ETV Bharat / bharat

ಭಯಾನಕ ಮಾರ್ಚ್: ಕೊರೊನಾ ಬಲೆಯಲ್ಲಿ ಸಿಲುಕಿದ ಸೆಲೆಬ್ರಿಟಿಗಳಿವರು.. - ಭಯಾನಕ ಮಾರ್ಚ್

ಜಾಗತಿಕ ಮಹಾಮಾರಿ ಕೊವಿಡ್​-19ಗೆ ಪ್ರಪಂಚದಾದ್ಯಂತ 25,278 ಮಂದಿ ಬಲಿಯಾಗಿದ್ದಾರೆ. ಕೊರೊನಾ ಬಲೆಯಲ್ಲಿ ಬಹುಪರಿಚಿತ ಸೆಲೆಬ್ರಿಟಿಗಳೂ ಸಿಲುಕಿದ್ದಾರೆ.

celebrities test positive for COVID-19
ಕೊರೊನಾ ಬಲೆಯಲ್ಲಿ ಸಿಲುಕಿದ ಸೆಲೆಬ್ರಿಟಿಗಳಿವರು
author img

By

Published : Mar 27, 2020, 11:51 PM IST

ನವದೆಹಲಿ : ಕಳೆದ ಮೂರು ತಿಂಗಳಿನಿಂದ ವಿಶ್ವವನ್ನೇ ಅಲುಗಾಡಿಸುತ್ತಿರುವ ಕೊರೊನಾ ವೈರಸ್​, ತನ್ನ ಅಟ್ಟಹಾಸವನ್ನ ನಡೆಸಿದೆ. ಮಾರ್ಚ್‌ ತಿಂಗಳಲ್ಲಿ ಬಹುಪರಿಚಿತ ಗಣ್ಯ ವ್ಯಕ್ತಿಗಳೇ ಸೋಂಕಿಗೆ ಒಳಗಾಗಿದ್ದಾರೆ.

ಇಂದು ಬ್ರಿಟನ್ ಪ್ರಧಾನಿ ಬೋರಿಸ್​ ಜಾನ್ಸನ್​ ಅವರಿಗೆ ಕೊವಿಡ್​-19 ಇರುವುದು ದೃಢಪಟ್ಟಿದೆ. ಈ ಮೂಲಕ ವಿಶ್ವದಲ್ಲೇ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗೆ ಸೋಂಕು ತಗುಲಿದಂತಾಗಿದೆ. ಸೆಲ್ಫ್​ ಐಸೋಲೇಷನ್​ನಲ್ಲಿದ್ದರೂ ಸಹ ಸರ್ಕಾರವನ್ನು ನಡೆಸುತ್ತೇನೆ. ವಿಡಿಯೋ ಕಾನ್ಫ್‌ರೆನ್ಸ್​ ಮೂಲಕ ಕೊರೊನಾ ವಿರುದ್ಧ ಹೋರಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಬೋರಿಸ್​ ಜಾನ್ಸನ್ ಬೆನ್ನಲ್ಲೇ ಬ್ರಿಟನ್​ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ಕಾಕ್​ ಅವರಿಗೂ ಕೋವಿಡ್​-19 ಇರುವುದು ದೃಢವಾಗಿದೆ.

ಕಳೆದ ವಾರ ಇಂಗ್ಲೆಂಡ್ ರಾಜಕುಮಾರ ಚಾರ್ಲ್ಸ್‌ ಕೂಡ ಸೋಂಕಿಗೊಳಗಾಗಿದ್ದರು. ಸ್ಕಾಟ್‌ಲೆಂಡ್​ನಲ್ಲಿ ಸೆಲ್ಫ್​ ಐಸೋಲೇಷನ್​ಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೂ ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಕ್ಲಾರೆನ್ಸ್ ಹೌಸ್ ಪ್ರಕಟಣೆಯಲ್ಲಿ ತಿಳಿಸಿತ್ತು. ಮಾ.13 ರಂದು ಕೆನಡಾ ಪ್ರಧಾನಿ ಜಸ್ಟಿನ್​​ ಟ್ರೂಡೋ ಅವರ ಪತ್ನಿ ಸೋಫಿಯಾ ಗ್ರೆಗೊರಿಯಾ ಅವರಿಗೂ ಕೊರೊನಾ ವೈರಸ್​ ಇರುವುದು ಸಾಬೀತಾಗಿತ್ತು.

ಮಾರ್ಚ್ 12 ರಂದು ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನಟ ಟಾಮ್ ಹ್ಯಾಂಕ್ಸ್ ಹಾಗೂ ಅವರ ಪತ್ನಿ ರೀಟಾ ವಿಲ್ಸನ್ ಅವರಿಗೆ ಕೂಡ ಸೋಂಕು ತಗುಲಿತ್ತು. ಇದೀಗ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ. ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪುರಸ್ಕೃತ ಹಾಲಿವುಡ್ ನಟ ಇಡ್ರಿಸ್ ಎಲ್ಬಾ ಹಾಗೂ 'ಗೇಮ್ ಆಫ್ ಥ್ರೋನ್' ಖ್ಯಾತಿಯ ನಟ ಕ್ರಿಸ್ಟೋಫರ್ ಹಿವ್‍ಜು ಕೂಡ ಸೋಂಕಿಗೊಳಗಾಗಿದ್ದರು.

ಬಾಲಿವುಡ್​ನ 'ಬೇಬಿ ಡಾಲ್​' ಹಾಡಿನ ಗಾಯಕಿ ಕನಿಕಾ ಕಪೂರ್​ಗೆ ಕೊವಿಡ್​-19 ದೃಢವಾಗಿದ್ದು, ಸದ್ಯ ಅವರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿಗೊಳಗಾಗಿದ್ದ ಹಾಲಿವುಡ್ ಜನಪ್ರಿಯ ನಟಿ ಓಲ್ಗಾ ಕುರಿಲೆಂಕೊ ಇದೀಗ ಗುಣಮುಖರಾಗಿದ್ದಾರೆ.

ಈ ಕೊರೊನಾ ಕ್ರೀಡಾಪಟುಗಳನ್ನೂ ಬಿಟ್ಟಿಲ್ಲ. ಪ್ರೀಮಿಯರ್ ಲೀಗ್‌ನ ಆರ್ಸೆನಲ್ ತಂಡದ ಫುಟ್ಬಾಲ್ ಆಟಗಾರ ಮೈಕೆಲ್ ಆರ್ಟೆಟಾ ಸೋಂಕಿಗೊಳಗಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.