ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಗರ್ಭಧಾರಣೆ ಸಂಬಂಧಿ ತೊಡಕುಗಳಿಂದಾಗಿ ಗರ್ಭಾವಸ್ಥೆ, ಹೆರಿಗೆಯ ಸಮಯ ಅಥವಾ ಹೆರಿಗೆಯಾದ 42 ದಿನಗಳಲ್ಲಿ ತಾಯಿಯ ಸಾವು ಸಂಭವಿಸುತ್ತದೆ. 2017ರಲ್ಲಿ ಜಗತ್ತಿನೆಲ್ಲೆಡೆ 2.95 ಲಕ್ಷ ತಾಯಂದಿರ ಸಾವು ಸಂಭವಿಸಿವೆ. ಭಾರತದಲ್ಲಿ 44,000 ಮಹಿಳೆಯರು ಗರ್ಭಧಾರಣೆ, ಹೆರಿಗೆ ಹಾಗೂ ಹೆರಿಗೆಯ ನಂತರದ ಹಂತದಲ್ಲಿ ಸಾಯುತ್ತಾರೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಶೇ 94ರಷ್ಟು ಸಾವು ಬಡ ಸಮುದಾಯಗಳಲ್ಲಿ ಸಂಭವಿಸುತ್ತಿದೆ.
ಇವುಗಳನ್ನು ತಡೆಯಲು ಸಾಧ್ಯವಿದ್ದರೂ ಆರೋಗ್ಯ ಕುರಿತ ಅರಿವಿನ ಕೊರತೆ ಮತ್ತು ವೈದ್ಯಕೀಯ ಆರೈಕೆಯ ಲಭ್ಯತೆಯ ಅಭಾವ ಇದೆ. ಗುಣಮಟ್ಟದ ವೈದ್ಯಕೀಯ ಆರೈಕೆಯ ಕೊರತೆ ಇರುವ ಮತ್ತು ಕಡಿಮೆ ಆದಾಯ ಮೂಲದ ದೇಶಗಳಲ್ಲಿ ತಾಯ್ತನದ ಮರಣ ಪ್ರಮಾಣ ಹೆಚ್ಚು. 2017ರಲ್ಲಿ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಾಯ್ತನದ ಮರಣ ದರ (ಎಂಎಂಆರ್) 100,000 ಜನನ ಪ್ರಮಾಣಕ್ಕೆ ಸರಾಸರಿ 462ರಷ್ಟಿದೆ. ಅದೇ ವರ್ಷ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ತಾಯ್ತನದ ಸಾವಿನ ಸಂಖ್ಯೆ ಕೇವಲ 11ರಷ್ಟಿತ್ತು. ಕಡಿಮೆ ಆದಾಯದ ದೇಶಗಳಲ್ಲಿ ಪ್ರತಿ 45 ಸಾವುಗಳಲ್ಲಿ ಒಂದು ಸಾವು ಹೆರಿಗೆಯ ಸಮಯದಲ್ಲಿ ಸಂಭವಿಸುತ್ತಿದೆ. ಆದರೆ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಪ್ರತಿ 5,400 ಸಾವುಗಳಿಗೆ ಒಂದು ಸಾವು ಹೆರಿಗೆ ಸಮಯದಲ್ಲಿ ಉಂಟಾಗುತ್ತಿದೆ.
