ದಿಂಡಿಗಲ್( ತಮಿಳುನಾಡು): ದಿಂಡಿಗುಲ್ ಜಿಲ್ಲೆಯ ಪಳನಿಯಲ್ಲಿ ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಮಾತುಕತೆ ವೇಳೆ ಕುಪಿತಗೊಂಡ ವೃದ್ಧನೊಬ್ಬ ಇಬ್ಬರು ರೈತರ ಮೇಲೆ ಗುಂಡು ಹಾರಿಸಿದ್ದಾರೆ.
ಪಳನಿಯ ಅಪ್ಪರ್ ಸ್ಟ್ರೀಟ್‌ನಲ್ಲಿ ಇಲಂಗೋವನ್ 12 ಸೆಂಟ್ಸ್ ಖಾಲಿ ಜಾಗ ಹೊಂದಿದ್ದು, ಬೇಲಿ ಹಾಕಲು ಮುಂದಾಗಿದ್ದರು. ಚಿತ್ರಮಂದಿರವನ್ನು ಹೊಂದಿರುವ ಆರೋಪಿ ನಟರಾಜನ್, ತಾನು ಭೂಮಿಯಲ್ಲಿ ಕೆಲವು ಭಾಗಗಳನ್ನು ಸಹ ಹೊಂದಿದ್ದೇನೆ ಎಂದು ಹೇಳಿ ಆಕ್ಷೇಪಿಸಿ ಇತರ ಸಂಬಂಧಿಕರೊಂದಿಗೆ ಮಾತುಕತೆ ನಡೆಸಿದ್ಧ.
ಮಾತುಕತೆ ನಡೆಯುತ್ತಿರುವಾಗ ನಟರಾಜನ್ ಹ್ಯಾಂಡ್ ಗನ್ ಹೊರತೆಗೆದು ಮಾತುಕತೆಯಲ್ಲಿ ಭಾಗಿಯಾದ ಇಬ್ಬರ ಮೇಲೆ ಗುಂಡು ಹಾರಿಸಿದ್ದಾನೆ. ಗಾಯಗೊಂಡ ಇಬ್ಬರು ಪಳನಿಸ್ವಾಮಿ ಮತ್ತು ಸುಬ್ರಮಣಿ ಎಂದು ಗುರುತಿಸಲಾಗಿದೆ.
ಪಳನಿಸ್ವಾಮಿಯ ಸೊಂಟಕ್ಕೆ ಮತ್ತು ಸುಬ್ರಮಣಿಯ ಹೊಟ್ಟೆಗೆ ಗುಂಡು ತಗುಲಿದೆ. ಸ್ಥಳಕ್ಕೆ ಧಾವಿಸಿ ಪೊಲೀಸರು ಸ್ಥಳದಿಂದ ಪರಾರಿಯಾಗಿದ್ದ ನಟರಾಜನನ್ನು ಬಂಧಿಸಿದ್ದಾರೆ. ಇಡೀ ಘಟನಾವಳಿಗಳು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿವೆ. ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.