ನವದೆಹಲಿ : ಕೊರೊನಾ ವೈರಸ್ ಕುರಿತಂತೆ ಲಾಕ್ಡೌನ್ ಆದೇಶವನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ. ಈ ನಡುವೆ ಸೋಂಕಿತರ ಸಂಖ್ಯೆಯಲ್ಲೂ ಏರಿಕೆ ದಾಖಲಾಗುತ್ತಿದೆ. ಈ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವೈಫಲ್ಯದ ಕುರಿತು ಟ್ವೀಟ್ ಮಾಡಿದ್ದಾರೆ. ಕೊರೊನಾ ವೈರಸ್ ವಿರುದ್ಧ ಹೋರಾಡಲು ಪ್ರಮುಖ ವಿಷಯಯೆಂದರೆ ಸಾಮೂಹಿಕವಾಗಿ ಪರೀಕ್ಷೆಗೆ ಒಳಪಡಿಸಿಸುವುದು. ಆದರೆ, ದೇಶದಲ್ಲಿ ಇಂತಹ ವ್ಯವಸ್ಥೆ ಇಲ್ಲ ಎಂದಿದ್ದಾರೆ.
-
India delayed the purchase of testing kits & is now critically short of them.
— Rahul Gandhi (@RahulGandhi) April 14, 2020 " class="align-text-top noRightClick twitterSection" data="
With just 149 tests per million Indians, we are now in the company of Laos (157), Niger (182) & Honduras (162).
Mass testing is the key to fighting the virus. At present we are nowhere in the game.
">India delayed the purchase of testing kits & is now critically short of them.
— Rahul Gandhi (@RahulGandhi) April 14, 2020
With just 149 tests per million Indians, we are now in the company of Laos (157), Niger (182) & Honduras (162).
Mass testing is the key to fighting the virus. At present we are nowhere in the game.India delayed the purchase of testing kits & is now critically short of them.
— Rahul Gandhi (@RahulGandhi) April 14, 2020
With just 149 tests per million Indians, we are now in the company of Laos (157), Niger (182) & Honduras (162).
Mass testing is the key to fighting the virus. At present we are nowhere in the game.
ದೇಶದಲ್ಲಿ ಸೋಂಕಿತರನ್ನು ಗುರುತಿಸಲು ಪರಿತಪಿಸುವಂತಾಗಿದೆ. ಭಾರತ ಅತ್ಯಂತ ಕಡಿಮೆ ಪ್ರಮಾಣದ ಪರೀಕ್ಷೆ ನಡೆಸುತ್ತಿದೆ. ಪ್ರತಿ ಮಿಲಿಯನ್ ಜನಸಂಖ್ಯೆಗೆ ಕೇವಲ 149 ಮಂದಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಮೂಲಕ ನಾವು ಲಾವೋಸ್, ನೈಜರ್ ಮತ್ತು ಹೊಂಡುರಾಸ್ನಂತಹ ದೇಶಗಳ ಸಾಲಿನಲ್ಲಿದ್ದೇವೆ ಎಂದಿದ್ದಾರೆ.
ದೇಶವು ಪರೀಕ್ಷಾ ಕಿಟ್ಗಳ ಖರೀದಿಯಲ್ಲಿ ವಿಳಂಬ ಮಾಡಿದೆ ಹಾಗೂ ಅತ್ಯಂತ ಕಡಿಮೆ ಕಿಟ್ಗಳನ್ನು ಹೊಂದಿದೆ. ಅಲ್ಲದೆ ಸಾಮೂಹಿಕವಾಗಿ ಎಲ್ಲರನ್ನು ಪರೀಕ್ಷೆಗೊಳಪಡಿಸುವುದೇ ಈ ವೈರಸ್ ತಡೆಯಲು ಮೊದಲ ಹೆಜ್ಜೆಯಾಗಿದೆ. ಆದರೆ, ನಾವು ಈ ಹೋರಾಟದಲ್ಲಿ ಹಿಂದುಳಿದಿದ್ದೇವೆ ಎಂದಿದ್ದಾರೆ.