ETV Bharat / bharat

ಭಾರತದಲ್ಲಿ ಆನ್​ಲೈನ್​​ ಜೂಜಾಟದ ಕರಾಳತೆ: ಅಪರಾಧಗಳ ಸಮೀಕ್ಷೆ ವಿವರ

author img

By

Published : Oct 7, 2020, 11:44 AM IST

ಜೂಜಿನ ಚಟವು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಅಷ್ಟೇ ಅಲ್ಲದೆ, ನಿರಂತರವಾಗಿ ಜೂಜು ಆಡುವಂತೆ ಪ್ರಚೋದನೆ ನೀಡುತ್ತದೆ. ಇಂಗ್ಲೆಂಡ್​ನಲ್ಲಿ ನಡೆಸಿದ "ಜೂಜಾಟದ ಸಮಸ್ಯೆ" ಅಧ್ಯಯನದ ಪ್ರಕಾರ, ಆನ್​ಲೈನ್​ ಜೂಜುಗಳಿಂದ ಆತ್ಮಹತ್ಯೆಗೆ ಪ್ರಯತ್ನಿಸಿದವರ ಸಂಖ್ಯೆ ಇತರ ಸಾವುಗಳಿಗಿಂತ ಎಂಟು ಪಟ್ಟು ಹೆಚ್ಚು ಇದೆ ಎಂದು ತಿಳಿದುಬಂದಿತ್ತು.

ಆನ್​ಲೈನ್​​ ಜೂಜಾಟ
ಆನ್​ಲೈನ್​​ ಜೂಜಾಟ

ಆನ್‌ಲೈನ್ ಜೂಜಾಟದ ಕರಾಳ ಭಾಗವು ಆತ್ಮಹತ್ಯೆಗಳಿಗೆ ಕಾರಣವಾಗುತ್ತಿದೆ. ಮುಖ್ಯವಾಗಿ ಹೇಳುವುದಾದರೆ ಶೀಘ್ರವಾಗಿ ಹಣ ಗಳಿಸಬಹುದು ಎಂಬ ಉದ್ದೇಶದಿಂದ ಯುವಕರು ಇಂತಹ ಆಮಿಷಗಳಿಗೆ ಒಳಗಾಗುತ್ತಾರೆ. ಇನ್ನು ಇಂಗ್ಲೆಂಡ್​ನಲ್ಲಿ ನಡೆಸಿದ "ಜೂಜಾಟದ ಸಮಸ್ಯೆ" ಅಧ್ಯಯನದ ಪ್ರಕಾರ, ಆನ್​ಲೈನ್​ ಜೂಜುಗಳಿಂದ ಆತ್ಮಹತ್ಯೆಗೆ ಪ್ರಯತ್ನಿಸಿದವರ ಸಂಖ್ಯೆ ಇತರ ಸಾವುಗಳಿಗಿಂತ ಎಂಟು ಪಟ್ಟು ಹೆಚ್ಚು ಇದೆ ಎಂದು ತಿಳಿದುಬಂದಿತ್ತು.

ಸಾಮಾನ್ಯವಾಗಿ "ಜೂಜಿನ ಚಟ"ವು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಅಷ್ಟೇ ಅಲ್ಲದೆ, ನಿರಂತರವಾಗಿ ಜೂಜು ಆಡುವಂತೆ ಪ್ರಚೋದನೆ ನೀಡುತ್ತದೆ.

ಭಾರತದಲ್ಲಿ ಇತ್ತೀಚೆಗೆ ಆನ್‌ಲೈನ್ ಜೂಜಿನಿಂದ ಸಂಭವಿಸಿದ ಆತ್ಮಹತ್ಯೆಗಳು ಮತ್ತು ಅಪರಾಧಗಳು:

