ಕೋಯಿಕೋಡ್(ಕೇರಳ): ಇಲ್ಲಿನ ಬೇಪೋರ್ ಬೀಚ್ನಲ್ಲಿ ಸಾಗರದ ಮೇಲೊಂದು ಸ್ಮಶಾನ ನಿರ್ಮಾಣ ಮಾಡಲಾಗಿದೆ. ಆದ್ರೆ ಇದು ಸಾಂಕೇತಿಕ ಸ್ಮಶಾನ ಅಷ್ಟೇ.
ಕೋಯಿಕೋಡ್ ಬಂದರು ಅಧಿಕಾರಿ ಕ್ಯಾಪ್ಟನ್ ಅಶ್ವಿನಿ ಪ್ರತಾಪ್ ಮಾಹಿತಿ ನೀಡಿ, ಇದು ಸಾಂಕೇತಿಕ ನಿರ್ಮಾಣವಾಗಿದ್ದು, ಪ್ಲಾಸ್ಟಿಕನ್ನು ನೀರಿಗೆ ಎಸೆಯುವುದರಿಂದ ವಿವಿಧ ಜಾತಿಯ ಮೀನುಗಳು ನಿರ್ನಾಮವಾಗುತ್ತಿವೆ. ಹೀಗಾಗಿ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ.
ಜಲಮಾಲಿನ್ಯದಿಂದ ಜಲಚರಗಳನ್ನು ರಕ್ಷಿಸುವ ಉದ್ದೇಶದಿಂದ ಈ ವಿಶೇಷ ಸ್ಮಶಾನ ನಿರ್ಮಾಣ ಮಾಡಲಾಗಿದೆ.