ETV Bharat / bharat

ಟಿಕ್​ಟಾಕ್​ ವಿಡಿಯೋಗಾಗಿ ಜೀವಂತ ಮೀನು ನುಂಗಿ ಜೀವ ಕಳೆದುಕೊಂಡ ಯುವಕ

ತಮಿಳುನಾಡಿನಲ್ಲಿ ಟಿಕ್​ಟಾಕ್​ ವಿಡಿಯೋಗಾಗಿ ಯುವಕನೊಬ್ಬ ತನ್ನ ಜೀವ ಕಳೆದುಕೊಂಡಿದ್ದಾನೆ. ಜೀವಂತ ಮೀನು ನುಂಗಿದ್ದ ಯುವಕ ಸಾವನ್ನಪ್ಪಿದ್ದಾನೆ.

Man dies after accidentally swallowing live fish in Tamil Nadu
ಸಾಂದರ್ಭಿಕ ಚಿತ್ರ
author img

By

Published : Jun 12, 2020, 11:50 PM IST

ಕೃಷ್ಣಗಿರಿ (ತಮಿಳುನಾಡು): ಜೀವಂತ ಮೀನು ನುಂಗಿದ್ದ ಯುವಕನೊಬ್ಬ ಏಕಾಏಕಿ ಪ್ರಾಣ ಕಳೆದುಕೊಂಡ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನಲ್ಲಿ ನಡೆದಿದೆ.

Man dies after accidentally swallowing live fish in Tamil Nadu
ಜೀವಂತ ಮೀನು ನುಂಗಿ ಜೀವ ಕಳೆದುಕೊಂಡ ಯುವಕ

ಮೃತ ಯುವಕನನ್ನು ಹೊಸೂರಿನ ಪಾರ್ವತಿ ನಗರದ ವೆಟ್ರಿವೆಲ್ (22) ಎಂದು ಗುರುತಿಸಲಾಗಿದೆ. ಮೃತ ವೆಟ್ರಿವೆಲ್ ಕೂಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ವೆಟ್ರಿವೆಲ್ ಮತ್ತು ಅವನ ಸ್ನೇಹಿತರು ಥರ್ಪೆಟ್ಟೈ ಪ್ರದೇಶದ ಕೆರೆಗೆ ಮೀನು ಹಿಡಿಯಲು ಹೋದಾಗ ಈ ಘಟನೆ ನಡೆದಿದೆ. ಈ ವೇಳೆ ಆತನ ಸ್ನೇಹಿತರೊಂದಿಗೆ ಸೇರಿಕೊಂಡು ಟಿಕ್​ಟಾಕ್​ ವಿಡಿಯೋ ಮಾಡುವುದಕ್ಕೋಸ್ಕರ ಜೀವಂತ ಮೀನನ್ನು ನುಂಗಿದ್ದಾನೆ. ಆದರೆ ಮೀನು ವೆಟ್ರಿವೆಲ್​ನ ಗಂಟಲಿನಲ್ಲಿ ಸಿಲುಕಿಕೊಂಡಿದೆ.

ಮೃತನ ಗಂಟಲಿನಿಂದ ಹೊರತೆಗೆದ ಮೀನು

ಮೀನು ಗಂಟಲಿನಲ್ಲಿ ಸಿಲುಕಿಕೊಂಡಿದ್ದರಿಂದ ವೆಟ್ರಿವೆಲ್ ಸುಮಾರು ಒಂದು ಗಂಟೆ ಕಾಲ ಉಸಿರಾಡಲು ಹೆಣಗಾಡಿದ್ದಾನೆ. ಆಗ ಆತನ ಸ್ನೇಹಿತರು ಗಂಟಲಿನಲ್ಲಿ ಸಿಲುಕಿದ್ದ ಮೀನು ತೆಗೆಯಲು ಪ್ರಯತ್ನಿದ್ದಾರೆ. ಬಳಿಕ ಸಾಧ್ಯವಾಗದ ಹಿನ್ನೆಲೆ ಕೂಡಲೇ ಆತನನ್ನು ಹೊಸೂರಿನ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ.

ಆದರೆ, ತಪಾಸಣೆಗೊಳಪಡಿಸಿದ ವೈದ್ಯರು ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಸತ್ತ ಮೀನನ್ನು ಆತನ ಗಂಟಲಿನಿಂದ ಹೊರತೆಗೆಯಲಾಗಿದೆ. ಘಟನೆ ಬಗ್ಗೆ ಮೃತನ ಸ್ನೇಹಿತರನ್ನು ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.