ದಿನಾಂಕವಯಸ್ಸುರೂ.ಸುದ್ದಿ
ಸೆ.14288 ಲಕ್ಷ ರೆಡ್ ಹಿಲ್ಸ್‌ನಲ್ಲಿ ನಡೆದ ಆನ್‌ಲೈನ್ ಜೂಜಿನಲ್ಲಿ ಸುಮಾರು 8 ಲಕ್ಷ ಕಳೆದುಕೊಂಡ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತನನ್ನು ದಿನೇಶ್ ಎಂದು ಗುರುತಿಸಲಾಗಿದೆ. ಈತ ಖಾಸಗಿ ಟೆಲಿಕಾಂ ಸಂಸ್ಥೆಯ ಉದ್ಯೋಗಿಯಾಗಿದ್ದ.
ಜು. 272020,000 ರೂ. ಮತ್ತು ಉಳಿತಾಯಜೂಜಿನ ಅಪ್ಲಿಕೇಶನ್‌ನಲ್ಲಿ ತನ್ನ ಉಳಿತಾಯದ ಹಣವನ್ನು ಕಳೆದುಕೊಂಡ ಬಳಿಕ ಕಾಲೇಜು ವಿದ್ಯಾರ್ಥಿ ಟ್ಯಾಟೂ ಸ್ಟುಡಿಯೋದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ಮೃತನನ್ನು ನಿತೀಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತ ತನ್ನ ಪೋಷಕರು ಮತ್ತು ಸಹೋದರನೊಂದಿಗೆ ಟಿ.ಪಿ ಚತ್ರಂನಲ್ಲಿ ವಾಸಿಸುತ್ತಿದ್ದ. ಖಾಸಗಿ ಕಾಲೇಜಿನ ಮೂರನೇ ವರ್ಷದ ಬಿಸಿಎ ವಿದ್ಯಾರ್ಥಿಯಾಗಿದ್ದ. ಅಷ್ಟೇ ಅಲ್ಲದೆ, ಅಮಿಂಜಿಕರೈನ ಟ್ಯಾಟೂ ಸ್ಟುಡಿಯೋದಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದ.
ಜು. 72415 ಲಕ್ಷಆನ್‌ಲೈನ್ ಜೂಜಾಟ ಡಫಬೆಟ್‌ನಲ್ಲಿ 15 ಲಕ್ಷ ರೂ.ಗಳನ್ನು ಕಳೆದುಕೊಂಡ ನಂತರ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮ್ಯಾಂಚೆರಿಯಲ್‌ನ ಲಕ್ಷೆಟ್ಟಿಪೇಟೆಯ ಮೋಡೆಲಾ ಮೂಲದ ಮಧುಕರ್ (24) ಹೈದರಾಬಾದ್‌ನ ಕಾಲೇಜಿನಲ್ಲಿ ಎಂಜಿನಿಯರಿಂಗ್ ಅಂತಿಮ ವರ್ಷ ವ್ಯಾಸಂಗ ಮಾಡುತ್ತಿದ್ದ.
ಜು. 1124--ವಿಶಾಖಪಟ್ಟಣಂ ಜಿಲ್ಲೆಯ ಕೊಟ್ಟೂರು ಗ್ರಾಮದ ದೋಡಿ ವೆಂಕಟ ಅರವಿಂದ್ ಅವರು ಆನ್‌ಲೈನ್ ಜೂಜಿನಲ್ಲಿ ಹಣ ಕಳೆದುಕೊಂಡ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜೂ.27 2410.5 ಲಕ್ಷನಾಸಿಕ್‌ನ ಯುವಕ ಆನ್‌ಲೈನ್ ಜೂಜಿಗಾಗಿ ತಂದೆಯ ಖಾತೆಯಿಂದ 10.50 ಲಕ್ಷ ರೂ. ಕದ್ದಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಯಿತು.
ಮಾ. 2 2643ಸಾವಿರಪೊಲೀಸ್ ಅಧಿಕಾರಿ ಕೆ.ಸರವಣನ್ (26) ಎಂಬವರು ರಮ್ಮಿ ಆಟದ ಮೂಲಕ ಸುಮಾರು 43 ಸಾವಿರ ರೂ. ಕಳೆದುಕೊಂಡರು. ಈ ಬಳಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡರು.
  • ಸೂಚನೆ: ಇಲ್ಲಿ ಕೇವಲ 2020 ವರ್ಷದ ವಿವರಣೆಯನ್ನು ನೀಡಿದ್ದೇವೆ

2019ರಲ್ಲಿ, 41 ವರ್ಷದ ವೆಂಕಟ ಸುಬ್ರಮಣಿಯನ್ ಮತ್ತು ಪಟ್ಟು ಮೀನಾಕ್ಷಿ (33) ಎಂಬವರು ಐದು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾದರು. ಬಳಿಕ ಮಧುರೈ ಜಿಲ್ಲೆಯ ನಾಗಮಲೈನ ಥೆರೆಸಾ ಬೀದಿಯಲ್ಲಿ ವಾಸಿಸುತ್ತಿದ್ದರು. ಆದರೆ ರಮ್ಮಿ ಆನ್​ಲೈನ್​ ಜೂಜಿನ ಮೋಹಕ್ಕೆ ಒಳಗಾಗಿ ನಷ್ಟ ಉಂಟಾಗಿ ದಂಪತಿಗಳು ಆತ್ಮಹತ್ಯೆಗೆ ಶರಣಾಗಿದರು.

