ETV Bharat / bharat

ತಲೆಮರೆಸಿಕೊಂಡ ತಬ್ಲೀಘಿ ಮುಖ್ಯಸ್ಥ ಮೌಲಾನಾ ಸಾದ್​ಗಾಗಿ ಪೊಲೀಸರ ಹುಡುಕಾಟ

author img

By

Published : Apr 2, 2020, 2:10 PM IST

ಕೊರೊನಾ ವೈರಸ್​ ನಮ್ಮನ್ನೇನೂ ಮಾಡಲಾರದು ಎಂದು ತನ್ನ ಅನುಯಾಯಿಗಳಿಗೆ ಬ್ರೇನ್​ವಾಶ್​ ಮಾಡುತ್ತ, ಲಾಕ್​ಡೌನ್ ಇದ್ದರೂ ಎಲ್ಲ ನಿಯಮಗಳನ್ನು ಉಲ್ಲಂಘಿಸಿದ ಆರೋಪಿ ಮೌಲಾನಾ ಸಾದ್​ ತಲೆಮರೆಸಿಕೊಂಡಿದ್ದು, ಪೊಲೀಸರು ವ್ಯಾಪಕ ಹುಡುಕಾಟ ನಡೆಸುತ್ತಿದ್ದಾರೆ.

Maulana Saad in quarantine,
Maulana Saad in quarantine,

ಹೊಸದಿಲ್ಲಿ: ದೇಶಾದ್ಯಂತ ಕೊರೊನಾ ವೈರಸ್​ ಹರಡಲು ಕಾರಣನಾದ ಆರೋಪಿ, ತಬ್ಲೀಘಿ ಜಮಾತ್​ ಮುಖ್ಯಸ್ಥ ಮೌಲಾನಾ ಸಾದ್ ಕಂಧಲಾವಿ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ದೆಹಲಿ ಪೊಲೀಸ್​ ಕ್ರೈಂ ಬ್ರಾಂಚ್​ ತಂಡವು ಮೌಲಾನಾಗಾಗಿ ದೆಹಲಿ ಹಾಗೂ ಉತ್ತರ ಪ್ರದೇಶದ ಹಲವಾರು ಸ್ಥಳಗಳಲ್ಲಿ ದಾಳಿಗಳನ್ನು ಮುಂದುವರೆಸಿದೆ. ಮೌಲಾನಾಗೆ ಹತ್ತಿರದ ಮೂಲಗಳ ಪ್ರಕಾರ, ಕೊರೊನಾ ವೈರಸ್​ ಭಯದಿಂದ ಅವರು ಸ್ವಯಂ ಕ್ವಾರಂಟೈನ್​ ವಿಧಿಸಿಕೊಂಡು ರಹಸ್ಯ ಸ್ಥಳದಲ್ಲಿ ಅವಿತುಕೊಂಡಿದ್ದಾರೆ ಎನ್ನಲಾಗಿದೆ.

ಉತ್ತರ ಪ್ರದೇಶದ ಮುಜಪ್ಫರ್ ನಗರ ಹಾಗೂ ಶಾಮ್ಲಿ ಜಿಲ್ಲೆಗಳಲ್ಲಿ ಅಲ್ಲಿನ ಸ್ಥಳೀಯ ಪೊಲೀಸರ ನೆರವಿನೊಂದಿಗೆ ದೆಹಲಿ ಕ್ರೈಂ ಬ್ರಾಂಚ್​ ಪೊಲೀಸರು ದಾಳಿ ನಡೆಸಿದ್ದಾರೆ. ದೆಹಲಿಯ ಜಾಕೀರ್​ ನಗರ ಹಾಗೂ ನಿಜಾಮುದ್ದೀನ್​ ಪ್ರದೇಶಗಳಲ್ಲಿರುವ ಮೌಲಾನಾಗೆ ಸೇರಿದ ಮೂರು ಮನೆಗಳಲ್ಲೂ ಶೋಧ ನಡೆಸಲಾಗಿದೆ.

ಲಾಕ್​ಡೌನ್​ ನಡುವೆಯೂ ನಿಯಮ ಉಲ್ಲಂಘಿಸಿ, ಸಾವಿರಾರು ಜನರನ್ನು ಸೇರಿಸಿ ತಬ್ಲೀಘಿ ಜಮಾತ್​ ಮುಸ್ಲಿಂ ಸಮಾವೇಶ ನಡೆಸುವುದರ ಮೂಲಕ ದೇಶಾದ್ಯಂತ ಸಾವಿರಾರು ಜನರಿಗೆ ಕೊರೊನಾ ಸೋಂಕು ಹರಡುವಂತೆ ಮಾಡಿದ ಆರೋಪಿ ಮೌಲಾನಾ ಸಾದ್ ವಿರುದ್ಧ ವಿವಿಧ ಕಾಯ್ದೆಗಳಡಿ ಎಫ್​ಐಆರ್​ ದಾಖಲಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.