ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಕಂಪನಿ ಕೊರೊನಾ ವೈರಸ್ ತಡೆಗಟ್ಟುವ ಮುನ್ನೆಚ್ಚರಿಕಾ ಪರಿಕರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಗ್ರಾಹಕ ಆರೋಗ್ಯ ದೃಷ್ಟಿಯಿಂದ ಈ ಪರಿಕರಗಳನ್ನು ತಯಾರಿಸಿದ್ದು, ಇದರ ಬೆಲೆ ಮಾರುಕಟ್ಟೆಯಲ್ಲಿ 10 ರಿಂದ 650 ರೂ. ಗಳಷ್ಟಿದೆ ಎಂದು ಎಂಎಸ್‌ಐ ಪ್ರಕಟಿಸಿದೆ.
ಉತ್ಪನ್ನಗಳಲ್ಲಿ ಮೂರು ಫ್ಲೈ ಫೇಸ್ ಮಾಸ್ಕ್, ಪ್ರೊಟೆಕ್ಟಿವ್ ಕನ್ನಡಕಗಳು, ಶೋ ಕವರ್, ಹ್ಯಾಂಡ್ ಗ್ಲೌಸ್ ಮತ್ತು ಫೇಸ್ ಶೀಲ್ಡ್ ವಿಸರ್ ಗಳನ್ನು ಮಾರುಕಟ್ಟೆಗೆ ತಂದಿದೆ.
ಇದಲ್ಲದೆ, ಕಂಪನಿಯು ವಾಹನದ ಒಳಗಡೆ ಸ್ವಚ್ಛಗೊಳಿಸಲು ಕ್ಲೀನರ್ ಮತ್ತು ಕ್ಯಾಬಿನ್ ಪ್ರೊಟೆಕ್ಟಿವ್ ವಿಭಾಗದಂತಹ ವಸ್ತುಗಳನ್ನು ಪರಿಚಯಿಸಿದೆ.
ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಮಾರುತಿ ಸುಜುಕಿ ಇಂಡಿಯಾ ಶೋ ರೂಮ್ ಅಥವಾ ಹೊಸ ಶ್ರೇಣಿಯ ಪರಿಕರಗಳಿಗಾಗಿ ಕಂಪನಿಯ ವೆಬ್‌ಸೈಟ್ ಮೂಲಕ ವಿವರಣೆ ಪಡೆಯಬಹುದು ಎಂದು ಎಂಎಸ್‌ಐ ಹೇಳಿದೆ.
ಗ್ರಾಹಕರ ವಿಶ್ವಾಸವನ್ನು ಬಲಪಡಿಸಲು, ಕಂಪನಿಯು ತನ್ನ 'ಆರೋಗ್ಯ ಮತ್ತು ನೈರ್ಮಲ್ಯ ವ್ಯಾಪ್ತಿಯಲ್ಲಿ ಹೆಚ್ಚಿನ ವಸ್ತುಗಳನ್ನು ತಯಾರಿಸುತ್ತಿದೆ ಎಂದು ಎಂಎಸ್‌ಐ ವಿವರಿಸಿದೆ.