2017ರಲ್ಲಿ, ಆಂಧ್ರಪ್ರದೇಶದ ವಿಜಯವಾಡದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಉದಯಮನ್ (32) ಎಂಬ ವ್ಯ್ಕತಿ ನಿದ್ರೆ ಮಾತ್ರೆಗಳನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂತಹ ಅನೇಕ ಘಟನೆಗಳು ಆನ್​ಲೈನ್ ಜೂಜಿನಿಂದ ನಡೆದಿದೆ.

ಭಾರತದಲ್ಲಿ ಜೂಜಿನ ವಿರುದ್ಧದ ಕಾನೂನುಗಳು:

ಬೆಟ್ಟಿಂಗ್, ವೇಜಿಂಗ್​ನಂತಹ ಕೃತ್ಯವನ್ನು ಭಾರತದಲ್ಲಿನ ಕಾನೂನುಗಳು ನಿಷೇಧಿಸುತ್ತವೆ. ಗೇಮಿಂಗ್ ಅಥವಾ ಜೂಜಾಟವು ರಾಜ್ಯದ ವಿಷಯವಾಗಿರುವುದರಿಂದ ಕಾನೂನುಗಳು ಒಂದು ರಾಜ್ಯದಿಂದ ಇನ್ನೊಂದಕ್ಕೆ ಭಿನ್ನವಾಗಿರುತ್ತದೆ. ಇದರರ್ಥ ಒಂದು ರಾಜ್ಯದಲ್ಲಿ ಅನುಮತಿ ನೀಡಿರಬಹುದು, ಮತ್ತೊಂದು ರಾಜ್ಯದಲ್ಲಿ ಅಪರಾಧವಾಗಬಹುದು.

ಸಾರ್ವಜನಿಕ ಜೂಜಿನ ಕಾಯ್ದೆ, 1867ನ್ನು ಭಾರತದ ಕೆಲವು ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್, ಮಧ್ಯಪ್ರದೇಶಗಳಲ್ಲಿ ಅಂಗೀಕರಿಸಿದೆ. ಈ ಕಾಯ್ದೆಯು ಲಾಟರಿಗಳು ಮತ್ತು ಕೌಶಲ್ಯದ ಆಟಗಳನ್ನು ಹೊರತುಪಡಿಸಿ ಎಲ್ಲಾ ಆಟಗಳನ್ನು ನಿಷೇಧಿಸುತ್ತದೆ. ಇತರ ರಾಜ್ಯಗಳು ಆಯಾ ರಾಜ್ಯಗಳಲ್ಲಿ ಜೂಜಿನ ಚಟುವಟಿಕೆಗಳನ್ನು ನಿಯಂತ್ರಿಸಲು ತಮ್ಮದೇ ಆದ ಶಾಸನವನ್ನು ಜಾರಿಗೆ ತಂದಿವೆ.

ಆಂಧ್ರಪ್ರದೇಶ vs​ ಸತ್ಯನಾರಾಯಣ (ರಮ್ಮಿ ಕುರಿತ ಸುಪ್ರೀಂಕೋರ್ಟ್ ತೀರ್ಪು) ಪ್ರಕರಣದಲ್ಲಿ, ರಮ್ಮಿ ಆಟವನ್ನು ಸುಪ್ರೀಂಕೋರ್ಟ್ ಕೌಶಲ್ಯದ ಆಟವೆಂದು ಪರಿಗಣಿಸಿತ್ತು. ರಮ್ಮಿ ಮುಖ್ಯವಾಗಿ ಕೌಶಲ್ಯದ ಪ್ರಾಮುಖ್ಯತೆಯನ್ನು ಒಳಗೊಂಡಿರುತ್ತದೆ. ಏಕೆಂದರೆ ಕಾರ್ಡ್‌ಗಳ ಪತನವನ್ನು ಅಭ್ಯಾಸ ಮಾಡಬೇಕಾಗುತ್ತದೆ. ರಮ್ಮಿಯಲ್ಲಿ ಕಾರ್ಡ್‌ಗಳನ್ನು ಹಿಡಿದಿಡಲು ಮತ್ತು ತ್ಯಜಿಸಲು ಸಾಕಷ್ಟು ಕೌಶಲ್ಯದ ಅಗತ್ಯವಿರುತ್ತದೆ ಎಂದು ಹೇಳಿಕೆ ನೀಡಿತ್ತು.

