ಪುಣೆ: ಇತ್ತೀಚಿಗಷ್ಟೇ ಜಾಗತಿಕ ಉಗ್ರ ಎಂಬ ಹಣೆ ಪಟ್ಟಿ ಪಡೆದಿರುವ ಜೈಷ್ -ಇ- ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಮೇಲೆ ಇದೀಗ ಮೊತ್ತೊಂದು ಆರೋಪ ಕೇಳಿ ಬಂದಿದೆ.
ಮಸೂದ್ ಅಜರ್ ಐಎಸ್ಐಎಸ್ ಮತ್ತು ಅಲ್ ಖೈದಾ ಉಗ್ರ ಸಂಘಟನೆಗಳ ನಡುವೆ ನಂಟು ಹೊಂದಿದ್ದಾನೆ ಎಂಬ ಮಾಹಿತಿಯನ್ನು ಭಾರತೀಯ ಮಾಜಿ ಹೈ ಕಮಿಷನರ್ ಬಾಂಬೆವಾಲಾ ಬಹಿರಂಗ ಪಡಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಮಾಜಿ ಹೈ ಕಮಿಷನರ್ ಬಾಂಬೆವಾಲಾ, ಜಾಗತಿಕವಾಗಿ ಉಗ್ರರ ಪಟ್ಟಿಗೆ ಮಸೂದ್ ಅಜರ್ನನ್ನ ಸೇರ್ಪಡೆ ಮಾಡಿರುವುದರಿಂದ ಈಗ ನಿಜವಾಗಿ ಸಂಕಷ್ಟಕ್ಕೆ ಸಿಲುಕಿರುವುದು ಪಾಕ್ ಎಂದು ಹೇಳಿದ್ದಾರೆ.
ಅಜರ್ ಅಲ್ ಖೈದಾ ಹಾಗೂ ಐಎಸ್ಐಎಸ್ ಉಗ್ರ ಸಂಘಟನೆಗಳ ನಂಟು ಹೊಂದಿರುವುದಕ್ಕೆ ಯಾವುದೇ ಸಾಕ್ಷ ಬೇಡ, ಇವರುಗಳ ನಡುವೆ ಸಂಬಂಧ ಇರುವುದು ಖಚಿತ, ಅದೀಗ ಇನ್ನಷ್ಟು ಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.