ತಮಿಳುನಾಡು : ಹೊಸೂರು ಬಳಿಯ ಉದುದುರ್ಗಂ ಅರಣ್ಯದಲ್ಲಿ ಗಂಡು ಕಾಡಾನೆಯನ್ನು ನಿಗೂಢವಾಗಿ ಕೊಲ್ಲಲ್ಪಡಲಾಗಿತ್ತು. ದಂತಕ್ಕಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆಯನ್ನು ಕೊಂದು ದಂತವನ್ನು ಕಡಿದು ಪರಾರಿಯಾಗಿದ್ದ ವೆಂಕಟೇಶಪ್ಪನನ್ನು ಬಂಧಿಸಿ, ನಾರಾಯಣಪ್ಪ ಎಂಬ ಮತ್ತೊಬ್ಬ ಆರೋಪಿ ಪತ್ತೆ ಮಾಡುವಲ್ಲಿ ರಾಯಕೋಟೆ ಪೊಲೀಸರು ನಿರತರಾಗಿದ್ದಾರೆ.
ಹೊಸೂರು ಬಳಿಯ ಉದುದುರ್ಗಂ ಕಾಡಿನ ಪಕ್ಕದ ಹೊಲವೊಂದರಲ್ಲಿ 38 ರಿಂದ 40 ವರ್ಷದೊಳಗಿನ ಸಲಗ ನಿನ್ನೆ ಬೆಳಗ್ಗೆ ಶವವಾಗಿ ಪತ್ತೆಯಾಗಿತ್ತು. ಹತ್ತಿರದ ಕವಿಪುರಂ ಗ್ರಾಮಕ್ಕೆ ಸಂಪರ್ಕಿಸುವ ವಿದ್ಯುತ್ ಕಂಬದಿಂದ ಬೇಟೆಗಾರರು ವನ್ಯಜೀವಿಗಳ ಬೇಟೆಯಾಡಲು ತರಕಾರಿ ತೋಟದ ಮರದ ಕೊಂಬೆಗಳಿಗೆ ವಿದ್ಯುತ್ ತಂತಿಗಳನ್ನು ಕಟ್ಟಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಗಂಡು ಕಾಡಾನೆ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಇದೇ ರೀತಿ ಮತ್ತೊಂದು ಎಂಟು ವರ್ಷದ ಆನೆ ಮರಿಯೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇತ್ತೀಚೆಗೆ ವನ್ಯ ಜೀವಿಗಳ ಬೇಟೆಯಾಡುವಲ್ಲಿ ಸುತ್ತಲ ರೈತರು ಹೆಸರು ಮಾಡುತ್ತಿರುವುದು ಕೃಷ್ಣಗಿರಿ ಜಿಲ್ಲೆಯ ಪೊಲೀಸರಿಗೆ ಹಾಗೂ ಅರಣ್ಯಾಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.