ರಾಜ್ಯದಲ್ಲಿ ಆನ್‌ಲೈನ್ ರಮ್ಮಿಯನ್ನು ನಿಷೇಧಿಸಿದ ತೆಲಂಗಾಣ ರಾಜ್ಯದ ಗೇಮಿಂಗ್ (ತಿದ್ದುಪಡಿ) ಸುಗ್ರೀವಾಜ್ಞೆ 2017ರ ನಂತರ, ಆನ್‌ಲೈನ್ ರಮ್ಮಿ ಆಟಗಳನ್ನು ನಡೆಸುತ್ತಿರುವವರು ತಮ್ಮ ಸರ್ವರ್‌ಗಳನ್ನು ಚೆನ್ನೈಗೆ ಸ್ಥಳಾಂತರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ತಮಿಳುನಾಡು ಸರ್ಕಾರ,ತೆಲಂಗಾಣ ಸರ್ಕಾರದ ನಿರ್ಧಾರವನ್ನು ಅನುಕರಿಸಬೇಕು ಎಂದು ಸೈಬರ್ ಪೊಲೀಸ್​ ಮೂಲಗಳು ಮತ್ತು ಸೈಬರ್ ತಜ್ಞರು ಹೇಳುತ್ತಾರೆ.

ಕೌಶಲ್ಯದ ಆಟಗಳು ಕಾನೂನು ಪ್ರದೇಶದಲ್ಲಿ ಅಸ್ತಿತ್ವ: ಕೆಲವು ವಾರಗಳ ಹಿಂದೆ, ಗೂಗಲ್ ತನ್ನ ಜೂಜಿನ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ Paytm ಅನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ. ಡ್ರೀಮ್ 11 ಮತ್ತು ಪೇಟಿಎಂ ಫಸ್ಟ್ ಗೇಮ್‌ಗಳಂತಹ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ಹೆಚ್ಚುತ್ತಿರುವ ಜನಪ್ರಿಯತೆಯು ಆನ್‌ಲೈನ್ ಜೂಜಾಟಕ್ಕೆ ಪ್ರಾಕ್ಸಿಗಳೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಏಕೆಂದರೆ ಅವುಗಳು ಹಣಕಾಸಿನ ವಹಿವಾಟುಗಳನ್ನು ಒಳಗೊಂಡಿರಬಹುದು. ಆದರೆ ಪ್ರಸ್ತುತ ಅವುಗಳನ್ನು ಕೌಶಲ್ಯದ ಆಟಗಳಾಗಿ ವರ್ಗೀಕರಿಸಲಾಗಿದೆ.

ಕೌಶಲ್ಯದ ಆಟಗಳು ಹೆಚ್ಚಾಗಿ ಸ್ವಯಂ-ನಿಯಂತ್ರಿತವಾಗಿವೆ. ಆಲ್ ಇಂಡಿಯಾ ಗೇಮಿಂಗ್ ಫೆಡರೇಶನ್, ಫಿಫ್ಸ್ ಫೆಡರೇಶನ್ ಆಫ್ ಇಂಡಿಯನ್ ಫ್ಯಾಂಟಸಿ ಸ್ಪೋರ್ಟ್ಸ್ ಮತ್ತು ದಿ ರಮ್ಮಿ ಫೆಡರೇಶನ್ ಮುಂತಾದ ಜಾಹೀರಾತುಗಳಿವೆ. ಜಾಹೀರಾತುಗಳಿಗಾಗಿ ಸ್ವಯಂ ನಿಯಂತ್ರಣ ಸಂಕೇತಗಳನ್ನು ಅಭಿವೃದ್ಧಿಪಡಿಸಿದೆ,

ಗೇಮಿಂಗ್ ಅಥವಾ ಕೌಶಲ್ಯ ಗೇಮಿಂಗ್ ಅನ್ನು ನಿಯಂತ್ರಿಸಿದ ಏಕೈಕ ರಾಜ್ಯವೆಂದರೆ ನಾಗಾಲ್ಯಾಂಡ್. ಇಲ್ಲದಿದ್ದರೆ, ಕೌಶಲ್ಯದ ಆಟಗಳನ್ನು ಸಾಮಾನ್ಯವಾಗಿ ಉದ್ಯಮದ ಸಂಸ್ಥೆಗಳು ಸ್ವಯಂ-ನಿಯಂತ್ರಿಸುತ್ತವೆ. ಆದರೆ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಜೂಜಾಟ ನಡೆಸುತ್ತಿದ್ದಾರೆ ಮತ್ತು ಆನ್‌ಲೈನ್ ಜೂಜಿನ ಉದ್ಯಮವು ಅಭಿವೃದ್ಧಿ ಹೊಂದುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.