ಕಾರಣಗಳು
ಬಡತನ, ವೈದ್ಯಕೀಯ ಸೇವೆಗಳ ಕೊರತೆ, ಆರೋಗ್ಯದ ಬಗ್ಗೆ ಸೂಕ್ತ ತಿಳಿವಳಿಕೆ ಇಲ್ಲದಿರುವುದು ಹಾಗೂ ಹಾಗೂ ದೂರ ಪ್ರದೇಶದ ಜನರಿಗೆ ಆಸ್ಪತ್ರೆಗಳ ಅಲಭ್ಯತೆ, ಅವೈಜ್ಞಾನಿಕ ಸಾಂಸ್ಕೃತಿಕ ಆಚರಣೆಗಳು ಹಾಗೂ ಮೂಢನಂಬಿಕೆಗಳಿಂದಾಗಿ ತಾಯ್ತನದ ಮರಣದ ಪ್ರಮಾಣ ಹೆಚ್ಚಿದೆ. ಅಧಿಕ ರಕ್ತಸ್ರಾವ ಮತ್ತು ಪ್ರಸವೋತ್ತರ ಸೋಂಕಿನಿಂದಾಗಿ ಹೆರಿಗೆ ಸಮಯದಲ್ಲಿ ಶೇ 75ರಷ್ಟು ಸಾವು ಸಂಭವಿಸುತ್ತಿದೆ. ಗರ್ಭಾವಸ್ಥೆ ಅವಧಿಯಲ್ಲಿ ಉಂಟಾಗುವ ತೀವ್ರ ರಕ್ತದೊತ್ತಡ ಹಾಗೂ ಅಸುರಕ್ಷಿತ ವಿಧಾನಗಳ ಮೂಲಕ ಗರ್ಭಪಾತ ನಡೆಸುವುದು ಕೂಡ ತಾಯ್ತನದ ಸಾವಿಗೆ ಕಾರಣವಾಗುವ ಇತರ ಅಂಶಗಳು. ಮಲೇರಿಯಾ ಜ್ವರ, ದೀರ್ಘಕಾಲದ ಕಾಯಿಲೆಗಳು, ಹೃದಯಾಘಾತ ಹಾಗೂ ಮಧುಮೇಹ ಕೂಡ ತಾಯಂದಿರ ಜೀವವನ್ನು ಬಲಿ ಪಡೆಯುತ್ತಿವೆ. ಹೃದಯ ಸಂಬಂಧಿ ಕಾಯಿಲೆ ಇರುವ ಮಹಿಳೆಯರು ಗರ್ಭಾವಸ್ಥೆಯಲ್ಲಿರುವಾಗ ವೈದ್ಯಕೀಯ ಸಲಹೆ ಪಡೆಯಬೇಕು. ಏಕೆಂದರೆ ಪ್ರತಿ ಮೂರು ತಾಯ್ತನದ ಸಾವುಗಳಲ್ಲಿ ಒಂದು ಸಾವು ಹೃದಯಾಘಾತದಿಂದಾಗಿ ಸಂಭವಿಸುತ್ತದೆ ಎಂದು ಅಂದಾಜಿಸಲಾಗಿದೆ.
ವೈದ್ಯಕೀಯ ಸೌಲಭ್ಯದ ಕೊರತೆಯಿಂದಾಗಿ ಆಫ್ರಿಕಾದ ಕೆಲ ದೇಶಗಳು ಮತ್ತು ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ತಾಯ್ತನದ ಮರಣದ ಪ್ರಮಾಣ ಹೆಚ್ಚಾಗಿದೆ ಎಂಬುದು ವಿಶ್ವ ಆರೋಗ್ಯ ಸಂಸ್ಥೆ ಗಮನಕ್ಕೆ ಬಂದಿದೆ. ಹೀಗಾಗಿ 2030ರ ವೇಳೆಗೆ ತನ್ನ ಸುಸ್ಥಿರ ಅಭಿವೃದ್ಧಿ ಗುರಿಗಳ ಭಾಗವಾಗಿ ಎಂಎಂಆರ್ ಪ್ರಮಾಣವನ್ನು 70ಕ್ಕೆ ತಂದು ನಿಲ್ಲಿಸುವುದಾಗಿ ವಿಶ್ವಸಂಸ್ಥೆ ಹೇಳಿದೆ. ಈ ಪ್ರಯತ್ನದ ಭಾಗವಾಗಿ ವಿಶ್ವ ಆರೋಗ್ಯ ಸಂಸ್ಥೆ ವಿವಿಧ ದೇಶಗಳ ಜೊತೆ ಸೇರಿ ತಾಯಿ ಮತ್ತು ಮಗುವಿನ ಆರೋಗ್ಯ ಕುರಿತ ಯೋಜನೆಯೊಂದನ್ನು ರೂಪಿಸಿದೆ. ಇದು ಪ್ರಧಾನವಾಗಿ ತಾಯ್ತನದ ಸಾವಿಗೆ ಕಾರಣವಾಗುತ್ತಿರುವ ವೈದ್ಯಕೀಯ ಸೇವೆಗಳ ಕೊರತೆಯ ಬಗ್ಗೆ ನಿಗಾವಹಿಸಲಿದೆ. ಅಲ್ಲದೆ ಇತರ ಅಂಶಗಳನ್ನು ಸಹ ಪರಿಗಣಿಸಲಿದೆ. ಪರಿಣಾಮಕಾರಿ ರೀತಿಯಲ್ಲಿ ಪರಿಹಾರ ಕಂಡುಕೊಳ್ಳುವ ಸಲುವಾಗಿ ಪ್ರಪಂಚದ ಎಲ್ಲೆಡೆಯಿಂದ ಸಮಗ್ರ ಮಾಹಿತಿ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಅಗತ್ಯ ಕ್ರಮ ಕೈಗೊಳ್ಳದ ದೇಶಗಳನ್ನು ಹೊಣೆಗಾರರನ್ನಾಗಿ ಕೂಡ ಮಾಡಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ತಾಯ್ತನದ ಮರಣ ಪ್ರಮಾಣ ಗಮನಾರ್ಹ ರೀತಿಯಲ್ಲಿ ಇಳಿದಿರುವುದು ಒಂದು ಸಕಾರಾತ್ಮಕ ಬೆಳವಣಿಗೆ. ಕಳೆದ 30 ವರ್ಷಗಳಲ್ಲಿ ಈ ಬಗೆಯ ಸಾವುಗಳನ್ನು ಶೇ 77 ರಷ್ಟು ಕಡಿಮೆ ಮಾಡಿರುವ ಭಾರತದ ಶ್ರಮ ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ. 1990ರ ಅವಧಿಯಲ್ಲಿ ದೇಶದೆಲ್ಲೆಡೆ ಪ್ರತಿ 1 ಲಕ್ಷ ಜನನಗಳಿಗೆ 556 ತಾಯ್ತನದ ಮರಣ ಸಂಭವಿಸುತ್ತಿದ್ದವು. 2017 ರ ಹೊತ್ತಿಗೆ ಅದರ ಪ್ರಮಾಣ 130 ಕ್ಕೆ ಇಳಿದಿದೆ. ಇದಕ್ಕೆ ಹಲವು ಕಾರಣಗಳಿವೆ – ಕೇಂದ್ರ ಸರ್ಕಾರ ತಾಯಿ ಮತ್ತು ಮಕ್ಕಳ ಆರೈಕೆಯತ್ತ ಹೆಚ್ಚು ನಿಗಾ ವಹಿಸಿ ಈ ನಿಟ್ಟಿನಲ್ಲಿ ಗಮನಾರ್ಹ ಸುಧಾರಣೆ ತರುತ್ತಿದೆ. 2005 ರಲ್ಲಿ ಆಸ್ಪತ್ರೆಯಲ್ಲಿ ಜನಿಸಿದವರ ಸಂಖ್ಯೆ ಶೇ 18ರಷ್ಟಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ 2016ರ ವೇಳೆಗೆ ಈ ಸಂಖ್ಯೆಯನ್ನು ಶೇ 52 ಕ್ಕೆ ಹೆಚ್ಚಿಸಲು ಶ್ರಮಿಸಿವೆ. ಮತ್ತೊಂದೆಡೆ ಕೇಂದ್ರ ಸರ್ಕಾರದ ‘ತಾಯಿ- ಮಕ್ಕಳ ಸುರಕ್ಷತಾ ಯೋಜನೆ’ ಯಶಸ್ವಿಯಾಗಿದೆ. ಈ ಯೋಜನೆಯಡಿ ಆಸ್ಪತ್ರೆಗೆ ದಾಖಲಾದ ಗರ್ಭಿಣಿಯರಿಗೆ ಉಚಿತವಾಗಿ ಹೆರಿಗೆ ಮಾಡಿಸಲಾಗುತ್ತಿದೆ. ಸರ್ಕಾರವೇ ಸಾರಿಗೆ ವ್ಯವಸ್ಥೆಯನ್ನೂ ಕಲ್ಪಿಸಿದೆ. ಸಿಸೇರಿಯನ್ ವಿಭಾಗಕ್ಕಿಂತಲೂ ಸಾಮಾನ್ಯ ಹೆರಿಗೆಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ. ‘ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ’ ಕೂಡ ಜನಪ್ರಿಯವಾಗಿದೆ. ಈ ಯೋಜನೆಯಡಿ ಗರ್ಭಿಣಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಅಗತ್ಯ ಸೇವೆಗಳನ್ನು ನೀಡಲಾಗುತ್ತದೆ. ಈ ಆಕರ್ಷಕ ಯೋಜನೆಗಳಿಂದಾಗಿ ಶೇ 75ರಷ್ಟು ಗ್ರಾಮೀಣ ಮಹಿಳೆಯರು ಮತ್ತು ಒಟ್ಟು ಶೇ 89ರಷ್ಟು ಗರ್ಭಿಣಿಯರು ಹೆರಿಗೆಗಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ.
