ETV Bharat / bharat

ಕೂಲಿ ಕಾರ್ಮಿಕರ ಹಿತ ಕಾಪಾಡಿ: ಕೇಂದ್ರಕ್ಕೆ ಮಾಯಾವತಿ ಆಗ್ರಹ

ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಕಾರ್ಮಿಕ ದಿನ ಆಚರಿಸುತ್ತಿದ್ದೇವೆ. ಆದರೆ, ಸದ್ಯದ ಕೊರೊನಾ ವೈರಸ್​ ಬಿಕ್ಕಟ್ಟು ಹಾಗೂ ಲಾಕ್​ಡೌನ್​ಗಳಿಂದಾಗಿ ದುಡಿಯುವ ವರ್ಗ ಈ ಹಿಂದೆಂದೂ ಕಾಣದಂಥ ಭೀಕರ ಸಂಕಷ್ಟದಲ್ಲಿದೆ. ಈ ಸಮಯದಲ್ಲಿ ಕಾರ್ಮಿಕರ ಹಿತ ಕಾಪಾಡುವಲ್ಲಿ ಸರ್ಕಾರಗಳ ಪಾತ್ರ ಮಹತ್ವದ್ದಾಗಿದೆ ಎಂದು ಮಾಯಾವತಿ ಹೇಳಿದ್ದಾರೆ.

Mayawati urges Centre, states to protect livelihood of labourers

author img

By

Published : May 1, 2020, 6:09 PM IST

ನವದೆಹಲಿ: ಬಡ ಕೂಲಿ ಕಾರ್ಮಿಕರ ಜೀವನ ಹಾಗೂ ಜೀವನೋಪಾಯಗಳ ರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬೇಕೆಂದು ಬಹುಜನ ಸಮಾಜವಾದಿ ಪಾರ್ಟಿ ಮುಖ್ಯಸ್ಥೆ, ಮಾಜಿ ಸಿಎಂ ಮಾಯಾವತಿ ಆಗ್ರಹಿಸಿದ್ದಾರೆ. ಲಾಕ್​ಡೌನ್​ ಮಧ್ಯೆ ಕಂಪನಿಗಳು ಕಾರ್ಮಿಕರ ಸಂಬಳಕ್ಕೆ ಕತ್ತರಿ ಹಾಕುವುದು ಹಾಗೂ ಕೆಲಸದಿಂದ ವಜಾಗೊಳಿಸುವಂತ ಕ್ರಮ ಕೈಗೊಳ್ಳದಂತೆ ಸರ್ಕಾರಗಳು ಎಚ್ಚರಿಕೆಯಿಂದ ಗಮನಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

"ಇಂದು ನಾವು ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಕಾರ್ಮಿಕ ದಿನ ಆಚರಿಸುತ್ತಿದ್ದೇವೆ. ಆದರೆ, ಸದ್ಯದ ಕೊರೊನಾ ವೈರಸ್​ ಬಿಕ್ಕಟ್ಟು ಹಾಗೂ ಲಾಕ್​ಡೌನ್​ಗಳಿಂದಾಗಿ ದುಡಿಯುವ ವರ್ಗ ಈ ಹಿಂದೆಂದೂ ಕಾಣದಂಥ ಭೀಕರ ಸಂಕಷ್ಟದಲ್ಲಿದೆ. ಈ ಸಮಯದಲ್ಲಿ ಕಾರ್ಮಿಕರ ಹಿತ ಕಾಪಾಡುವಲ್ಲಿ ಸರ್ಕಾರಗಳ ಪಾತ್ರ ಮಹತ್ವದ್ದಾಗಿದೆ" ಎಂದು ಮಾಯಾವತಿ ಹೇಳಿದ್ದಾರೆ.

"ದೇಶದಲ್ಲಿರುವ ಕೋಟ್ಯಂತರ ಕಾರ್ಮಿಕರ ಹಿತರಕ್ಷಣೆ ಬಹಳ ಮುಖ್ಯವಾಗಿದೆ. ಖಾಸಗಿ ಕಂಪನಿಗಳು ತಮ್ಮ ಲಾಭಕ್ಕಾಗಿ ಕಾರ್ಮಿಕರ ಸಂಬಳ ಕಡಿತಗೊಳಿಸುತ್ತಿವೆ ಹಾಗೂ ಅವರನ್ನು ಕೆಲಸದಿಂದ ವಜಾಗೊಳಿಸುವ ಮೂಲಕ ಅನ್ಯಾಯ ಮಾಡುತ್ತಿವೆ." ಎಂದು ಮಾಯಾವತಿ ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.