ETV Bharat / bharat

ಹೈದರಾಬಾದ್​ನಲ್ಲಿ ಭಾರೀ ಮಳೆ.. ನೀರಿನ ರಭಸಕ್ಕೆ ಕೊಚ್ಚಿಹೋದ ವ್ಯಕ್ತಿ - ಸರೂನಗರ ಕೆರೆ

ನೀರಿನಲ್ಲಿ ಸಿಲುಕಿದ್ದ ವ್ಯಕ್ತಿವೋರ್ವನ ವಾಹನವನ್ನು ಮುಂದೂಡಲು ಸಹಾಯ ಮಾಡುತ್ತಿರುವ ವೇಳೆ ಕಾಲು ಜಾರಿ ಬಿದ್ದಿದ್ದಾರೆ..

man washed away in hyderabad
ಸರೂನಗರ ಕೆರೆಯೆಡೆ ಕೊಚ್ಚಿಹೋದ ವ್ಯಕ್ತಿ
author img

By

Published : Sep 21, 2020, 3:45 PM IST

ಹೈದರಾಬಾದ್: ತೆಲಂಗಾಣದ ರಾಜಧಾನಿ ಹೈದರಾಬಾದ್​ನಲ್ಲಿ ವರುಣನ ಆರ್ಭಟ ಜೋರಾಗಿದೆ. ನೀರಿನ ರಭಸಕ್ಕೆ ವ್ಯಕ್ತಿಯೊಬ್ಬರು ಇಲ್ಲಿನ ಸರೂನಗರದಲ್ಲಿ ಕೊಚ್ಚಿ ಹೋಗಿದ್ದಾರೆ.

ಸರೂನಗರ ಕೆರೆಯಲ್ಲಿ ಕೊಚ್ಚಿಹೋದ ವ್ಯಕ್ತಿ

ಭಾನುವಾರ ರಾತ್ರಿ ಸುಮಾರು 7.30ರ ಸುಮಾರಿಗೆ ಈ ಘಟನೆ ನಡೆದಿದೆ. ನವೀನ್​ ಕುಮಾರ್​ (46) ಎಂಬಾತ ನೀರಿನಲ್ಲಿ ಕೊಚ್ಚಿ ಹೋಗಿರುವ ವ್ಯಕ್ತಿ. ಇವರು ನೀರಿನಲ್ಲಿ ಸಿಲುಕಿದ್ದ ವ್ಯಕ್ತಿವೋರ್ವನ ವಾಹನವನ್ನು ಮುಂದೂಡಲು ಸಹಾಯ ಮಾಡುತ್ತಿರುವ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ರಸ್ತೆ ಮೇಲೆ ತುಂಬಿ ಹರಿಯುತ್ತಿರುವ ನೀರಿನಲ್ಲಿ ಸರೂನಗರ ಕೆರೆಯೆಡೆಗೆ ಕೊಚ್ಚಿ ಹೋಗಿದ್ದಾರೆ.

ರಸ್ತೆ ಹಾಗೂ ಕೆರೆಗೆ ಅಡ್ಡಲಾಗಿ ಯಾವುದೇ ತಡೆಗೋಡೆ ಇಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಸರೂನಗರ ಠಾಣೆಯ ಪೊಲೀಸ್​ ಇನ್ಸ್​ಪೆಕ್ಟರ್​ ಕೆ ಸೀತಾರಾಮನ್​ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.