ದೇಶದ ಉತ್ತರ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣದಲ್ಲಿ ತಾಯ್ತನದ ಮರಣ ಪ್ರಮಾಣ ಕಡಿಮೆ ಇದೆ. ನೀತಿ ಆಯೋಗದ ಅಂಕಿ ಸಂಖ್ಯೆ ಪ್ರಕಾರ 1 ಲಕ್ಷ ಜನನಗಳಿಗೆ ಸಾವನ್ನಪ್ಪುವ ತಾಯಂದಿರ ಸಂಖ್ಯೆ ದಕ್ಷಿಣ ಭಾರತದಲ್ಲಿ 93 ಇದ್ದರೆ ಉತ್ತರ ಭಾರತದಲ್ಲಿ 115 ಇತ್ತು. 2014-16ರ ವೇಳೆಗೆ ಈ ಸಂಖ್ಯೆ ಕ್ರಮವಾಗಿ 77 ಮತ್ತು 93 ಕ್ಕೆ ಇಳಿದಿದೆ. 2016 ರ ಹೊತ್ತಿಗೆ ರಾಜ್ಯವಾರು ಅನುಪಾತವು ಆಂಧ್ರಪ್ರದೇಶದಲ್ಲಿ 74, ತೆಲಂಗಾಣದಲ್ಲಿ 81, ಅಸ್ಸಾಂನಲ್ಲಿ 237, ಉತ್ತರಪ್ರದೇಶದಲ್ಲಿ 201, ರಾಜಸ್ಥಾನದಲ್ಲಿ 199 ಮತ್ತು ಬಿಹಾರದಲ್ಲಿ 165 ಆಗಿತ್ತು.
ಗುರಿಯ ಆಚೆಗೆ…
ಸುರಕ್ಷಿತ ಕ್ರಮಗಳನ್ನು ಜಾರಿಗೆ ತಂದಿದ್ದರೂ, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಯಿಂದ ಭಾರತ ದೂರವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 1990ಕ್ಕೆ ಹೋಲಿಸಿದರೆ ಜಾಗತಿಕವಾಗಿ ತಾಯಿಯ ಮರಣ ಪ್ರಮಾಣ ಅರ್ಧದಷ್ಟು ಕಡಿಮೆಯಾಗಿದೆ. ಆದರೂ, ಭಾರತದ ಪರಿಸ್ಥಿತಿ ನಿರೀಕ್ಷಿಸಿದಷ್ಟು ವೇಗವಾಗಿ ಪ್ರಗತಿ ಹೊಂದಿಲ್ಲ ಎಂದು ಹೇಳಬೇಕು. 2015ರಲ್ಲಿ ಹೆಚ್ಚು ತಾಯ್ತನದ ಮರಣ ಸಂಭವಿಸಿದ ದೇಶಗಳಲ್ಲಿ ಭಾರತ ಮತ್ತು ನೈಜೀರಿಯಾ ಮೂರನೇ ಸ್ಥಾನ ಪಡೆದಿದ್ದವು. 2017ರಲ್ಲಿ, ಜಗತ್ತಿನೆಲ್ಲೆಡೆ ಹೆರಿಗೆ ಸಮಯದಲ್ಲಿ ನಡೆಯುತ್ತಿದ್ದ ತಾಯ್ತನದ ಸಾವಿನ ಪ್ರಮಾಣ 810 ಆಗಿದ್ದರೆ, ಅದರಲ್ಲಿ ಭಾರತದ ಪಾಲು ಶೇ 15 ರಿಂದ 20ರಷ್ಟಿತ್ತು.
ಮಹಿಳೆಯರಿಗೆ ಶಿಕ್ಷಣ ನೀಡಿದರೆ, ತಾಯಂದಿರ ಸಾವಿನ ಸಂಖ್ಯೆ ಗಮನಾರ್ಹವಾಗಿ ಕಡಿಮೆ ಆಗಲಿದೆ. ಭಾರತದಲ್ಲಿ ಸ್ತ್ರೀ ಸಾಕ್ಷರತೆಯ ಪ್ರಮಾಣ ವೃದ್ಧಿಸಿದೆ. ಇದು ಶೇಕಡಾ 68ಕ್ಕೆ ತಲುಪಲಿದೆ ಎಂದು ಪ್ರಸ್ತುತ ಅಂದಾಜಿಸಲಾಗಿದೆ. 18 ವರ್ಷಕ್ಕಿಂತ ಮೊದಲು ಮದುವೆಯಾಗುವವರ ಪ್ರಮಾಣ ಗಣನೀಯವಾಗಿ ಕುಸಿದಿದ್ದರೂ, ದೇಶಾದ್ಯಂತ ಶೇ 27ರಷ್ಟು ಮಹಿಳೆಯರು ನಿಗದಿತ ವಯಸ್ಸಿಗಿಂತಲೂ ಮೊದಲು ಮದುವೆಯಾಗುತ್ತಿದ್ದಾರೆ. 18 ವರ್ಷ ಮೀರಿದಾಗ ಮದುವೆಯಾಗುವಂತೆ ಹೆಣ್ಣುಮಕ್ಕಳನ್ನು ಪ್ರೋತ್ಸಾಹಿಸಬೇಕು. ವೈದ್ಯಕೀಯ ತಜ್ಞರ ಪ್ರಕಾರ, 20 ರಿಂದ 30 ವರ್ಷದೊಳಗಿನ ವಯಸ್ಸು ಗರ್ಭಧಾರಣೆಗೆ ಉತ್ತಮ ಅವಧಿ. ಬಡ ಗ್ರಾಮೀಣ ಹಿನ್ನೆಲೆಯ ಚಿಕ್ಕವಯಸ್ಸಿನ ಗರ್ಭಿಣಿಯರಲ್ಲಿ ತಾಯ್ತನದ ಮರಣ ಪ್ರಮಾಣ ಹೆಚ್ಚು.
