೊಂಡಿತ್ತು ಎಂದು ಆರೋಪಿಸಿ ಕಾಂಗ್ರೆಸ್ ಹಾಗೂ ರಾಜೀವ್ ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಜೊತೆಗೆ ಇದು ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಇದಕ್ಕೆ ಪ್ರತ್ಯುತ್ತರ ನೀಡಿದ ಕಾಂಗ್ರೆಸ್ ಇದು ಸುಳ್ಳು, ಲಡಾಖ್​ ಗಡಿಯ ವಿಚಾರದಿಂದ ಜನರನ್ನು ದಾರಿತಪ್ಪಿಸಲು ಬಿಜೆಪಿ ಈ ತಂತ್ರವನ್ನು ರೂಪಿಸಿದೆ ಎಂದು ಪ್ರತ್ಯಾರೋಪ ಮಾಡಿತ್ತು. ಈಗ ಗೃಹ ಇಲಾಖೆ ಸಮಿತಿಯೊಂದನ್ನು ರಚಿಸಿದ್ದು, ಸತ್ಯಾಂಶ ಹೊರ ಬರಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.