ETV Bharat / bharat

ಕೌಟುಂಬಿಕ ಕಲಹ: ಮಗುವಿನೊಂದಿಗೆ ನೀರಿಗೆ ಹಾರಿದ ಪತ್ನಿ.. ನೋವಿನಿಂದ ಪತಿಯೂ ಆತ್ಮಹತ್ಯೆ

ಕುಂದಾರದಲ್ಲಿರುವ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ತನ್ನ ಪತ್ನಿ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದನ್ನು ಸಹಿಸಿಕೊಳ್ಳಲಾರದೇ ತಾನೂ ಸಹ ಅದೇ ದಾರಿ ಹಿಡಿದಿದ್ದಾನೆ.

author img

By

Published : Oct 27, 2020, 4:45 PM IST

Updated : Oct 27, 2020, 5:09 PM IST

Man hangs himself after wife commits suicide
ಕೌಟುಂಬಿಕ ಕಲಹ

ಕೊಲ್ಲಂ: ಪತ್ನಿ ಹಾಗೂ ಮಗುವಿನ ಆತ್ಮಹತ್ಯೆಯನ್ನು ಅರಗಿಸಿಕೊಳ್ಳಲಾರದ ಪತಿಯೊಬ್ಬ ಒಂದೇ ದಿನದ ಅಂತರದಲ್ಲಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಕೊಲ್ಲಂ ನಗರದಲ್ಲಿ ನಡೆದಿದೆ. ಸಿಜು ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ.

ಕೌಟುಂಬಿಕ ಕಲಹದಿಂದ ಬೇಸತ್ತ ಈತನ ಪತ್ನಿ ರಾಖಿ ಆಗತಾನೇ ಅಂಬೆಗಾಲಿಡುತ್ತಿದ್ದ ತನ್ನ ಮೂರು ವರ್ಷದ ಮಗುವಿನೊಂದಿಗೆ ಕುಂದ್ರಾ ಬಳಿಯ ಅಷ್ಟಮುಡಿ ಹಿನ್ನೀರಿನಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆಯನ್ನು ಅರಗಿಸಿಕೊಳ್ಳಲಾರದ ಪತಿ ಸಿಜು ತಾನೂ ಸಹ ನೇಣು ಬಿಗಿದುಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಪತ್ನಿ ಹಾಗೂ ಮಗು ಆತ್ಮಹತ್ಯೆ ಮಾಡಿಕೊಂಡ ಮರುದಿನವೇ ಸಿಜು ಸಹ ಅದೇ ದಾರಿ ಹಿಡಿದಿದ್ದಾನೆ. ಕುಂದಾರದಲ್ಲಿರುವ ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿ ಆತನ ಶವ ಪತ್ತೆಯಾಗಿದೆ. ಮೃತ ಸಿಜು ಇಲ್ಲಿನ ಖಾಸಗಿ ಬಸ್ ಕಂಪನಿಯೊಂದರಲ್ಲಿ ನಿರ್ವಾಹಕನಾಗಿ ಕೆಲಸ ಮಾಡಿಕೊಂಡಿದ್ದನು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿಯ ಶವವನ್ನು ಪರಿಶೀಲನೆ ನಡೆಸಿದರು.

Last Updated : Oct 27, 2020, 5:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.