ETV Bharat / bharat

ಕೋವಿಡ್​-19 ಪರಿಸ್ಥಿತಿ ಅವಲೋಕಿಸಲು ಸರ್ವಪಕ್ಷ ಸಭೆ ಕರೆದ ಸಿಎಂ ಮಮತಾ ಬ್ಯಾನರ್ಜಿ

author img

By

Published : Jun 24, 2020, 1:34 PM IST

ಪಶ್ಚಿಮ ಬಂಗಾಳ ರಾಜ್ಯದಲ್ಲಿನ ಕೊರೊನಾ ವೈರಸ್ ಪರಿಸ್ಥಿತಿಯನ್ನು ಪರಿಶೀಲಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಕೋಲ್ಕತ್ತಾದಲ್ಲಿ ಸರ್ವಪಕ್ಷ ಸಭೆ ನಡೆಸಿದರು.

Mamata Banerjee
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಗರದಲ್ಲಿ ರಾಜ್ಯದ ಕೋವಿಡ್​​​-19 ಪರಿಸ್ಥಿತಿಯನ್ನು ಪರಿಶೀಲಿಸಲು ಮತ್ತು ಚರ್ಚಿಸಲು ಸರ್ವಪಕ್ಷ ಸಭೆ ನಡೆಸಲಿದ್ದಾರೆ.

ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥರು, ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್​​ -19 ರೋಗಿಗಳಿಗೆ ಹಾಸಿಗೆಗಳ ಲಭ್ಯತೆ ಮತ್ತು ರೋಗಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಹಾಸಿಗೆಗಳನ್ನು ಪ್ರತಿದಿನವೂ ನವೀಕರಿಸಬೇಕಾಗಿದೆ ಎಂದು ಹೇಳಿದರು.

ಮೇ ತಿಂಗಳಲ್ಲಿ ಕೊರೊನಾ ಪಾಸಿಟಿವ್​ ಬಂದಿದ್ದ ಟಿಎಂಸಿ ಶಾಸಕ ತಮೋನಾಶ್ ಘೋಷ್ ಅವರು ಆಸ್ಪತ್ರೆಯಲ್ಲಿ ನಿಧನರಾದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

  • Very, very sad. Tamonash Ghosh, 3-time MLA from Falta & party treasurer since 1998 had to leave us today. Been with us for over 35 years, he was dedicated to the cause of the people & party. He contributed much through his social work. (1/2)

    — Mamata Banerjee (@MamataOfficial) June 24, 2020 " class="align-text-top noRightClick twitterSection" data=" ">

ಶಾಸಕ ತಮೋನಾಶ್​ ಘೋಷ್​ ನಿಧನಕ್ಕೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 1998 ರಿಂದ ಫಾಲ್ಟಾ ಮತ್ತು ಪಕ್ಷದ ಖಜಾಂಚಿಯಾಗಿ 3 ಬಾರಿ ಶಾಸಕರಾಗಿದ್ದರು. ಇಂದು ನಮ್ಮನ್ನು ಅಗಲಿರುವುದು ತೀವ್ರ ನೋವುಂಟಾಗಿದೆ. 35 ವರ್ಷಗಳಿಂದ ನಮ್ಮೊಂದಿಗಿದ್ದರು, ಅವರು ಜನರ ಮತ್ತು ಪಕ್ಷಕ್ಕಾಗಿ ದುಡಿದಿದ್ದರು ಎಂದು ಟ್ವೀಟ್​ ಮಾಡಿದ್ದಾರೆ.

ಶಾಸಕರ ಅಗಲಿಕೆಯ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರಿಗೆ ಮತ್ತು ಅವರ ಅಭಿಮಾನಿಗಳಿಗೆ ಕೊಡಲಿ ಎಂದು ಟ್ವೀಟ್​ ಮಾಡಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಒಟ್ಟು 14,358 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ 569 ಜನ ಬಲಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.