ನವದೆಹಲಿ : ಭಾರತದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ ತನ್ನ ಮಾರಾಟದಲ್ಲಿ ಶೇ.47ರಷ್ಟು ಕುಸಿತ ಕಂಡಿದೆ. ಮಾರ್ಚ್ನಲ್ಲಿ 83,792 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಿದೆ. ಹಿಂದಿನ ವರ್ಷ ಮಾರ್ಚ್ನಲ್ಲಿ 1,58,076 ಯುನಿಟ್‌ಗಳನ್ನು ಮಾರಾಟ ಮಾಡಿದ್ದು ಈ ಬಾರಿ ಮಾರಾಟ ತೀವ್ರ ಇಳಿಕೆಯಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ದೇಶಿಯ ಮಾರಾಟ ಶೇ.46.4ರಷ್ಟು ಇಳಿಕೆ ಕಂಡಿದ್ದು, 79,080 ಯುನಿಟ್ಗಳು ಮಾತ್ರ ಮಾರಾಟವಾಗಿವೆ. ಹಿಂದಿನ ವರ್ಷ ಇದೇ ತಿಂಗಳಿನಲ್ಲಿ ದೇಶಿಯವಾಗಿ 1,47,613 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಹಿಂದಿನ ವರ್ಷದ ಮಾರ್ಚ್ ತಿಂಗಳಲ್ಲಿ 16,826 ವೆಗನಾರ್ ಹಾಗೂ ಆಲ್ಟೋ ಕಾರುಗಳು ಮಾರಾಟವಾಗಿದ್ದವು. ಈ ವರ್ಷ 15,988 ಕಾರುಗಳ ಮಾರಾಟವಾಗಿವೆ. ಅಂದರೆ ಶೇ.5ರಷ್ಟು ಮಾರಾಟ ಕಡಿಮೆಯಾಗಿದೆ. ಸ್ವಿಫ್ಟ್, ಸೆಲೆರಿಯೋ, ಇಗ್ನಿಸ್, ಬಲೆನೋಮ ಡಿಜೈರ್ ಕಾರುಗಳ ಮಾರಾಟದಲ್ಲಿ ಶೇ. 50.9ರಷ್ಟು ಇಳಿಕೆಯಾಗಿದೆ. ಕೇವಲ 40,519 ಯುನಿಟ್ಗಳು ಮಾರಾಟವಾಗಿವೆ. ಹಿಂದಿನ ವರ್ಷ ಮಾರ್ಚ್ ತಿಂಗಳಲ್ಲಿ 82,532 ಕಾರುಗಳ ಮಾರಾಟವಾಗಿತ್ತು.
ಮಧ್ಯಮಗಾತ್ರದ ಕಾರುಗಳಲ್ಲಿ ಸೆಡಾನ್, ಸಿಯಾಜ್ ಕಾರು 1,863 ಯುನಿಟ್ಗಳಷ್ಟು ಮಾತ್ರ ಮಾರಾಟವಾಗಿವೆ. ಹಿಂದಿನ ಬಾರಿ 3,672 ಕಾರುಗಳು ಮಾರಾಟವಾಗಿದ್ದವು. ಇದರ ಜೊತೆಗೆ ವಿಟಾರಾ ಬ್ರೆಜ್ಜಾ, ಎಸ್-ಕ್ರಾಸ್, ಎರ್ಟಿಗಾ ಕಾರುಗಳ ಮಾರಾಟ ಶೇ.53.4ರಷ್ಟು ಇಳಿಕೆಯಾಗಿದೆ. ಹಿಂದಿನ ವರ್ಷ 25,563 ಕಾರುಗಳು ಮಾರಾಟವಾಗಿದ್ದವು. ಈ ಬಾರಿ 11,904 ಕಾರುಗಳು ಮಾತ್ರ ಮಾರಾಟವಾಗಿವೆ. ಹಿಂದಿನ ತಿಂಗಳು ಕಾರುಗಳ ರಫ್ತು ಶೇ.55ರಷ್ಟು ಕಡಿಮೆಯಾಗಿದೆ. ಹಿಂದಿನ ವರ್ಷ ಮಾರ್ಚ್ ತಿಂಗಳಲ್ಲಿ 10,463 ಕಾರುಗಳು ರಫ್ತಾಗಿದ್ದು, ಈ ಬಾರಿ ಕೇವಲ 4,712 ಕಾರುಗಳು ಮಾತ್ರ ರಫ್ತಾಗಿವೆ ಎಂದು ಮಾರುತಿ ಸುಜುಕಿ ಇಂಡಿಯಾ ಕಂಪನಿ ತಿಳಿಸಿದೆ.