ಇಡುಕ್ಕಿ(ಕೇರಳ): ಆತ ಸ್ಟ್ರಾಬೆರಿ ಬೆಳಯಲು ಪ್ರಾರಂಭಿಸಿದಾಗ ಸಿಕ್ಕಿದ್ದ ಫಲಿತಾಂಶ ಕಹಿಯಾಗಿತ್ತು. ಆದರೂ ಆ ರೈತ ಸ್ಟ್ರಾಬೆರಿಯ ನೈಜ ರುಚಿ ಸಿಹಿ ದಕ್ಕುವವರೆಗೂ ಛಲ ಬಿಡಲಿಲ್ಲ. ಇದು ಜಿಲ್ಲೆಯ 'ಉತ್ತಮ ಸ್ಟ್ರಾಬೆರಿ ಬೆಳೆಗಾರ 'ಪುರಸ್ಕಾರ ಸ್ವೀಕರಿಸಿದ ಮಾದರಿ ರೈತನ ಯಶೋಗಾಥೆ.
ಚಿನ್ನಕ್ಕನಲ್ ಗ್ರಾಮದ ಪಲ್ಲುವಾತುಕ್ಕಲ್ ಸೊಜನ್, ಉತ್ತಮ ಸ್ಟ್ರಾಬೆರಿ ಬೆಳೆಗಾರ ಪುರಸ್ಕಾರ ಸ್ವೀಕರಿಸಿದ ಮಾದರಿ ರೈತ. ಸೋಜನ್ ಸುಮಾರು 30 ವರ್ಷಗಳಿಂದ ಸಾವಯವ ಮತ್ತು ವೈವಿಧ್ಯಮಯ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ. ಸ್ಟ್ರಾಬೆರಿ ಕೃಷಿಯೊಂದಿಗಿನ ತನ್ನ ಆರಂಭಿಕ ಕಹಿ ಅನುಭವಗಳ ನಂತರ, ಸೊಜನ್ ಸ್ಟ್ರಾಬೆರಿಗಳನ್ನು ಬೆಳೆಸುವ ವೈಜ್ಞಾನಿಕ ತಂತ್ರಗಳನ್ನು ಅಳವಡಿಸಿಕೊಂಡರು ಮತ್ತು ಉತ್ತಮ ಫಸಲು ಪಡೆದು ಅದ್ಭುತ ಯಶಸ್ಸು ಕಂಡರು.
ಕೃಷಿ ಇಲಾಖೆಯ ಬೆಂಬಲದೊಂದಿಗೆ ಸೊಜನ್ ವೈಜ್ಞಾನಿಕ ವಿಧಾನಗಳಲ್ಲಿ ಸ್ಟ್ರಾಬೆರಿ ಕೃಷಿ ಮಾಡುವ ತರಬೇತಿಯನ್ನು ಪುಣೆಯಿಂದ ಪಡೆದಿದ್ದಾರೆ. ಪ್ರಸ್ತುತ ಅವರು ಹೆಚ್ಚು ಉತ್ಪಾದಕ ಹೈಬ್ರಿಡ್ ನೆಬ್ಯೂಲಾ ವೆರೈಟಿಯ ಸ್ಟ್ರಾಬೆರಿ ಸಸಿಗಳನ್ನು ಬೆಳೆಸುತ್ತಾರೆ. ಸುಮಾರು 5,000 ಸ್ಟ್ರಾಬೆರಿ ಸಸ್ಯಗಳಿಂದ ಸೋಜನ್ ವಾರಕ್ಕೆ 15,000 ರೂ. ಆದಾಯ ಗಳಿಸುತ್ತಾರೆ.
ಸ್ಟ್ರಾಬೆರಿಗೆ ಹೆಚ್ಚಿನ ಮಾರುಕಟ್ಟೆ ಇದ್ದು, ಅಧಿಕ ಲಾಭದಾಯಕತೆಯ ಬೆಳೆ ಎಂದು ಸೋಜನ್ ಹೇಳುತ್ತಾರೆ. ಸಾವಯವ ರೀತಿಯಲ್ಲಿ ಸ್ಟ್ರಾಬೆರಿಗಳನ್ನು ಬೆಳೆಯುವಾಗ, ಮಧ್ಯಂತರ ಬೆಳೆಗಳಾಗಿ ಚೆಂಡುಹೂವು, ಸೂರ್ಯಕಾಂತಿ ಬೆಳೆ ಬೆಳೆಯುವುದರಿಂದ ಕೀಟಗಳ ದಾಳಿಯನ್ನು ದೊಡ್ಡ ಪ್ರಮಾಣದಲ್ಲಿ ತಡೆಗಟ್ಟಲು ಸಾಧ್ಯ ಎನ್ನುತ್ತಾರೆ ಸೊಜನ್.
ಸ್ಟ್ರಾಬೆರಿಗಳ ನೇರ ಮಾರಾಟದ ಜೊತೆಗೆ, ಸೊಜನ್ ಸ್ಟ್ರಾಬೆರಿಯಿಂದ ಮೌಲ್ಯವರ್ಧಿತ ಉತ್ಪನ್ನಗಳತ್ತ ತಯಾರಿಸುವುದರಲ್ಲೂ ತೊಡಗಿಸಿಕೊಂಡಿದ್ದಾರೆ. ಹಣ್ಣಿನ ರಸಾಯನ(ಜಾಮ್) ಮತ್ತು ಇತರೆ ಯಶಸ್ವಿ ವ್ಯವಹಾರ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಭವಿಷ್ಯದಲ್ಲಿ, ಅವರು ಸ್ಟ್ರಾಬೆರಿ ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳನ್ನು ರಫ್ತು ಮಾಡುವುದರ ಹೊರತಾಗಿ ತಮ್ಮ ಕೃಷಿಯನ್ನು ವಿಸ್ತರಿಸಲು ಯೋಜಿಸುತ್ತಿದ್ದಾರೆ.