ಹೆರಿಗೆಗೆ ಮೊದಲು ಮತ್ತು ನಂತರ ನುರಿತ ವೈದ್ಯಕೀಯ ಸಿಬ್ಬಂದಿಯಿಂದ ವೈದ್ಯಕೀಯ ಆರೈಕೆ ಪಡೆಯುವುದರಿಂದ ತಾಯಿ ಮತ್ತು ಮಗುವಿನ ಮರಣ ಪ್ರಮಾಣ ಗಮನಾರ್ಹವಾಗಿ ಕಡಿಮೆ ಆಗುತ್ತದೆ. ಗರ್ಭಧಾರಣೆಗೆ ತಜ್ಞ ವೈದ್ಯಕೀಯ ಮೇಲ್ವಿಚಾರಣೆಯ ಅಗತ್ಯವಿದೆ. ತರಬೇತಿ ಪಡೆದ ಸಿಬ್ಬಂದಿ ಮಾತ್ರ ಹೆರಿಗೆ ಮಾಡಬೇಕು. ವೈದ್ಯರ ಸಲಹೆಯಂತೆ ಎರಡು ಗರ್ಭಧಾರಣೆ ಅವಧಿಯ ನಡುವೆ ಅಂತರ ಕಾಪಾಡಿಕೊಳ್ಳಬೇಕು, ಹಾಗೆಯೇ ಗರ್ಭಾವಸ್ಥೆಯಲ್ಲಿ ಔಷಧಿಗಳನ್ನು ಕೂಡ ಬಳಸಬೇಕು. ಆರೋಗ್ಯಕರವಲ್ಲದ ಪರಿಸ್ಥಿತಿಗಳಲ್ಲಿ ಮನೆಯಲ್ಲೇ ಹೆರಿಗೆ ಮಾಡಿಸುವ ಅಪಾಯದ ಬಗ್ಗೆ ಸರ್ಕಾರಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು.

Intro:Body:
Maternal Mortality, Maternal Mortality report, Maternal Mortality news, Maternal Mortality in India, Maternal Mortality in India report, Maternal Mortality report news, ತಾಯ್ತನ ಮರಣ, ತಾಯ್ತನ ಮರಣ ವರದಿ, ಭಾರತದಲ್ಲಿ ತಾಯ್ತನ ಮರಣ ವರದಿ, ತಾಯ್ತನ ಮರಣ ಸುದ್ದಿ, ತಾಯ್ತನ ಮರಣ ವರದಿ ಸುದ್ದಿ,
Maternal Mortality Situation in India
ತಾಯ್ತನವೇ ಕಳೆದುಕೊಳ್ಳುತ್ತಿದೆ ಭಾರತ... ಬೆಚ್ಚಿ ಬೀಳುವಂತಿದೆ ವರದಿ!
ದೇಶದಲ್ಲಿ ತಾಯಿ ಮತ್ತು ಮಕ್ಕಳ ಕಲ್ಯಾಣಕ್ಕೆ ಬಡತನ, ಅನಕ್ಷರತೆ ಹಾಗೂ ಬಾಲ್ಯವಿವಾಹ ಸವಾಲೊಡ್ಡುತ್ತಲೇ ಇವೆ. ಈ ಕಾರಣಗಳಿಗೆ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹೆರಿಗೆಯ ಸಮಯದಲ್ಲಿ ಮರಣ ಹೊಂದುವ ತಾಯಂದಿರ ಸಂಖ್ಯೆ ತುಂಬಾ ಅಪಾಯಕಾರಿ ಮಟ್ಟದಲ್ಲಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

Conclusion: