ETV Bharat / bharat

ಶ್ರೀಕೃಷ್ಣ ಜನ್ಮಭೂಮಿ ವಿವಾದ ಪ್ರಕರಣ: ಮಥುರಾ ಕೋರ್ಟ್‌ನಲ್ಲಿ ವಿಚಾರಣೆ - ಶಾಹಿ ಈದ್ಗಾ ನಿರ್ವಹಣಾ ಸಮಿತಿ

ಮಥುರಾದ ಕೃಷ್ಣ ಜನ್ಮಭೂಮಿಯಲ್ಲಿರುವ ಮಸೀದಿ ತೆರವು ಪ್ರಕರಣದ ವಿಚಾರಣೆಯನ್ನು ಅಲ್ಲಿನ ಸಿವಿಲ್‌ ಕೋರ್ಟ್‌ ಇಂದು ವಿಚಾರಣೆ ನಡೆಸಲಿದೆ.

mathura-court-to-hear-plea-over-krishna-janmabhoomi
ಶ್ರೀಕೃಷ್ಣ ಜನ್ಮಭೂಮಿ ವಿವಾದ ಪ್ರಕರಣ; ಮಥುರಾ ಸಿವಿಲ್‌ ಕೋರ್ಟ್‌ನಲ್ಲಿ ವಿಚಾರಣೆ
author img

By

Published : Sep 28, 2020, 2:20 PM IST

ಲಖನೌ(ಉತ್ತರ ಪ್ರದೇಶ): ಕೃಷ್ಣ ಜನ್ಮಭೂಮಿಯಲ್ಲಿರುವ ಮಸೀದಿ ತೆರವು ವಿವಾದ ಪ್ರಕರಣದ ವಿಚಾರಣೆಯನ್ನು ಮಥುರಾದಲ್ಲಿ ಸಿವಿಲ್‌ ಕೋರ್ಟ್‌ ಇಂದು ಕೈಗೆತ್ತಿಕೊಳ್ಳಲಿದೆ.

1669-70ರ ಮೊಗಲ್‌ ಸಾಮ್ರಾಜ್ಯದ ಔರಂಗಜೇಬ್‌ನ ಆದೇಶದಂತೆ 13.37 ಎಕರೆ ಪ್ರದೇಶದ ಕಟ್ರಾ ಕೇಶವ್‌ ದೇವ್‌ ದೇವಸ್ಥಾನದ ಆವರಣದಲ್ಲಿ ಮಸೀದಿಯನ್ನು ನಿರ್ಮಾಣ ಮಾಡಲಾಗಿದೆ. ಈ ಮಸೀದಿಯನ್ನು ತೆರವು ಮಾಡುವಂತೆ ಕೋರಿ ಮಥುರಾದ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

1968ರ ಮಥುರಾ ಕೋರ್ಟ್ ಆದೇಶವನ್ನು ರದ್ದು ಮಾಡಬೇಕು ಎಂದು ಅರ್ಜಿದಾರರು ಒತ್ತಾಯಿಸಿದ್ದಾರೆ. ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನ ಮತ್ತು ಶಾಹಿ ಈದ್ಗಾ ನಿರ್ವಹಣಾ ಸಮಿತಿ ನಡುವೆ ಕೃಷ್ಣ ಜಮ್ಮ ಭೂಮಿ ವಿವಾದ ಏರ್ಪಟ್ಟಿದ್ದು, ದೇವಸ್ಥಾನ ವ್ಯಾಪ್ತಿಯಿಂದ ಮಸೀದಿಯನ್ನು ತೆರವು ಮಾಡಬೇಕೆಂದು ಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನದ ಒತ್ತಾಯವಾಗಿದೆ.

ಲಖನೌದ ನಿವಾಸಿ ರಂಜನ ಅಗ್ನಿಹೋತ್ರಿ ಹಾಗೂ ಐವರು ಈ ಸಂಬಂಧ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ದೆಹಲಿ ನಿವಾಸಿ ಪರ್ವೇಶ್‌ ಕುಮಾರ್‌, ಉತ್ತರ ಪ್ರದೇಶದ ಸಿದಾರ್ಥ ನಗರ ನಿವಾಸಿ ರಾಜೇಶ್‌ ಮಣಿ ತ್ರಿಪಾಟಿ, ಬಸ್ತಿಯ ಕರುಣೇಶ್‌ ಕುಮಾರ್‌ ಶುಕ್ಲಾ ಮತ್ತು ಲಖನೌನ ಶಿವಾಜಿ ಸಿಂಗ್‌, ತ್ರಿಪುರಾರಿ ತಿವಾರಿ ಇದರಲ್ಲಿ ಸೇರಿದ್ದಾರೆ.

ಮೇಲ್ಮನವಿ ಅರ್ಜಿಯಲ್ಲಿ ನಾಲ್ಕು ಸಂಸ್ಥೆಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಉತ್ತರ ಪ್ರದೇಶದ ಸುನ್ನಿ ವಕ್ಫ್‌ ಮಂಡಳಿ, ಶಾಹೀದ್‌ ಮಸೀದಿ ಈದ್ಗಾ ನಿರ್ವಹಣಾ ಸಮಿತಿಗಳು, ಮಥುರಾದ ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್‌ನ ಕಾರ್ಯದರ್ಶಿಗಳು, ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನ ಪ್ರಮುಖವಾದವು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.