ನವದೆಹಲಿ: ಅಕ್ಟೋಬರ್ 21ರಂದು ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ನಾಯಕರು ಮಹತ್ವದ ಸಭೆ ನಡೆಸಲಿದ್ದಾರೆ. ಮೈತ್ರಿ ವಿಚಾರ ಸಭೆಯ ಮುಖ್ಯ ಅಜೆಂಡಾ ಎನ್ನಲಾಗಿದೆ.
ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಸೇರಿದಂತೆ ಹಿರಿಯ ನಾಯಕರು ಭಾಗಿಯಾಗಲಿದ್ದಾರೆ.
-
Delhi: A meeting over the upcoming Maharashtra assembly elections will be held today at BJP Headquarters. Union Home Minister & party president Amit Shah, national working president JP Nadda, CM Devendra Fadnavis and other top leaders of the party will be present at the meeting. pic.twitter.com/F7crFMWMTn
— ANI (@ANI) September 26, 2019 " class="align-text-top noRightClick twitterSection" data="
">Delhi: A meeting over the upcoming Maharashtra assembly elections will be held today at BJP Headquarters. Union Home Minister & party president Amit Shah, national working president JP Nadda, CM Devendra Fadnavis and other top leaders of the party will be present at the meeting. pic.twitter.com/F7crFMWMTn
— ANI (@ANI) September 26, 2019Delhi: A meeting over the upcoming Maharashtra assembly elections will be held today at BJP Headquarters. Union Home Minister & party president Amit Shah, national working president JP Nadda, CM Devendra Fadnavis and other top leaders of the party will be present at the meeting. pic.twitter.com/F7crFMWMTn
— ANI (@ANI) September 26, 2019
ಕಳೆದ ಶನಿವಾರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದರೂ ಬಿಜೆಪಿ-ಶಿವಸೇನೆ ಮೈತ್ರಿ ಬಗ್ಗೆ ಇನ್ನೂ ಸ್ಪಷ್ಟತೆ ದೊರೆತಿಲ್ಲ. ಹೀಗಾಗಿ ಇಂದಿನ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಅಕ್ಟೋಬರ್ 21ರಂದು ಮಹಾರಾಷ್ಟ್ರ ವಿಧಾನಸಭೆಯ 288 ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದ್ದು ಮತದಾನ ನಡೆಯಲಿದೆ.
ಹೇಗಿದೆ ಚುನಾವಣಾ ಕಣ..?
ಮಹಾರಾಷ್ಟ್ರದಲ್ಲಿ ಹಾಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಮ್ಮ ಸ್ಥಾನ ಉಳಿಸುಕೊಳ್ಳವ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಶಿವಸೇನೆಯ ಜೊತೆಗಿನ ಮೈತ್ರಿ ಬಿಜೆಪಿಗೆ ನಿರ್ಣಾಯಕವಾಗಲಿದೆ.
ಇದರ ಜೊತೆಗೆ ಶರದ್ ಪವಾರ್ ನೇತೃತ್ವದ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ(ಎನ್ಸಿಪಿ) ಸಣ್ಣಪುಟ್ಟ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಂಡು ಚುನಾವಣಾ ಅಖಾಡಕ್ಕಿಳಿಯಲು ಕಾರ್ಯತಂತ್ರ ರೂಪಿಸುತ್ತಿದೆ.
2014 ಫಲಿತಾಂಶ ಏನಾಗಿತ್ತು..?
2014ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿತ್ತು. 288 ಕ್ಷೇತ್ರಗಳ ಪೈಕಿ 260 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ 122 ಸ್ಥಾನಗಳಲ್ಲಿ ವಿಜಯಿಯಾಗಿತ್ತು. ಅತ್ತ ಮೈತ್ರಿಪಕ್ಷ ಶಿವಸೇನೆ 63 ಸ್ಥಾನ ಪಡೆದಿತ್ತು. ಕಾಂಗ್ರೆಸ್ 42 ಹಾಗೂ ಎನ್ಸಿಪಿ 41 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.