ETV Bharat / bharat

ಗರ್ಲ್​ಫ್ರೆಂಡ್​​ ಸಹೋದರನಿಂದ ಯುವಕನ ಬರ್ಬರ ಕೊಲೆ! - ಯುವಕನ ಬರ್ಬರ ಕೊಲೆ

ಪರಸ್ಪರ ಪ್ರೀತಿಸುತ್ತಿದ್ದ ಹುಡುಗಿ-ಹುಡುಗನ ನಡುವೆ ವೈಮನಸ್ಸು ಉಂಟಾಗಿ ಬ್ರೇಕ್​ ಅಪ್​ ಮಾಡಿಕೊಳ್ಳಲು ಮುಂದಾಗಿದ್ದು, ಈ ವೇಳೆ ಹುಡುಗನ ಭೀಕರ ಕೊಲೆ ಮಾಡಲಾಗಿದೆ.

Man killed by the brother of his Girlfriend

author img

By

Published : Jun 7, 2020, 4:30 AM IST

ಕಡಲೂರು (ತಮಿಳುನಾಡು): ತಾನು ಪ್ರೀತಿಸುತ್ತಿದ್ದ ಗರ್ಲ್​ಫ್ರೆಂಡ್​ ಸಹೋದರನಿಂದ ಯುವಕನೋರ್ವನ ಬರ್ಬರ ಕೊಲೆಯಾಗಿರುವ ಘಟನೆ ತಮಿಳುನಾಡಿನ ಕಡಲೂರು ಬಳಿಯ ಚಿದಂಬರಂ ಎಂಬಲ್ಲಿ ನಡೆದಿದೆ.

ಚಿದಂಬರಂ ವಿಒಸಿ ನಗರದಲ್ಲಿ 21 ವರ್ಷದ ಅನ್ಬಾಲಗನ್​ ವಾಸವಾಗಿದ್ದು, ಹತ್ತಿರದ ತರಕಾರಿ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದನು. ಅರಂಗನಾಥನ್​ ಬೀದಿಯಲ್ಲಿ ವಾಸವಾಗಿದ್ದ 16 ವರ್ಷದ ಬಾಲಕಿಯನ್ನ ಈತ ಪ್ರೀತಿಸುತ್ತಿದ್ದನು.

ಅವರಿಬ್ಬರ ನಡುವೆ ಕೆಲವೊಂದು ಸಮಸ್ಯೆ ಉದ್ಭವವಾಗಿದ್ದು, ಅದು ಕುಟುಂಬದ ಸದಸ್ಯರಿಗೆ ಗೊತ್ತಾಗಿದೆ. ಹೀಗಾಗಿ ಆತನೊಂದಿಗಿನ ಸಂಬಂಧ ಮುರಿದುಕೊಳ್ಳಲು ಸಿದ್ಧಳಾಗಿದ್ದಾಳೆ. ಈ ವೇಳೆ ಆಕೆ ಜತೆ ಮಾತನಾಡಲು 21 ವರ್ಷದ ಅನ್ಭಾಲಗನ್​ ಹುಡುಗಿ ಮನೆಗೆ ತೆರಳಿದ್ದಾನೆ. ಈ ವೇಳೆ ಹುಡುಗಿಯ 17 ವರ್ಷದ ಸಹೋದರ ಆತನ ಮೇಲೆ ಹಲ್ಲೆ ಮಾಡಿ ತನ್ನ ಸ್ನೇಹಿತರೊಂದಿಗೆ ಕೊಲೆ ಮಾಡಿದ್ದಾನೆ.

ತದನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. ಈಗಾಗಲೇ ಬಾಲಕಿಯ ಕುಟುಂಬದ ಸದಸ್ಯರ ಬಂಧನ ಮಾಡಲಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.