ETV Bharat / bharat

Unlock 4: ಸೆ.7ರಿಂದ ಮೆಟ್ರೋ ಸಂಚಾರ; ಶಾಲೆ-ಕಾಲೇಜುಗಳಿಗೆ ಮುಂದುವರಿದ ನಿರ್ಬಂಧ

author img

By

Published : Aug 29, 2020, 8:44 PM IST

Updated : Aug 29, 2020, 8:50 PM IST

ಕೇಂದ್ರ ಸರ್ಕಾರ ಅನ್‌ಲಾಕ್ 4.0 ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸೆಪ್ಟೆಂಬರ್‌ 7 ರಿಂದ ದೇಶಾದ್ಯಂತ ಮೆಟ್ರೋ ರೈಲು ಸಂಚಾರ ಪ್ರಾರಂಭಕ್ಕೆ ಒಪ್ಪಿಗೆ ನೀಡಲಾಗಿದೆ.

MHA issues new Guidelines
MHA issues new Guidelines

ನವದೆಹಲಿ: ಕೇಂದ್ರ ಗೃಹ ಸಚಿವಾಲಯ ಅನ್​​ಲಾಕ್​ 4.0 ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಸೆಪ್ಟೆಂಬರ್​ 1ರಿಂದ ಈ ನಿಯಮ ದೇಶಾದ್ಯಂತ ಜಾರಿಗೆ ಬರಲಿದೆ. ಪ್ರಮುಖವಾಗಿ ಎಲ್ಲ ರಾಜ್ಯಗಳಲ್ಲಿ ಮೆಟ್ರೋ ಸಂಚಾರಕ್ಕೆ ಕೇಂದ್ರ ಸರ್ಕಾರದಿಂದ ಗ್ರೀನ್​ ಸಿಗ್ನಲ್​ ದೊರೆತಿದೆ.

ಇವುಗಳಿಗೆ ಅನುಮತಿ:

- ಸ್ಥಳೀಯ ರೈಲುಗಳ ಓಡಾಟ

- ಮೆಟ್ರೋ ಸಂಚಾರ

- ಹೊಟೇಲ್,ರೆಸ್ಟೋರೆಂಟ್‌, ಬಾರ್‌

- ಬಯಲು ರಂಗ ಮಂದಿರ

- ಕ್ರೀಡಾ ಚಟುವಟಿಕೆಗಳಿಗೆ ಒಪ್ಪಿಗೆ

- ಸಾಂಸ್ಕೃತಿಕ ಚಟುವಟಿಕೆಗಳು (100 ಜನರು ಮಾತ್ರ ಭಾಗಿಯಾಗಬೇಕು)

- ರಾಜಕೀಯ ಸಭೆ ನಡೆಸಲು ಒಪ್ಪಿಗೆ (100 ಜನರು ಮಾತ್ರ ಭಾಗಿಯಾಗಬೇಕು)

- ಆನ್​ಲೈನ್​ ಮೂಲಕ ಶಾಲಾ ತರಬೇತಿ ನಡೆಸಲು ಅನುಮತಿ

ಯಾವುದು ಇರಲ್ಲ:

- ಶಾಲಾ, ಕಾಲೇಜುಗಳು

- ಚಿತ್ರಮಂದಿರ

- ಸ್ವಿಮ್ಮಿಂಗ್‌ ಪೂಲ್‌

ಮಾರ್ಗಸೂಚಿಯ ವಿವರ:

ಸೆಪ್ಟೆಂಬರ್​ 30ರವರೆಗೆ ಶಾಲಾ-ಕಾಲೇಜುಗಳು​​ ಬಂದ್​ ಇರಲಿದ್ದು, ಆನ್​ಲೈನ್​ ಮೂಲಕ ಕೋಚಿಂಗ್‌ ನಡೆಸಲು ಅನುಮತಿ ನೀಡಲಾಗಿದೆ. ಇದರ ಮಧ್ಯೆ ಶೇ 50ರಷ್ಟು ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಶಾಲಾ-ಕಾಲೇಜುಗಳಿಗೆ ತೆರಳಲು ಸೂಚನೆ ನೀಡಲಾಗಿದೆ.

9ನೇ ತರಗತಿಯಿಂದ 12ನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಈ ನಿಯಮ ಕಂಟೈನ್‌ಮೆಂಟ್‌ ಝೋನ್​​ ಹೊರತುಪಡಿಸಿದ​ ಪ್ರದೇಶಗಳಲ್ಲಿ ಮಾತ್ರ ಅನ್ವಯವಾಗಲಿದೆ.

ಉನ್ನತ ಶಿಕ್ಷಣದ ವಿದ್ಯಾರ್ಥಿಗಳು, ಪಿಹೆಚ್​ಡಿ ವಿದ್ಯಾರ್ಥಿಗಳು, ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಕಾಲೇಜು​ಗಳಿಗೆ ಭೇಟಿ ನೀಡಬಹುದಾಗಿದೆ.

Last Updated : Aug 29, 2020, 8:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.